ಕಾಸರಗೋಡು: ಲಾಕ್ ಡೌನ್ ಆದೇಶ ಜಾರಿಗೊಂಡಿರುವ ಹಿನ್ನೆಲೆಯಲ್ಲಿ ಏಕಾಂಗಿಯಾಗಿರುವ ರೋಗಿಗಳಿಗೆ ಸೇವೆ ಒದಗಿಸುವಲ್ಲಿ ಕಾಸರಗೋಡು ಜಿಲ್ಲೆಯ ಅಗ್ನಿ ಶಾಮಕದಳ ಸಕ್ರಿಯವಾಗಿದೆ.
ರಾಜ್ಯದ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದ ಮಂದಿಗೆ ಜೀವ ರಕ್ಷಣೆ ಔಷಧ ಸಂಗ್ರಹ ಮತ್ತು ವಿತರಣೆ ಅಗ್ನಿ ಶಾಮಕದಳ ನಡೆಸುತ್ತಿದ್ದು, ಇದರ ಅಂಗವಾಗಿ ಜಿಲ್ಲೆಯಲ್ಲೂ ದಳದ ಚಟುವಟಿಕೆ ಚುರುಕಿನಿಂದ ನಡೆಯುತ್ತಿದೆ. ಇಡೀ ರಾಜ್ಯದ ಅಗ್ನಿ ಶಾಮಕದಳ ಕಚೇರಿಗಳು ಒಂದು ವಾಟ್ಸ್ ಆ್ಯಪ್ ಗುಂಪಿನೊಂದಿಗೆ ಸಂಪರ್ಕ ಹೊಂದಿದೆ. ಈ ಮೂಲಕ ಮಾಹಿತಿ ಪಡೆದು ಔಷಧ ಸಂಗ್ರಹಿಸಿ,ವಿತರಣೆ ಸ್ಥಳೀಯ ಮಟ್ಟಕ್ಕೆ ತಲಪಿಸಲಾಗುತ್ತಿದೆ. ಕಾಸರಗೋಡು ಜಿಲ್ಲೆಯ ಮಂದಿ ಔಷಧಗಳ ಮಾಹಿತಿಯನ್ನು 73566109129 ಎಂಬ ನಂಬ್ರಕ್ಕೆ ಕಳುಹಿಸಿದರೆ ಅಗ್ನಿಶಾಮಕದಳ ಸಿಬ್ಬಂದಿ ತಲಪಿಸುವರು. ಬಡರೋಗಿಗಳಿಗೆ ಉಚಿತವಾಗಿಯೂ ಔಷಧ ವಿತರಿಸಲಾಗುತ್ತಿದೆ ಎಂದು ಕಾಸರಗೋಡು ಅಗ್ನಿಶಾಮಕ ಸ್ಟೇಷನ್ ಅ„ಕಾರಿ ಕೆ.ಅರುಣ್ ತಿಳಿಸಿದರು.
ಜಿಲ್ಲೆಯ ಸಾರ್ವಜನಿಕ ಪ್ರದೇಶಗಳನ್ನು ರೋಗಾಣು ಮುಕ್ತವಾಗಿಸುವಲ್ಲಿ ಅಗ್ನಿ ಶಾಮಕದಳದ ಸೇವೆ ಸಕ್ರಿಯವಾಗಿದೆ. ಕೋವಿಡ್ ಆಸ್ಪತ್ರೆಗಳು, ಕೋವಿಡ್ ರೋಗಿಗಳ ಮನೆಗಳು, ಅವರು ಸಂದರ್ಶಿಸಿದ ಪ್ರದೆಶಗಳಲ್ಲಿ ರೋಗಾಣು ಮುಕ್ತ ಚಟುವಟಿಕೆ ನಡೆಸಲಾಗುತ್ತಿದೆ. ಲಾಕ್‍ಡೌನ್ ಆದೇಶ ಜಾರಿಗೊಂಡ ಮೊದಲ ಹಂತದಲ್ಲಿ ಏಕಾಂಗಿಯಾಗಿ ಬದುಕುತ್ತಿರುವ ಅಣಂಗೂರು ಪ್ರದೇಶದ ಮಂದಿಗೆ ಅಗ್ನಿಶಾಮಕದಳ ವತಿಯಿಂದ ಭೋಜನ ವಿತರಣೆ ನಡೆಸಲಾಗಿತ್ತು. ಜಿಲ್ಲೆಯ ಕೆಲವು ಪರಿಶಿಷ್ಟ ಪಂಗಡದ ಕಾಲನಿಗಳಲ್ಲಿ ಅರ್ಹರಿಗೆ ಆಹಾರ ಧಾನ್ಯ ಕಿಟ್ ವಿತರಣೆ ನಡೆಸಲಾಗಿತ್ತು.


