HEALTH TIPS

ಲಾಕ್ ಡೌನ್ ನಿಂದ ಸಂಕಷ್ಟದಲ್ಲಿ ಮದ್ಯ ಉದ್ಯಮ: ಆನ್‍ಲೈನ್ ಮಾರಾಟಕ್ಕೆ ಅವಕಾಶ ಕೋರಿ ಸಿಐಬಿಎಸಿ ಕೇಂದ್ರಕ್ಕೆ ಮನವಿ

 
         ನವದೆಹಲಿ: ಲಾಕ್‍ಡೌನ್‍ನಿಂದಾಗಿ ಆರ್ಥಿಕ ಒತ್ತಡ ಮತ್ತು ಉದ್ಯೋಗ ನಷ್ಟವನ್ನು ಎದುರಿಸುತ್ತಿರುವ ಮದ್ಯ ಮಾರಾಟ ಹಾಗೂ ತಯಾರಿಕಾ ಸಂಸ್ಥೆಗಳ ಚೇತರಿಕೆಗಾಗಿ ಆಲ್ಕೋಹಾಲ್ ಯುಕ್ತ ಪಾನೀಯ ಉದ್ಯಮವನ್ನು ಹಂತಹಂತವಾಗಿ ತೆರೆಯಲು ಅನುಮತಿ ನೀಡುವಂತೆ ಮದ್ಯ ಉತ್ಪಾದನಾ ಸಂಘ ಸಿಐಬಿಎಸಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಒತ್ತಾಯಿಸಿದೆ.
       ಕೊರೋನಾ ಬಿಕ್ಕಟ್ಟನ್ನು ನಿಭಾಯಿಸಲು ಲಾಕ್‍ಡೌನ್ ಆದೇಶಿಸಿದಾಗಿನಿಂದ, ಎಲ್ಲಾ ಸಗಟು ಮತ್ತು ಚಿಲ್ಲರೆ ವ್ಯಾಪಾರವನ್ನು ಮುಚ್ಚಲಾಗಿದೆ ಎಂದು ವಾಣಿಜ್ಯ ಸಚಿವರಿಗೆ ಬರೆದ ಪತ್ರದಲ್ಲಿ ಕಾನ್ಫೆಡರೇಶನ್ ಆಫ್ ಇಂಡಿಯನ್ ಆಲ್ಕೋಹಾಲಿಕ್ ಬೆವರೇಜ್ ಕಂಪನೀಸ್(ಸಿಐಎಬಿಸಿ) ತಿಳಿಸಿದೆ. ಕೊರೋನಾ ತಡೆಗಟ್ಟುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಾವು ಆಲ್ಕೊಹಾಲ್ ಯುಕ್ತ ಪಾನೀಯ ಉದ್ಯಮವನ್ನು ಹಂತ ಹಂತವಾಗಿ ತೆರೆಯಲು ಬಯಸುತ್ತೇವೆ" ಎಂದು ಅದು ಹೇಳಿದೆ, ಟ್ರಕ್‍ಗಳು ಸಿಕ್ಕಿಕೊಂಡಿವೆ, ವಿತರಣಾ ಗೋದಾಮುಗಳು ಲಾಕ್ ಆಗಿವೆ ಮತ್ತು ಚಿಲ್ಲರೆ ಅಂಗಡಿಗಳಲ್ಲಿ  ಸ್ಟಾಕ್ ಮಾರಾಟವಾಗದೆ ಉಳಿದಿದೆ."ವಿವಿಧ ತೆರಿಗೆಗಳ ಮೂಲಕ ಸುಮಾರು 2 ಲಕ್ಷ ಕೋಟಿ ರೂ. ಸಂಗ್ರಹ ನಷ್ಟವಾಗಿದೆ.ಸುಮಾರು 40 ಲಕ್ಷ ರೈತರ ಜೀವನೋಪಾಯ ಕಠಿಣವಾಗಿದೆ.  ಸುಮಾರು 20 ಲಕ್ಷ ಜನರನ್ನು ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗದಲ್ಲಿರಿಸಿಕೊಂಡಿರುವ ಉದ್ಯಮವು ತೀವ್ರ ಸಂಕಷ್ಟದಲ್ಲಿದೆ" ಎಂದು ಸಿಐಎಬಿಸಿ ಮಹಾನಿರ್ದೇಶಕ ವಿನೋದ್ ಗಿರಿ ಹೇಳಿದರು. ಅಬಕಾರಿ ವರ್ಷವನ್ನು ಗೆ ಮೂರು ತಿಂಗಳವರೆಗೆ (ಜೂನ್ 30 ರವರೆ)ವಿಸ್ತರಿಸಬೇಕು ಮತ್ತು ಆನ್‍ಲೈನ್ ಮದ್ಯ ಮಾರಾಟವನ್ನು ಉತ್ತೇಜಿಸಬೇಕು ಎಂದು ಅವರು ಕೋರಿದ್ದಾರೆ.
       ಆಲ್ಕೋಹಾಲ್ ಯುಕ್ತ ಉದ್ಯಮ ಸಂಕಷ್ಟದಲ್ಲಿದೆ. ಮಾರ್ಚ್ 31 ರಂದು ಅನೇಕ ರಾಜ್ಯಗಳ ಅಬಕಾರಿ ನೀತಿಯು ಕೊನೆಗೊಳ್ಳುತ್ತದೆ. ಆ ದಿನಾಂಕದ ಮೊದಲು, ಹಲವಾರು ಶಾಸನಬದ್ಧ ಅವಶ್ಯಕತೆಗಳಿದ್ದು ಅದಕ್ಕಾಗಿ ಉದ್ಯಮ ಸಕ್ರಿಯವಾಗಿರುವುದು ಅಗತ್ಯ ಎಂದು ಅವರು ಹೇಳಿದ್ದಾರೆ.ಉದ್ಯಮವನ್ನು ದೀರ್ಘಕಾಲದವರೆಗೆ ಸ್ಥಗಿತಗೊಳಿಸುವುದರಿಂದ ಕಂಪೆನಿಗಳ ಮೇಲೆ ಭಾರಿ ಆರ್ಥಿಕ ಹೊರೆ ಬೀಳುವುದಿಲ್ಲ ಆದರೆ ಲಕ್ಷಾಂತರ ಕಾರ್ಮಿಕರನ್ನು ನಿರುದ್ಯೋಗಕ್ಕೆ ದೂಡಿದಂತಾಗಲಿದೆ.ಆನ್‍ಲೈನ್ ಅರ್ಜಿಗಳ ಮೂಲಕ ಮನೆ ಬಾಗಿಲಿಗೆ ಮದ್ಯ ವಿತರಣೆಗೆ  ಸೇರ್ಪಡೆಗೊಳ್ಳಲು ಅಂಗಡಿಗಳನ್ನು ಕೇಳಬೇಕು. ಸರ್ಕಾರವು ಶುಲ್ಕ ವಿಧಿಸಬಹುದು, ಇದು ಪರವಾನಗಿಗೆ ಹೆಚ್ಚುವರಿಯಾಗಿರುತ್ತದೆ. ಪ್ರತಿ ಅರ್ಹಅಂಗಡಿಗೆ ಮನೆ ವಿತರಣಾ ಸಿಬ್ಬಂದಿಗೆ 3-4 ಚಾಲನಾ ಪಾಸ್ ನೀಡಬೇಕು."ಗ್ರಾಹಕರು ಆನ್‍ಲೈನ್ ಮೂಲಕ ಆರ್ಡರ್ ನೀಡಬಹುದು, ಜೊತೆಗೆ ಐಡಿ ಪ್ರೂಫ್ ವಯಸ್ಸಿನ ದೃಡೀಕರಣ ನೀಡಿ ಮದ್ಯ ಪಡೆದುಕೊಳ್ಳಲು ಅನುವು ಮಾಡಬೇಕು"ಅವರು ಹೇಳಿದರು.
       ಸಾಮಾಜಿಕ ಅಂತರ ಎನ್ನುವುದು ಹೊಸ ಸಂಗತಿಯಾಗಿದ್ದು ಆನ್‍ಲೈನ್‍ನಲ್ಲಿ ಮನೆಗೆ ಮದ್ಯ ಪೂರೈಕೆಯನ್ನು  ಪ್ರತ್ಯೇಕ ಚಾನಲ್‍ನಂತೆ ಸರ್ಕಾರ ಪರಿಗಣಿಸಬೇಕು ಎಂದು ಹೇಳಲಾಗಿದೆ."ಮನೆ ವಿತರಣೆಗೆ ಅನುಕೂಲವಾಗುವಂತೆ ಸರ್ಕಾರಗಳು ತಮ್ಮದೇ ಆದ ಪೆÇೀರ್ಟಲ್‍ಗಳನ್ನು ಸ್ಥಾಪಿಸುವುದನ್ನು ಸಹ ಪರಿಗಣಿಸಬಹುದು. ಹಾಗೆ ಮಾಡಲು ಆಹಾರ ವಿತರಣಾ ಲಿಂಕ್ ನೊಂದಿಗೆ ಇದನ್ನು ಸೇರ್ಪಡಿಸಬಹುದು" ಎಂದು ಅವರು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries