HEALTH TIPS

ಲಾಕ್‍ಡೌನ್ ಮುಗಿಯುವವರೆಗೆ ಸಲೂನ್, ಹೇರ್ ಕಟಿಂಗ್ ಶಾಪ್ ಓಪನ್ ಆಗಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

 
          ನವದೆಹಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಶನಿವಾರ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾಗ ಕೆಲವು ಗೊಂದಲಗಳಿದ್ದು ಇದಕ್ಕೀಗ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಸ್ಪಷ್ತನೆ ನೀಡಿದೆ.
       ಸಲೂನ್ ಗಳು,  ಪಾರ್ಲರ್‍ಗಳು ಮತ್ತು ಕ್ಷೌರಿಕನ ಅಂಗಡಿ (ಕಟಿಂಗ್ ಶಾಪ್)  ಗಳಿಗೆ ಕೆಲಸ ಮಾಡಲು ಈ ಮಾರ್ಗಸೂಚಿ ಅಬ್ವಕಾಶ ಕಲ್ಪಿಸುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಇದೀಗ ಅದು ಸಾಧ್ಯವಿಲ್ಲ ಎಂದು ತಿಳಿದುಬಂದಿದೆ.
      ಹೊಸ ಮಾರ್ಗಸೂಚಿಗೆ ನೀಡಿದ್ದ ಸ್ಪಷ್ಟನೆಯಲ್ಲಿ ಸರ್ಕಾರ "ಹೇರ್ ಸಲೊನ್ಸ್ ಮತ್ತು ಕಟಿಂಗ್ ಶಾಪ್ ಗಳು ಮೇ 3ರವರೆಗೆ ತೆರೆಯುವುದಿಲ್ಲ. ನಮ್ಮ ಈ ಹಿಂದಿನ ಆದೇಶವು  ವಸ್ತುಗಳ ಮಾರಾಟ ನಡೆಸುವ ಅಂಗಡಿಗಳಿಗಷ್ಟೇ ಅನ್ವಯವಾಗಲಿದೆ. ಕಟಿಂಗ್ ಶಾಪ್ ಹಾಗೂ ಹೇರ್ ಸಲೂನ್ಗಳನ್ನು ತೆರೆಯಲು ಯಾವುದೇ ಅನುಮತಿಯಿಲ್ಲ.ಜೊತೆಗೆ  ಮದ್ಯದಂಗಡಿಗಳನ್ನು ತೆರೆಯಲು ಸಹ ಅನುಮತಿಯಿಲ್ಲ"  ಎಂದಿದೆ.
           ಗೃಹ ವ್ಯವಹಾರಗಳ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲ್ಶ್ರೀವಾಸ್ತವ ಈ ಕುರಿತು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries