ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ ಮತ್ತೆ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಒಟ್ಟಾರೆ ಕೇರಳದಲ್ಲಿ ಒಂಬತ್ತು ಮಂದಿಗೆ ಸೋಂಕು ಖಚಿತವಾಗಿದೆ. ಇದೇ ವೇಳೆ ಕೇರಳದಾದ್ಯಂತ 13 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.
ಕಣ್ಣೂರು ಜಿಲ್ಲೆಯಲ್ಲಿ 4, ಆಲಪ್ಪುಳ ಜಿಲ್ಲೆಯಲ್ಲಿ 2, ಕಾಸರಗೋಡು, ತೃಶ್ಶೂರು, ಪತ್ತನಂತಿಟ್ಟದಲ್ಲಿ ತಲಾ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಇವರಲ್ಲಿ ನಾಲ್ವರು ವಿದೇಶದಿಂದ ಬಂದವರು. ಇಬ್ಬರು ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿದವರು. ಮೂರು ಮಂದಿಗೆ ಕೊರೊನಾ ವೈರಸ್ ಸೋಂಕಿತರೊಂದಿಗಿನ ಸಂಪರ್ಕದಿಂದ ರೋಗ ಹರಡಿದೆ. ಬುಧವಾರ ರಾಜ್ಯದಾದ್ಯಂತವಾಗಿ 169 ಮಂದಿಯನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ರಾಜ್ಯದಲ್ಲಿ ಈ ವರೆಗೆ ಒಟ್ಟು 345 ಮಂದಿಗೆ ರೋಗ ದೃಢೀಕರಿಸಲಾಗಿದೆ. ಪ್ರಸ್ತುತ ಆಸ್ಪತ್ರೆಗಳಲ್ಲಿ 259 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 84 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಸಾವಿಗೀಡಾಗಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟಾಗಿ 153 ಮಂದಿಗೆ ಕೊರೊನಾ ವೈರಸ್ ಸೋಂಕು ಖಚಿತವಾಗಿದೆ. ಜಿಲ್ಲೆಯಲ್ಲಿ 10563 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 10368 ಮಂದಿ ಮನೆಗಳಲ್ಲೂ, 195 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಈ ವರೆಗೆ 1384 ಸ್ಯಾಂಪಲ್‍ಗಳನ್ನು ತಪಾಸಣೆಗೆ ರವಾನಿಸಲಾಗಿದೆ. ಈ ವರೆಗೆ 1001 ಸ್ಯಾಂಪಲ್‍ಗಳ ಫಲಿತಾಂಶ ಲಭಿಸಿದೆ. 383 ಮಂದಿಯ ಫಲಿತಾಂಶ ಲಭಿಸಬೇಕಿದೆ. ನೂತನವಾಗಿ 35 ಮಂದಿಯನ್ನು ಐಸೊಲೇಷನ್ ವಾರ್ಡ್‍ಗಳಿಗೆ ರವಾನಿಸಲಾಗಿದೆ.
ಕೇರಳದಿಂದ ನಿಜಾಮುದ್ದೀನ್ ಸಮ್ಮೇಳನದಲ್ಲಿ ಭಾಗವಹಿಸಿದ 212 ಮಂದಿಯಲ್ಲಿ 15 ಮಂದಿಗೆ ರೋಗ ದೃಢೀಕರಿಸಲಾಗಿದೆ. ರಾಜ್ಯದಲ್ಲಿ ಒಟ್ಟು 1,40,474 ಮಂದಿ ನಿಗಾದಲ್ಲಿದ್ದಾರೆ. ಅವರಲ್ಲಿ 1,39,725 ಮಂದಿ ಮನೆಗಳಲ್ಲೂ, 749 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಒಟ್ಟು 11986 ಸ್ಯಾಂಪಲ್‍ಗಳನ್ನು ಪರಿಶೀಲನೆಗೆ ಕಳುಹಿಸಲಾಗಿದ್ದು, ಅವುಗಳ ಪೈಕಿ 10,906 ನೆಗೆಟಿವ್ ಫಲಿತಾಂಶ ಬಂದಿದೆ.
ಮಾಸ್ಕ್, ಗ್ಲೌಸ್ ಮೊದಲಾದವುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮುನ್ನೆಚ್ಚರಿಕೆ ನೀಡಿದ್ದಾರೆ.
ಅಮೆರಿಕ ಸಹಿತ ವಿವಿಧ ದೇಶಗಳಲ್ಲಿ ಕೇರಳೀಯರು ಕೊರೊನಾ ವೈರಸ್ ಸೋಂಕಿನಿಂದ ಸಾವಿಗೀಡಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿವಾಸಿ ಭಾರತೀಯರಿಗಾಗಿ ನೋರ್ಕಾ ನೇತೃತ್ವದಲ್ಲಿ ಐದು ಕೊರೊನಾ ಹೆಲ್ಪ್ ಡೆಸ್ಕ್ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
69 ಕೇಸು ದಾಖಲು : ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 69 ಕೇಸು ದಾಖಲಿಸಲಾಗಿದೆ. 130 ಮಂದಿಯನ್ನು ಬಂ„ಸಲಾಗಿದೆ. 32 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 6, ಕುಂಬಳೆ 2, ಕಾಸರಗೋಡು 1, ವಿದ್ಯಾನಗರ 3, ಬದಿಯಡ್ಕ 5, ಆದೂರು 1, ಬೇಡಗಂ 2, ಮೇಲ್ಪರಂಬ 11, ಬೇಕಲ 5, ಅಂಬಲತ್ತರ 1, ಹೊಸದುರ್ಗ 2, ನೀಲೇಶ್ವರ 5, ಚಂದೇರ 9, ಚೀಮೇನಿ 2, ಚಿತ್ತಾರಿಕಲ್ 7, ರಾಜಪುರಂ 5 ಕೇಸುಗಳನ್ನು ದಾಖಲಿಸಲಾಗಿದೆ. ಈ ವರೆಗೆ ಜಿಲ್ಲೆಯಲ್ಲಿ 543 ಕೇಸುಗಳನ್ನು ದಾಖಲಿಸಲಾಗಿದೆ. 838 ಮಂದಿಯನ್ನು ಬಂಧಿಸಲಾಗಿದೆ. 352 ವಾಹನಗಳನ್ನು ವಶಪಡಿಸಲಾಗಿದೆ.
ಹೆಚ್ಚು ಆಹಾರ ಧಾನ್ಯ ವಿತರಣೆ : ಕೋವಿಡ್ 19 ಹಿನ್ನೆಲೆಯಲ್ಲಿ ಎ.ಎ.ವೈ. ಮತ್ತು ಆದ್ಯತೆ ಪಡಿತರ ಕಾರ್ಡ್ ಹೊಂದಿರುವವರಿಗೆ ಹೆಚ್ಚುವರಿ ಆಹಾರ ಧಾನ್ಯಗಳನ್ನು ವಿತರಿಸುವುದಾಗಿ ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ. ಕೇಂದ್ರ ಸರಕಾರದಿಂದ ಲಭಿಸುವ ಅ„ಕ ಪಾಲು ಎ.21ರಿಂದ ಎ.ಎ.ವೈ. ಆದ್ಯತೆ ಪಡಿತರ ಚೀಟಿಯ ಮಂದಿಗೆ ಒಬ್ಬ ಸದಸ್ಯನಿಗೆ ತಲಾ 5 ಕಿಲೋ ಅಕ್ಕಿಯಂತೆ ವಿತರಣೆ ನಡೆಸಲಾಗುವುದು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಘೋಷಿಸಿದ 17 ಧಾನ್ಯಗಳು ಹೊಂದಿರುವ ಒಂದು ಸಾವಿರ ರೂ. ಮೌಲ್ಯದ ಉಚಿತ ಬಹುಧಾನ್ಯ ಕಿಟ್ ಮೊದಲ ಹಂತದಲ್ಲಿ ಅಂತ್ಯೋದಯ ವಿಭಾಗದ ಕುಟುಂಬಗಳಿಗೆ ಎ.9ರಿಂದ ಪಡಿತರ ಅಂಗಡಿಗಳಲ್ಲಿ ವಿತರಣೆ ನಡೆಸಲಾಗುವುದು ಎಂದು ಅವರು ಹೇಳಿದರು.
ಸಂಸದರ ಅಭಿವೃದ್ಧಿ ನಿಧಿ ಮೊಟಕು ಪುನರ್ ಪರಿಶೀಲಸಬೇಕು :
ಸಂಸದರ ಅಭಿವೃದ್ಧಿ ನಿಧಿಯನ್ನು 2 ವರ್ಷಗಳ ಮಟ್ಟಿಗೆ ಮೊಟಕುಗೊಳಿಸಿರುವ ಕೇಂದ್ರ ಸರಕಾರದ ತೀರ್ಮಾನ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗ್ರಹಿಸಿದ್ದಾರೆ. ಸಂಸದರ ನಿಧಿ ಎಂಬುದು ಲೋಕಸಭಾ ಕ್ಷೇತ್ರದ ಜನತೆಯ ಅಭಿವೃದ್ಧಿಗಿರುವ ಹಕ್ಕಾಗಿದೆ. ಹೀಗಾಗಿ ಕೇಂದ್ರ ಸರಕಾರದ ಈ ತೀರ್ಮಾನ ನ್ಯಾಯಯುತ ವಾದುದಲ್ಲ. ಈ ಹಂತದಲ್ಲಿ ಸಂಸದರ ನಿ„ಯನ್ನು ಪೂರ್ಣ ರೂಪದಲ್ಲಿ ಕೋವಿಡ್ 19 ಸೋಂಕು ಪ್ರತಿರೋಧ ಚಟುವಟಿಕೆಗಳಿಗೆ ಮತ್ತು ಚಿಕಿತ್ಸಾ ಸೌಲಭ್ಯಗಳಿಗೆ ರಾಜ್ಯ ಮಟ್ಟದಲ್ಲಿ ಬಳಸುವಂತೆ ಆದೇಶ ನೀಡಬೇಕಿರುವುದು ಕೇಂದ್ರ ಸರಕಾರದ ಕರ್ತವ್ಯ. 2 ವರ್ಷದ ಮಟ್ಟಿಗೆ ಸಂಸದರ ನಿ„ ಮಂಜೂರು ಮೊಟಕುಗೊಳಿಸಿದ ತೀರ್ಮಾನ ಸ್ಥಳೀಯ ಮಟ್ಟದ ಅಭಿವೃದ್ಧಿಗೆ ನೇರವಾಗಿ ತೊಡಕಾಗಲಿದೆ ಎಂದರು. ಆರ್ಥಿಕ ಸಂಗ್ರಹದ ಅಂಗವಾಗಿ ಪ್ರಧಾನ ಮಂತ್ರಿ, ಕೇಂದ್ರ ಸಚಿವರು, ಸಂಸದರು ಮೊದಲಾದವರ ವೇತನದ ಪ್ರಮಾಣದಲ್ಲಿ ಕಡಿತಗೊಳಿಸಿರುವ ತೀರ್ಮಾನ ಅಭಿನಂದನಾರ್ಹ ಎಂದು ಮುಖ್ಯಮಂತ್ರಿ ಹೇಳಿದರು.
ಸಿಬ್ಬಂದಿ ನೇಮಕ : ಉಕ್ಕಿನಡ್ಕದ ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ 273 ಹುದ್ದೆಗಳಿಗೆ ನೇಮಕಾತಿ ನಡೆಸಲು ಸಚಿವ ಸಂಪುಟ ಮಂಜೂರಾತಿ ನೀಡಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿಳಿಸಿದ್ದಾರೆ. ಕಾಸರಗೋಡು ಮೆಡಿಕಲ್ ಕಾಲೇಜಿನ ಕೋವಿಡ್ ಆಸ್ಪತ್ರೆಯಲ್ಲಿ 8 ಮಂದಿ ರೋಗಿಗಳನ್ನು ದಾಖಲು ಮಾಡಲಾಗಿದೆ.


