ಕಾಸರಗೋಡು: ಕೋವಿಡ್ 19 ಪ್ರತಿರೋಧ ಅಂಗವಾಗಿ ಜಿಲ್ಲೆಯಲ್ಲಿ ನಡೆಸಲಾದ ಕ್ರಿಯಾ ದಾಖಲೆಗಳ ಪ್ರಕಟಣೆ ಗುರುವಾರ ಜರುಗಿತು.
ಜಿಲ್ಲಾಡಳಿತೆ, ಆರೋಗ್ಯ ಇಲಾಖೆ, ಪೆÇಲೀಸ್ ಇಲಾಖೆ, ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ನಡೆದ ಚಟುವಟಿಕೆಗಳ ಕ್ರಿಯಾ ದಾಖಲೆ ಬಿಡುಗಡೆಗೊಂಡಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೋರ್ ಸಮಿತಿ ಸಭೆಯಲ್ಲಿ ಈ ದಾಖಲೆಯ ಬಿಡುಗಡೆ ಜರುಗಿತು. ಜಿಲ್ಲಾ ಸರ್ವೆಲೆನ್ಸ್ ಅಧಿಕರಿ ಡಾ.ಎ.ಟಿ.ಮನೋಜ್ ಅವರು ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅವರಿಗೆ ಹಸ್ತಾಂತರಿಸುವ ಮೂಲಕ ಕ್ರಿಯಾ ದಾಖಲೆ ಬಿಡುಗಡೆಗೊಳಿಸಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
2020 ಫೆ.3ರಂದು ಜಿಲ್ಲೆಯಲ್ಲಿ ಮೊದಲ ಕೋವಿಡ್ ರೋಗ ಖಚಿತ ಪ್ರಕರಣ ನಂತರ ಈ ವರೆಗೆ ಕೇಂದ್ರ ಆರೋಗ್ಯ ಮಂತ್ರಾಲಯ ಮೂಲಕ ಪ್ರಶಸಂಸೆ ಗಿಟ್ಟಿಸಿದ ಚಟುವಟಿಕೆಗಳ ಸಮಗ್ರ ಮಾಹಿತಿ ಇಲ್ಲಿದೆ.

