ಮಂಜೇಶ್ವರ: ಮೋಟಾರು ವಾಹನ ಇಲಾಖೆಯ ಕಾಸರಗೋಡು ಆರ್.ಟಿ.ಒ. ವಿಭಾಗ ಮತ್ತು ಪಯ್ಯನ್ನೂರು ರಾಟರಿ ಕ್ಲಬ್ ರಾಜ್ಯದ ಗಡಿಪ್ರದೇಶ ಮಂಜೇಶ್ವರದಲ್ಲಿ ವಾಹನಗಳನ್ನು ರೋಗಾಣು ಮುಕ್ತವಾಗಿಸುವ ಸೌಲಭ್ಯ ಆರಂಭಿಸಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಗುರುವಾರ ಉದ್ಘಾಟಿಸಿದರು. ರಸ್ತೆ ಸಾರಿಗೆ ಅಧಿಕಾರಿ ಎಸ್.ಮನೋಜ್, ಎನ್ ಫೆÇೀರ್ಸ್ ಮೆಂಟ್ ಆರ್.ಟಿ.ಒ. ಮೋಹನದಾಸ್, ಮೋಟಾರು ವೆಹಿಕಲ್ ಇನ್ಸ್ ಪೆಕ್ಟರ್ ವೈಕುಂಠನ್, ಪಯ್ಯನ್ನೂರು ರಾಟರಿ ಕ್ಲಬ್ ಅಧ್ಯಕ್ಷ ನರೇಂದ್ರ ಶೆಣೈ ಮೊದಲಾದವರು ಉಪಸ್ಥಿತರಿದ್ದರು.


