ಮುಳ್ಳೇರಿಯ: ಕೃಷಿಕರೊಬ್ಬರು ಮುಖ್ಯಮಂತ್ರಿ ದುರಂತ ನಿವಾರಣೆ ನಿಧಿಗೆ 3 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.
ದೇಲಂಪಾಡಿ ಗ್ರಾಮಪಂಚಾಯತ್ ನ ಅಡೂರು ಗ್ರಾಮದ ಮಳಕ್ಕಿಲ ನಿವಾಸಿ ಎ.ಬಿ. ಅಹಮ್ಮದ್ ಆಲಿ ಈ ರೀತಿ ಕೋಡುಗೆ ನೀಡಿದವರು. ಆಲಿ ಅವರ ವಿನಂತಿಯ ಮೇರೆಗೆ ಅಡೂರು ಗ್ರಮಾಧಿಕಾರಿ ಬಿಂದು ಅವರು ಆಲಿ ಅವರ ಮನೆಗೆ ತೆರಳಿ ಚೆಕ್ ಪಡೆದುಕೊಂಡರು.
ಸಾರ್ವಜನಿಕರ ನಡುವೆ ಆಲಿಚ್ಚ ಎಂಬ ಹೆಸರಿನಿಂದ ಖ್ಯಾತರಾಗಿರುವ ಎ.ಬಿ.ಅಹಮ್ಮದ್ ಆಲಿ ಅವರು ಅಡೂರು ಗ್ರಾಮದ ಹಿರಿಯ ಕೃಷಿಕರಲ್ಲಿ ಒಬ್ಬರು. ರಬ್ಬರ್,ಅಡಕೆ, ತೆಂಗು, ಕೊಕ್ಕೊ ಇತ್ಯದಿಗಳು ಇವರ ಪ್ರಧಾನ ಕೃಷಿ. ಪತ್ನಿ,ಮಕ್ಕಳೊಂದಿಗೆ ಸಂತೋಷದ ಬದುಕು ಸವೆಸುತ್ತಿರುವ ಇವರು ರಾಜ್ಯ ಸರಕಾರ ನಡೆಸುತ್ತಿರುವ ಕೋವಿಡ್ 19 ಪ್ರತಿರೋಧ ಚಟುವಟಿಕೆಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಕೊಡುಗೆ ನೀಡಿರುವುದಾಗಿ ಈ ಸಂದರ್ಭ ತಿಳಿಸಿದರು. ಇವರ ಕೊಡುಗೆ ನಾಡಿಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.


