ಕಾಸರಗೋಡು: ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸಂಕಷ್ಟ ಅನುಭವಿಸುತ್ತಿರುವ ಎಲ್ಲ ವಲಯಗಳಂತೆ ಕೃಷಿ ಕ್ಷೇತ್ರವೂ ಅನುಭವಿಸುತ್ತಿರುವ ದುರಿತಗಳಿಂದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೃಷಿ ಇಲಾಖೆ ಸಕ್ರಿಯವಾಗಿ ರಂಗದಲ್ಲಿದೆ. ಜಿಲ್ಲೆಯಲ್ಲಿ ಭತ್ತ, ತರಕಾರಿ, ಹಣ್ಣುಗಳು ಇತ್ಯಾದಿಗಳ ಕೊಯ್ಲು, ಸಂಗ್ರಹ ಮತ್ತು ವಿತರಣೆ ವಲಯಗಳಲ್ಲಿ ಕೃಷಿಕರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಪರಿಹರಿಸಲು ಇಲ್ಲಿ ಯತ್ನಿಸಲಾಗುತ್ತಿದೆ.
ಕುಂಬಳೆ ಗ್ರಾಮಪಂಚಾಯಿತಿಯ ಕಿದೂರು, ಮಧೂರು ಗ್ರಾಮಪಂಚಾಯಿತಿ, ನೀಲೇಶ್ವರ, ಮಡಿಕೈ ಗ್ರಾಮ ಪಂಚಾಯಿತಿಯ ಆಲಾಯಿ, ಕುಂಡೇಯನ್ವಯಲ್, ರಾಕೋಲ್ ಪ್ರದೇಶಗಳ ಭತ್ತದಕೊಯ್ಲು ಸಮಸ್ಯೆಗಳನ್ನು ಪರಿಹರಿಸಲಾಗಿದೆ. ತರಕಾರಿ, ಹಣ್ಣುಗಳ ಸಂಗ್ರಹ ಮತ್ತು ವಿತರಣೆ ನಿಟ್ಟಿನಲ್ಲಿ ಕಾಸರಗೋಡು ಕೃಷಿ ಇಲಾಖೆ ವ್ಯಾಪ್ತಿಯ 19 ಮಾರ್ಕೆಟ್‍ಗಳನ್ನು (ಇಕೋ ಶಾಪ್ ಗಳು, ಬಿ.ಎಲ್.ಎಫ್.ಒ. ಮಾರ್ಕೆಟ್ ಗಳು, ವೀಕ್ಲಿ ಮಾರ್ಕೆಟ್ ಗಳು, ಎ ಗ್ರೇಡ್ ಕ್ಲಸ್ಟರ್ ಮರ್ಕೆಟ್ ಗಳುಇತ್ಯಾದಿ) ತೆರೆದು ಕಾರ್ಯಾಚರಿಸಲಾಗುತ್ತಿದೆ. ಈ ಮೂಲಕ ಪ್ರತಿದಿನ 2 ಟನ್ ತರಕಾರಿ ಮತ್ತು ಹಣ್ಣುಗಳನ್ನು ಸಂಗ್ರಹಿಸಿ, ವಿತರಿಸಲಾಗುತ್ತಿದೆ.ಅನನಾಸು ಸಂಗ್ರಹ ಮತ್ತು ವಿತರಣೆ ಸಂಬಂಧ ಬಳಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 30 ಟನ್ ಅನಾನಸು ಸಂಗ್ರಹಿಸಿ ವಿತರಿಸಲಾಗಿದೆ. ರಖಂ ವ್ಯಾಪಾರಿಗಳೊಂದಿಗೆ ವಾಟ್ಸ್ ಆಪ್ ಗುಂಪು ರಚಿಸಿ ತರಕಾರಿ, ಹಣ್ಣುಸಂಗ್ರಹಿಸಿ, ವಿತರಣೆ ನಡೆಸಲಾಗುತ್ತಿದೆ.ಲಾಕ್ ಡೌನ್ ಅವಧೊಯಲ್ಲಿ ಜೀವನಿ ಯೋಜನೆ ಮೂಲಕ ಜಿಲ್ಲೆಯಲ್ಲಿ 32716 ತರಕಾರಿ ಬೀಜಗಳು, 9 ಲಕ್ಷತರಕಾರಿ ಸಸಿಗಳು 35140 ೀರ್ಘಾವಧಿ ಬಾಳುವ ತರಕಾರಿ ಸಸಿಗಳು ವಿತರಣೆಗೆ ಸಿದ್ಧವಾಗಿವೆ. ಇವುಗಳಲ್ಲಿ 21847 ತರಕಾರಿಬೀಜಗಳು, 21000 ತರಕರಿ ಸಸಿಗಳು, 7585 ದೀರ್ಘಾವಧಿ ತರಕಾರಿ ಸಸಿಗಳು ವಿತರಣೆ ಗೊಂಡಿವೆ.
ಅಭಿಮತ:
ರಾಜ್ಯ ಸರ್ಕಾರದ ಜನಪರ ಯೋಜನೆ ಸಮುದಾಯ ಅಡುಗೆಮನೆಯಲ್ಲಿ ಕೃಷಿ ಇಲಾಖೆಯೂ ಸಕ್ರಿಯವಾಗಿದೆ. ತೆಂಗಿನ ಕಾಯಿ ಸಹಿತ ಸ್ಥಳೀಯ ತರಕಾರಿಗಳನ್ನು ಸಂಗ್ರಹಿಸಿ ಇಲ್ಲಿ ವಿತರಿಸಲಾಗುತ್ತಿದೆ. ಇದರಲ್ಲಿ ಶೇ 80 ಕೂಡ ಉಚಿತವಾಗಿನಡೆಯುತ್ತಿದೆ. ಜಿಲ್ಲೆಯ 8942 ಕೃಷಿಕರಿಗಾಗಿ ಅಕ್ಟೋಬರ್, ನವೆಂಬರ್ ತಿಂಗಳ ಪಿಂಚಣಿ ರೂಪದಲ್ಲಿ 21460800 ರೂ.ವಿತರಿಸಲಾಗಿದೆ. ಡಿಸೆಂಬರ್ ನಿಂದ ಏಪ್ರಿಲ್ವರೆಗಿನ ಪಿಂಚಣಿ ಶೀಘ್ರದಲ್ಲೇ ವಿತರಿಸಲಾಗುವುದು. ಕೋವಿಡ್ 19 ಪ್ರತಿರೋಧ,ಸಮಸ್ಯೆ ಪರಿಹಾರ ಪ್ರಕ್ರಿಯೆಯಲ್ಲಿ ಕೃಷಿ ಇಲಾಖೆಸಕ್ರಿಯವಾಗಿದೆ.
ಕೆ.ಸಜಿನಿ ಮೋಳ್, ಪ್ರಧಾನ ಕೃಷಿ ಅಧಿಕಾರಿ
ಕಾಸರಗೋಡು

