ಕಾಸರಗೋಡು: ಕೋವಿಡ್ 19 ಸೋಂಕು ನಿಯಂತ್ರಣ ಉದ್ದೇಶದಿಂದ ಜಿಲ್ಲಾಡಳಿತೆ ರಚಿಸಿರುವ ಕ್ರಿಯಾ ಯೋಜನೆ ಕೇರ್ ಫಾರ್ ಕಾಸರಗೋಡು ಇದರ ರೂಪುರೇಷೆ ಮತ್ತು ಯೋಜನೆಯ ಲಾಂಛನ ಬಿಡುಗಡೆ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಜರುಗಿತು.
ವಿಶೇಷ ಅಧಿಕಾರಿ ಅಲ್ಕೇಷ್ ಕುಮಾರ್ ಶರ್ಮ ಮತ್ತು ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ಬಿಡುಗಡೆಗೊಳಿಸಿದರು. ಉಪ ಜಿಲ್ಲಾ„ಕಾರಿ ಅರುಣ್ ಕೆ.ವಿಜಯನ್, ಹೆಚ್ಚುವರಿ ದಂಡನಾ„ಕಾರಿ ಎನ್.ದೇವದಾಸ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ವಿವಿಧ ಇಲಾಖೆ ಮುಖ್ಯಸ್ಥರು ಉಪಸ್ಥಿತರಿದ್ದರು.


