ಕಣ್ಣೂರು: ಕೋವಿಡ್ ಹಿನ್ನೆಲೆಯ ಗಡಿ ನಿಯಂತ್ರಣದ ತಡೆಗಳು ಕಾಸರಗೋಡು ಮಂಗಳೂರು ಗಡಿ ಪ್ರದೇಶದಲ್ಲಿ ಮಾತ್ರವಲ್ಲದೆ ಇತರ ಗಡಿ ಪ್ರದೇಶಗಳಲ್ಲೂ ಕಠಿಣ ಕಾನೂನುಗಳೊಂದಿಗೆ ಮುಂದುವರಿದಿದ್ದು ಕೆಲವೊಮ್ಮೆ ಮಾನವೀಯ ಮುಖವನ್ನು ಮರೆತಿರುವಂತೆ ಕಂಡುಬರುತ್ತಿದೆ.
ಬೆಂಗಳೂರಿನಿಂದ ವಯನಾಡ್ ದಾರಿಯಾಗಿ ಕಾಸರಗೋಡಿನ ಸಮೀಪದ ಕಣ್ಣೂರಿಗೆ ಸೋಮವಾರ ತಡ ರಾತ್ರಿ ಬರಲು ಯತ್ನಿಸಿದ ತುಂಬು ಗರ್ಭಿಣಿಯನ್ನು ಅಧಿಕೃತರು ಕೇರಳ ಪ್ರವೇಶಿಸಲು ತಯಾರಾಗದ ಘಟನೆ ನಡೆದಿದೆ. ಒಂಭತ್ತು ತಿಂಗಳು ತುಂಬು ಗರ್ಭಿಣಿಯಾಗಿರುವ ತಲಶ್ಯೇರಿ ನಿವಾಸಿಯಾದ ಸಜಿಲ ಎಂಬಾಕೆ ಆರು ತಾಸುಗಳ ತನಕ ಕಾರಿನಲ್ಲೇ ಮುತ್ತಂಙ ತಪಾಸಣಾ ಕೇಂದ್ರದಲ್ಲಿ ಉಳಿಯಬೇಕಾದ ಪರಿಸ್ಥಿತಿ ಬಂದೊದಗಿತ್ತು.
ಬಳಿಕ ಮರಳುವ ದಾರಿ ಮಧ್ಯೆ ಕೊಳ್ಳೆಗಾಲದಲ್ಲಿ ಕರ್ನಾಟಕ ಪೆÇಲೀಸರು ತಡೆದು ಕಾರಿನಲ್ಲೇ ಇರಬೇಕಾದ ಪರಿಸ್ಥಿತಿ ಉಂಟಾಯಿತು. ಜಿಲ್ಲಾ ಕಂಟ್ರೋಲ್ ರೂಂ ನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದರೂ ಅದು ಸಫಲವಾಗಲಿಲ್ಲ. ಬಳಿಕ ಗರ್ಭಿಣಿ ಯುವತಿ ಮೈಸೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದಾಳೆ. ಬಳಿಕ ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಗರ್ಭಿಣಿಯನ್ನು ಮಾತ್ರ ಕೇರಳದೊಳಗೆ ಪ್ರವೇಶಿಸಲು ಅನುಮತಿ ನೀಡಲಾಯಿತೆಂದು ತಿಳಿದುಬಂದಿದೆ. ಈ ಮಧ್ಯೆ ಯಾವುದೇ ಕಾರಣಕ್ಕೂ ಗಡಿ ದಾಟಿ ಬರಲು ಅನುಮತಿ ನೀಡುವುದಿಲ್ಲ ಎಂದು ವಯನಾಡ್ ಜಿಲ್ಲಾ ಪೆÇಲೀಸ್ ವರಿಷ್ಠರು ವರದಿಗಾರರಿಗೆ ತಿಳಿಸಿದ್ದಾರೆ. ಕುಟುಂಬಸ್ಥರಲ್ಲಿ ಯಾರಾದರೂ ಸಾವನ್ನಪ್ಪಿದರೆ ಅಥವಾ ಶಯ್ಯಾವಸ್ಥೆಗೆ ತಲುಪಿದ ರೋಗಿಗಗಳ ಸಂದರ್ಶನಕ್ಕೆ ಅಲ್ಪವಾದರೂ ವಿನಾಯಿತಿ ನೀಡುವುದಾಗಿ ಅವರು ತಿಳಿಸಿದ್ದಾರೆ.

