HEALTH TIPS

ಎರಡು ದಿನಗಳಲ್ಲಿ ಹೊಸ ಪ್ರಕರಣವಿಲ್ಲ- ತಲಪಾಡಿ ಕೇರಳ ಗಡಿಯಲ್ಲಿ ಭಾರಿ ಕಟ್ಟೆಚ್ಚರ ಮುಂದುವರಿಕೆ


     ಮಂಜೇಶ್ವರ: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಹೊಸ ಪ್ರಕರಣಗಳು ದಾಖಲಾಗದೆ  ಕಾಸರಗೋಡು ಜನತೆ ಅಲ್ಪ ನಿಟ್ಟುಸಿರುಬಿಡುತ್ತಿರುವ ಮಧ್ಯೆ ಕರ್ನಾಟಕ ಭಾಗದಿಂದ ಕೇರಳಕ್ಕೆ ಆಗಮಿಸುವ ವಾಹನಗಳು ಸೇರಿದಂತೆ ಕಾಲ್ನಡಿಗೆ ಪ್ರಯಾಣಿಕರಿಗೆ ಪೆÇಲೀಸರು ಹಾಗು ಆರೋಗ್ಯ ಇಲಾಖೆ ಕಠಿಣವಾದ ನಿಬರ್ಂಧವನ್ನು ಹೇರಿದೆ.
         ಮಂಗಳೂರು ವೆನ್ಲಾಕ್ ಕೋವಿಡ್ ವಿಭಾಗದಲ್ಲಿ ಕಾರ್ಯನಿರತರಾಗಿರುವ ಹಲವು ವೈದ್ಯರುಗಳು ಹಾಗೂ ದಾದಿಯರು ಹಲವರು ಕಾಸರಗೋಡು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ವಾಸವಾಗಿರುವ ಹಿನ್ನೆಲೆಯಲ್ಲಿ ಅವರಲ್ಲಿ ಕೆಲವೊಂದು ಮಂದಿ ಗಡಿ ದಾಟಿ ಬರುವವರಾಗಿದ್ದಾರೆ. ಆದರೆ ಮಂಗಳವಾರದಿಂದ ದಾದಿ ಹಾಗೂ ವೈದ್ಯರುಗಳು ಕರ್ತವ್ಯದ ಸ್ಥಳದಲ್ಲೇ ಉಳಿಯುವಂತ ದ.ಕ. ಜಿಲ್ಲಾ ವೈದ್ಯಕೀಯ ಅಧಿಕಾರಿ ನಿರ್ದೇಶಿಸಿರುವುದಾಗಿ ಪೆÇಲೀಸರು ಹೇಳುತ್ತಿದ್ದಾರೆ. ಮಂಗಳವಾರ ಬೆಳಗ್ಗಿನಿಂದ ಹೆಚ್ಚುವರಿ ಪೆÇಲೀಸರನ್ನು ತಲಪಾಡಿ  ಗಡಿ ಪ್ರದೇಶದಲ್ಲಿ ನಿಯೋಜಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries