ನವದೆಹಲಿ: ಇಡೀ ವಿಶ್ವವೇ ಮಾರಕ ಕೊರೋನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದು, ವೈರಸ್ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂದು ಹೇಳಲಾಗುತ್ತಿರುವ hಥಿಜಡಿoxಥಿಛಿhಟoಡಿoquiಟಿe ಔಷಧಿ ಮೇಲಿನ ರಫ್ತು ನಿಬರ್ಂಧವನ್ನು ಮಾನವೀಯ ನೆಲೆಗಟ್ಟಿನಲ್ಲಿ ಭಾರತ ಸರ್ಕಾರ ತೆರವುಗೊಳಿಸುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
#Hydroxychloroquine ತಯಾರಿಕೆಯ ಪ್ರಮುಖ ದೇಶವಾಗಿರುವ ಭಾರತ ಈ ಹಿಂದೆ ದೇಶದಲ್ಲಿ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಾಗ ಮುಂಜಾಗ್ರತಾ ಕ್ರಮವಾಗಿ #Hydroxychloroquine ಸೇರಿದಂತೆ ಇತರೆ 24 ಔಷಧಿಗಳ ಮೇಲೆ ನಿಬರ್ಂಧ ಹೇರಿತ್ತು, ಆದರೆ ಭಾರತವೂ ಸೇರಿದಂತೆ ವಿಶ್ವದ 190 ರಾಷ್ಟ್ರಗಳಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಭಾರಿಸುತ್ತಿರುವ ಹಿನ್ನಲೆಯಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಭಾರತ ಇದೀಗ #Hydroxychloroquine ಮೇಲಿನ ರಫ್ತು ನಿಬರ್ಂಧವನ್ನು ನಿಬರ್ಂಧವನ್ನು ಭಾಗಶಃ ತೆರವುಗೊಳಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ವಿದೇಶಾಂಗ ಇಲಾಖೆ, ಕೊರೋನಾ ವೈರಸ್ ನಿಯಂತ್ರಣದ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿದೆ. ಕೊರೋನಾ ವೈರಸ್ ಗೆ ಪ್ರಸ್ತುತ ಯಾವುದೇ ನಿರ್ದಿಷ್ಠ ಔಷಧಿಗಳಿಲ್ಲ. hಥಿಜಡಿoxಥಿಛಿhಟoಡಿoquiಟಿe ಅನ್ನು ಪರ್ಯಾಯ ಔಷಧಿಯಾಗಿ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಮಾನವೀಯ ದೃಷ್ಟಿಯಿಂದ ಭಾರತ ಸರ್ಕಾರ #Hydroxychloroquineಮೇಲಿನ ನಿಬರ್ಂಧವನ್ನು ಭಾಗಶಃ ತೆರವುಗೊಳಿಸಿದೆ. ಆದರೆ ಔಷಧಿ ರಫ್ತು ದೇಶದ ನಮ್ಮ ತಯಾರಿಕಾ ಸಾಮಥ್ರ್ಯದ ಮೇಲೆ ಅವಲಂಬಿತವಾಗಿರುತ್ತದೆ. ಮೊದಲು ಹಾಲಿ ಇರುವ ಆರ್ಡರ್ ಗಳನ್ನು ಪೂರ್ಣಗೊಳಿಸಬೇಕು. ಈ ಮೊದಲೇ ಈ ಸಂಬಂಧ ಆರ್ಡರ್ ನೀಡಿರುವ ದೇಶಗಳಿಗೆ ಮೊದಲು ಔಷಧಿಗಳನ್ನು ರಫ್ತು ಮಾಡಬೇಕು. ಅಂತೆಯೇ ಕೊರೋನಾ ವೈರಸ್ ಹಾವಳಿಗೆ ಹೆಚ್ಚು ಬಾಧಿತರಾಗಿರುವ ದೇಶಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದೆ. ಅಲ್ಲದೆ ಈ ವಿಚಾರದಲ್ಲಿ ಯಾವುದೇ ರೀತಿಯ ರಾಜಕೀಯವನ್ನೂ ಭಾರತ ಸಹಿಸದು ಪರೋಕ್ಷ ಎಚ್ಚರಿಕೆ ನೀಡಿದೆ.
ಅಮೆರಿಕಕ್ಕೆ ರಫ್ತು ಮಾಡದಿದ್ದರೆ ತಕ್ಕ ತಿರುಗೇಟು: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಭಾರತ ಸರ್ಕಾರ ಅಮೆರಿಕಕ್ಕೆ #Hydroxychloroquine
ಔಷಧಿ ರಫ್ತು ಮಾಡದಿದ್ದರೆ, ಅಮೆರಿಕ ಕೂಡ ಇದಕ್ಕೆ ತಕ್ಕ ತಿರುಗೇಟು ನೀಡುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಭಾರತ ಅಮೆರಿಕಕ್ಕೆ ಊಥಿಜಡಿoxಥಿಛಿhಟoಡಿoquiಟಿe ಔಷಧಿ ರಫ್ತು ಮಾಡುತ್ತದೆ ಎಂಬ ವಿಶ್ವಾಸವಿದೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದು, ಔಷಧಿ ರಫ್ತು ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಕೇಳಿದ್ದೇನೆ. ಅಲ್ಲದೆ ಅಮೆರಿಕಕ್ಕೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಔಷಧಿ ರಫ್ತು ಮಾಡುವಂತೆ ಕೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಈ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ಒಂದು ವೇಳೆ ಭಾರತ ಔಷಧಿ ರಫ್ತು ಮಾಡದಿದ್ದರೂ ನಮಗೆ ಅಚ್ಚರಿಯೇನಿಲ್ಲ. ನಾವು ಇದಕ್ಕೆ ಪರ್ಯಾಯ ಮಾರ್ಗ ಹುಡುಕಿದ್ದೇವೆ. ಜೊತೆಗೆ ಭಾರತಕ್ಕೆ ಈ ಕುರಿತ ತಕ್ಕ ತಿರುಗೇಟು ನೀಡುತ್ತೇವೆ ಎಂದು ಹೇಳಿದ್ದಾರೆ.
ಔಷಧಿಗಾಗಿ ಭಾರತಕ್ಕೆ ಅಮೆರಿಕ ಸೇರಿದಂತೆ 30ಕ್ಕೂ ಹೆಚ್ಚು ದೇಶಗಳ ಮನವಿ:
ಭಾರತ ಸರ್ಕಾರ ರಫ್ತು ನಿಷೇಧಿಸಿರುವ
#Hydroxychloroquine
ಔಷಧಿಗಾಗಿ ಅಮೆರಿಕ ಸೇರಿದಂತೆ ವಿಶ್ವದ 30ಕ್ಕೂ ಅಧಿಕ ರಾಷ್ಟ್ರಗಳು ಭಾರತಕ್ಕೆ ದುಂಬಾಲು ಬೀಳುತ್ತಿವೆ. ಈ ಹಿಂದೆ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಅಮೆರಿಕಕ್ಕೆ ಹೆಚ್ಚಿನ ಪ್ರಮಾಣದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪೂರೈಕೆ ಮಾಡುವಂತೆ ಮನವಿ ಮಾಡಿದ್ದರು. ಟ್ರಂಪ್ ಬಳಿಕ ಇದೀಗ 30 ರಾಷ್ಟ್ರಗಳ ಪ್ರಧಾನಿಗಳು ಮೋದಿ ಅವರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ರಫ್ತು ಮಾಡುವಂತೆ ಮನವಿ ಮಾಡಿವೆ. ಕೊರೋನಾ ವೈರಸ್ ಗೆ ರಾಮಬಾಣವಾಗಿ ಮಲೇರಿಯಾ ಔಷಧ ಕೆಲಸ ಮಾಡುತ್ತದೆ ಎಂದು ಆರೋಗ್ಯ ಇಲಾಖೆ, ಆರೋಗ್ಯ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಕೇಂದ್ರ ಸರ್ಕಾರ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತಿಗೆ ನಿಷೇಧ ಹೇರಿತ್ತು.ಕೊರೋನಾ ನಿಯಂತ್ರಣದಲ್ಲಿ ಮಲೇರಿಯಾ ನಿರೋಧಕ ಔಷಧ ಊಥಿಜಡಿoxಥಿಛಿhಟoಡಿoquiಟಿe ಪರಿಣಾಮಕಾರಿ:
ಕೊರೋನಾ ವೈರಸ್ ನಿಯಂತ್ರಣದಲ್ಲಿ ಮಲೇರಿಯಾ ನಿರೋಧಕ ಔಷಧ
#Hydroxychloroquine
ಪರಿಣಾಮಕಾರಿ ಎಂದು ತಜ್ಞರು ಅಭಿಪ್ರಾಪಟ್ಟಿದ್ದು, ಇದೇ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಭಾರತ ಸರ್ಕಾರ ಈ ಔಷಧಿಯ ರಫ್ತು ಮಾಡುವುದನ್ನು ನಿಷೇಧಿಸಿತ್ತು. ಮಲೇರಿಯಾ ಮತ್ತು ಲುಪಸ್ ಸೋಂಕಿಗೆ ನೀಡಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯು ರೋಗ ನಿರೋಧಕವಾಗಿ ಕಾರ್ಯ ನಿರ್ವಹಿಸಲಿದ್ದು, ಇದೇ ಕಾರಣಕ್ಕೆ ಇದು ಕೊರೋನಾ ಸೋಂಕು ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಕುರಿತು ಯಾವುದೇ ವೈಜ್ಞಾನಿಕ ಸಂಶೋಧನೆ ಇದನ್ನು ಸಾಬೀತು ಮಾಡಿಲ್ಲ. ಆದರೆ ಫ್ರಾನ್ಲ್ ನಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿರುವ ರೋಗಿಗಳಿಗೆ ಇದೇ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಆಂಟಿ ಬಯಾಟಿಕ್ ಮಾದರಿಯಲ್ಲಿ ನೀಡಲಾಗಿದ್ದು, ಇದು ರೋಗಿಗಳಲ್ಲಿ ಗಮನಾರ್ಹ ಸಕಾರಾತ್ಮಕ ಬದಲಾವಣೆ ತಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.ಹೈಡ್ರಾಕ್ಸಿಕ್ಲೋರೋಕ್ವಿನ್ ತಯಾರಿಕೆಯಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಈ ಔಷಧಿ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಪ್ರಮುಖಸ್ಥಾನದಲ್ಲಿದೆ. ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯು ನೊವೆಲ್ ಪಥಗಾನ್ ನಂತಹ ರೋಗಾಣುಗಳ ಮೇಲೆ ಪರಿಣಾಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಅಮೆರಿಕ ಮಾತ್ರವಲ್ಲದೇ ದಕ್ಷಿಣ ಕೊರಿಯಾ ಕೂಡ ಇದೇ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಕೊರೋನಾ ವೈರಸ್ ಗೆ ಬದಲಿ ಔಷಧಿಯಾಗಿ ನೀಡುತ್ತಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಪ್ರಪಂಚದಾದ್ಯಂತ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಗೆ ವ್ಯಾಪಕ ಬೇಡಿಕೆ ಸೃಷ್ಟಿಯಾಗಿದ್ದು, ಭಾರತ ಕೂಡ ಇದೇ ಕಾರಣಕ್ಕೆ ಈ ಔಷಧಿಯ ರಫ್ತು ನಿಷೇಧ ಮಾಡಿದೆ.
ಭಾರತದಲ್ಲಿಯೂ 550ಕ್ಕೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದು ಇದೀಗ ಮುಂಜಾಗ್ರತಾ ಕ್ರಮವಾಗಿ ಭಾರತ ಸರ್ಕಾರ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯ ರಫ್ತು ನಿಷೇಧಿಸಿದೆ.


