ಪತ್ತನಂತಿಟ್ಟು: ನೂರಾರು ಅನ್ಯರಾಜ್ಯ ಕಾರ್ಮಿಕರು ಕೋವಿಡ್ ಲಾಕ್ ಡೌನ್ ಉಲ್ಲಂಘಿಸಿ ಬೃಹತ್ ಸಂಖ್ಯೆಯಲ್ಲಿ ಪ್ರತಿಭಟಿಸಿದ ಘಟನೆ ಸೋಮವಾರ ಪತ್ತನಂತಿಟ್ಟು ಜಿಲ್ಲೆಯಲ್ಲಿ ನಡೆದಿದೆ. ಪತ್ತನಂತಿಟ್ಟು ಜಿಲ್ಲೆಯ ಕಣ್ಣಂಕರದಲ್ಲಿ ಸುಮಾರು ನೂರಕ್ಕೂ ಮಿಕ್ಕಿದ ಅನ್ಯರಾಜ್ಯ ಕಾರ್ಮಿಕರು ಪ್ರತಿಭಟನೆ ನಡೆಸಿದರು.ಇವರಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಬಿಹಾರಿಗಳು ಇದ್ದರೆಂದು ತಿಳಿದುಬಂದಿದೆ.
ತಮ್ಮನ್ನು ಊರಿಗೆ ತೆರಳಲು ಅವಕಾಶ ನೀಡದೆ ಕೂಡಿ ಹಾಕಲಾಗಿದೆ. ಕಳೆದ ಎರಡು ತಿಂಗಳ ಲಾಕ್ ವಡೌನ್ ಅವಧಿಯಲ್ಲಿ ಎರಡು ಬಾರಿ 10 ಕೆ.ಜಿ ಅಕ್ಕಿ ಮತ್ತು ಐದು ಕೆ.ಜಿ. ಆಲೂಗಡ್ಡೆಗಳನ್ನಷ್ಟೇ ವಿತರಿಸಲಾಗಿದೆ. ಇಷ್ಟೊಂದು ದೊಡ್ಡ ಸಂಖ್ಯೆಯ ನಮ್ಮ ಕುಟುಂಬಗಳಿಗೆ ಇದು ಎಲ್ಲಿಗೂ ಸಾಕಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಊರಿಗೆ ತೆರಳಲು ಅವಕಾಶ ನೀಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಪ್ರತಿಭಟನಾ ನಿರತ ಅನ್ಯರಾಜ್ಯ ಕಾರ್ಮಿಕರು ಬಿಹಾರಕ್ಕೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂದಾಯ ಅಧಿಕಾರಿಗಳು, ಅವರಿಗೆ ಸಾಕಷ್ಟು ಆಹಾರ ಕಿಟ್ ಗಳನ್ನು ಒದಗಿಸಲಾಗಿದೆ ಎಂದು ಹೇಳಿರುವರು. ಪತ್ತನಂತಿಟ್ಟು ಎಸ್ಪಿ ನೇತೃತ್ವದ ಪೆÇಲೀಸ್ ತಂಡ ಕಾರ್ಮಿಕರನ್ನು ಪ್ರತಿಭಟನೆ ಕೈಬಿಟ್ಟು ತೆರಳುವಂತೆ ಸೂಚಿಸಿದರು. ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಪೆÇಲೀಸರು ಭರವಸೆ ನೀಡಿದರು. ವಾಸ ಸ್ಥಳಕ್ಕೆ ಹಿಂತೆರಳಲು ಸಮ್ಮತಿಸದ ಕಾರ್ಮಿಕರನ್ನು ಬಳಿಕ ಪೆÇಲೀಸರು ಲಾಠಿ ಬೀಸಿ ಓಡಿಸಿದರು.


