HEALTH TIPS

ಜಿಲ್ಲಾಡಳಿತದ ಆದೇಶ ನಗಣ್ಯ-ಕೋಳಿ ಮಾಂಸ 165 ರೂ.- 44 ಕೋಳಿ ಅಂಗಡಿಗಳ ವಿರುದ್ಧ ಕ್ರಮ


          ಕಾಸರಗೋಡು: ಜಿಲ್ಲಾಡಳಿತದ ಅಧಿಸೂಚನೆಯನ್ನು ಉಲ್ಲಂಘಿಸಿದ 44 ಕೋಳಿ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ತಿಳಿಸಿದ್ದಾರೆ. ಜಿಲ್ಲಾ ಸರಬರಾಜು ಅಧಿಕಾರಿ, ಜಿಲ್ಲಾ ಕಾನೂನು ಮಾಪನಶಾಸ್ತ್ರ ಉಪ ನಿಯಂತ್ರಕ ಮತ್ತು ಕಂದಾಯ ಅಧಿಕಾರಿಗಳ ನೇತೃತ್ವದ ವಿಶೇಷ ದಳದವರು ಜಿಲ್ಲೆಯ ವಿವಿಧ ಕೋಳಿ ಅಂಗಡಿಗಳಲ್ಲಿ ತಪಾಸಣೆ ನಡೆಸಿದಾಗ ಅವುಗಳಲ್ಲಿ ಹೆಚ್ಚಿನ ಶುಲ್ಕ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
          ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಿನ್ನೆ ನಡೆದ  ಸಭೆಯಲ್ಲಿ ಕಾನೂನು ಉಲ್ಲಂಘಿಸಿದ ಅಂಗಡಿಗಳಿಗೆ ನೋಟಿಸ್ ನೀಡಲು ಮತ್ತು ಕನಿಷ್ಠ 5,000 ರೂ.ಗಳ ದಂಡ ವಿಧಿಸಲು ನಿರ್ಧರಿಸಲಾಯಿತು. ವಿವಿಧ ಹಬ್ಬಾಚರಣೆಗಳು ಎದುರಾಗುತ್ತಿರುವಂತೆ ಜಿಲ್ಲೆಯಲ್ಲಿ ಮಾಂಸದ ಕೋಳಿಗಳ ಗರಿಷ್ಠ ಬೆಲೆಯನ್ನು 145 ರೂ ಎಂದು ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದ್ದರು. ಮಿತಿಮೀರಿದ ಬೆಲೆಗಳ ದೂರುಗಳ ಕುರಿತು ನಾಗರಿಕ ಸರಬರಾಜು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಗಳ ಜಂಟಿ ಪರಿಶೀಲನಾ ವರದಿಯನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
       ಆದರೆ ಜಿಲ್ಲೆಯ ಹೆಚ್ಚಿನ ಅಂಗಡಿಗಳು ಆದೇಶವನ್ನು ಗಾಳಿಗೆ ತೂರುತ್ತಿದ್ದು ಕೋಳಿ ಮಾಂಸಕ್ಕೆ ಇನ್ನೂ ಕೆ.ಜಿ.ಗೆ 160 ರಿಂದ 180 ರೂ. ಗಳಿಗೆ ವಿಕ್ರಯಿಸಲಾಗುತ್ತಿದೆ. ಜೊತೆಗೆ ಕೋಳಿ ಮಾಂಸವನ್ನು 250 ರೂಪಾಯಿಗೆ ಮಾರಾಟ ಮಾಡಲಾಗುತ್ತಿರುವುದು ಕಂಡುಬಂದಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries