HEALTH TIPS

ಸುರಕ್ಷತೆಯೊಂದಿಗೆ ಮುಂದುವರಿದ ಪರೀಕ್ಷೆಗೆ ನಾಳೆ ತೆರೆ

     
      ಕಾಸರಗೋಡು: ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಪರೀಕ್ಷೆಗಳನ್ನು ಆರೋಗ್ಯ ಇಲಾಖೆ ಮಾನದಂಡ ಪ್ರಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದೆ. ದ.ಕ ಸಹಿತ ಕರ್ನಾಟಕದ ನಾನಾ ಕಡೆ ಸಿಲುಕಿಕೊಂಡಿದ್ದ ವಿದ್ಯಾರ್ಥಿಗಳನ್ನು ವಿಶೇಷ ಪಾಸ್ ಮೂಲಕ ಕರೆತರಲಾಗಿತ್ತು.
        ಎಸ್.ಎಸ್.ಎಲ್.ಸಿ. ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆಗಳು ಅತ್ಯಂತ ಸುರಕ್ಷತೆಯೊಂದಿಗೆ ನಡೆಸಲಾಗುತ್ತಿದ್ದು, ಮೇ 30ರಂದು ಪರೀಕ್ಷೆ ಅಂತ್ಯಗೊಳ್ಳಲಿದೆ. 6547 ಮಂದಿ ವಿದ್ಯಾರ್ಥಿಗಳು ಪ್ಲಸ್-ಟು ಪರೀಕ್ಷೆ ಬರೆಯುತ್ತಿದ್ದು, ಕೆಲವೊಂದು ಕಾರಣಗಳಿಂದ 160ಮಂದಿ ಪರೀಕ್ಷೆಗೆ ಹಾಜರಾಗಿರಲಿಲ್ಲ. ಮನೆಗಳಲ್ಲಿ ನಿಗಾದಲ್ಲಿರುವವರಲ್ಲಿ 10 ಮಂದಿ ವಿದ್ಯಾರ್ಥಿಗಳೂ ಪರೀಕ್ಷೆಗೆ ಹಾಜರಾಗಿದ್ದಾರೆ.  6818 ಮಂದಿ ಪ್ಲಸ್‍ವನ್ ಪರೀಕ್ಷೆ ಬರೆದಿದ್ದಾರೆ. 182ಮಂದಿ ಹಾಜರಾಗಿರಲಿಲ್ಲ. ಇವರಲ್ಲಿ 6 ಮಂದಿ ಮನೆಗಳಲ್ಲಿ ನಿಗಾದಲ್ಲಿದ್ದಾರೆ. ವಿ.ಎಸ್.ಎಸ್.ಇ. ವಿಭಾಗದಲ್ಲಿ 894 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 18 ಮಂದಿ ಹಾಜರಾಗಿರಲಿಲ್ಲ. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 10841 ಮಂದಿ ನೋಂದಣಿ ನಡೆಸಿದ್ದು, ಇವರಲ್ಲಿ 10801 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇವರಲ್ಲಿ 10 ಮಂದಿ ವಿದ್ಯಾರ್ಥಿಗಳು ಹಾಟ್ ಸ್ಪಾಟ್ ವಲಯಗಳಲ್ಲಿ ಇರುವವರು, 28 ಮಂದಿ ಮನೆಗಳಲ್ಲಿ ನಿಗಾದಲ್ಲಿರುವವರು.
       ಕಾಞಂಗಾಡ್ ಶೈಕ್ಷಣಿಕ ಜಿಲ್ಲೆಯಲ್ಲಿ 8870 ಮಂದಿ ನೋಂದಣಿ ನಡೆಸಿದ್ದು, 9 ಮಂದಿ ಉಳಿದು ಇತರಎಲ್ಲರೂ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries