ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 18 ಮಂದಿಗೆ ಕೋವಿಡ್ ಸೋಂಕು ಖಚಿತವಾಗಿದೆ. ಮಹಾರಾಷ್ಟ್ರದಿಂದ ಆಗಮಿಸಿದ 13 ಮಂದಿ ಸಹಿತ 18 ಮಂದಿಗೆ ರೋಗ ಖಚಿತವಾಗಿದೆ. ಒಬ್ಬ ಮಹಿಳೆ ಮತ್ತು 17 ಮಂದಿ ಪುರುಷರು ರೋಗಬಾಧಿತರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಮಹಾರಾಷ್ಟ್ರ ವಲ್ಲದೆ ಕುವೈತ್ ನಿಂದ ಆಗಮಿಸಿದ ಇಬ್ಬರು, ಖತಾರ್ ನಿಂದ ಬಂದ ಒಬ್ಬರು, ಷಾರ್ಜಾ ದಿಂದ ಆಗಮಿಸಿದ ಒಬ್ಬರು, ತಮಿಳುನಾಡಿನಿಂದ ಬಂದ ಒಬ್ಬರಲ್ಲಿ ಸೋಂಕು ಖಚಿತವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ರೋಗ ಖಚಿತಗೊಂಡವರ ಸಂಖ್ಯೆ 67ಕ್ಕೇರಿದೆ.
ಮಹಾರಾಷ್ಟ್ರ ದಿಂದ ಆಗಮಿಸಿದವರು:
ಮೇ 23ರಂದು ಆಗಮಿಸಿದ ಪೈವಳಿಕೆ ಗ್ರಾಮಪಂಚಾಯತ್ ನಿವಾಸಿ 41 ವರ್ಷದ ನಿವಾಸಿ, ಮೇ 24ರಂದು ಆಗಮಿಸಿದ 51 ವರ್ಷದ ಕಾಸರಗೋಡು ನಗರಸಭೆ ನಿವಾಸಿ, ಮೇ 17ರಂದು ಕಾರಿನಲ್ಲಿ ಆಗಮಿಸಿದ 54 ವರ್ಷದ ಕುಂಬಳೆ ಗ್ರಾಮಪಂಚಾಯತ್ ನಿವಾಸಿ, ಮೇ 24ರಂದು ಬಸ್ ನಲ್ಲಿ ಬಂದಿದ್ದ 39, 48, 42 ವರ್ಷದ ಕಾಸರಗೋಡು ನಗರಸಭೆ ವ್ಯಾಪ್ತಿಯ ನಿವಾಸಿಗಳೂ, ಮೇ 23ರಂದು ಬಸ್ ನಲ್ಲಿ ಆಗಮಿಸಿದ 38 ವರ್ಷದ ಮಧೂರು ಗ್ರಾಮಪಂಚಾಯತ್ ನಿವಾಸಿ, ಮೇ 22ರಂದು ಬಸ್ ನಲ್ಲಿ ಆಗಮಿಸಿದ 45 ವರ್ಷದ ಪೈವಳಿಕೆ ನಿವಾಸಿ, ಮೇ 18ರಂದು ಬಸ್ ನಲ್ಲಿ ಆಗಮಿಸಿದ 40 ವರ್ಷದ ಮಂಗಲ್ಪಾಡಿ ನಿವಾಸಿ, ಮೇ 17ರಂದು ಬಸ್ ನಲ್ಲಿ ಆಗಮಿಸಿದ 37 ವರ್ಷದ ಪೈವಳಿಕೆ ನಿವಾಸಿ, ಮೇ 18ರಂದು ಬಸ್ ನಲ್ಲಿ ಆಗಮಿಸಿದ 29 ವರ್ಷದ ಮಂಗಲ್ಪಾಡಿ ಪಂಚಾಯತ್ ನಿವಾಸಿ, ಮೇ 19ರಂದು ಬಸ್ ನಲ್ಲಿ ಆಗಮಿಸಿದ್ದ 28 ವರ್ಷದ ಮಂಗಲ್ಪಾಡಿ ನಿವಾಸಿ, ಮೇ 17ರಂದು ಬಸ್ ನಲ್ಲಿ ಆಗಮಿಸಿದ್ದ 40 ವರ್ಷದ ಪೈವಳಿಕೆ ಪಂಚಾಯತ್ ನಿವಾಸಿಗಳಿಗೆ ಸೋಂಕು ಖಚಿತವಾಗಿದೆ.
ತಮಿಳುನಾಡಿನಿಂದ ಆಗಮಿಸಿದವರು:
ಮೇ 20ರಂದು ತಮಿಳುನಾಡಿನಿಂದ ಬಸ್ ನಲ್ಲಿ ಆಗಮಿಸಿದ್ದ 23 ವರ್ಷದ ಕೋಟೋಂ-ಬೇಳೂರು ನಿವಾಸಿಗೆ ಸೋಂಕು ಖಚಿತವಾಗಿದೆ.
ವಿದೇಶಗಳಿಂದ ಆಗಮಿಸಿದವರು:
ಮೇ 20ರಂದು ಕುವೈತ್ ನಿಂದ ಆಗಮಿಸಿದ್ದ 48 ವರ್ಷದ ಮಡಿಕೈ ಗ್ರಾಮಪಂಚಾಯತ್ ನಿವಾಸಿ, ಮೇ 19ರಂದ ಕುವೈತ್ ನಿಂದ ಆಗಮಿಸಿದ್ದ 31 ವರ್ಷದ ಕುತ್ತಿಕೋಲ್ ಪಂಚಾಯತ್ ನಿವಾಸಿ, ಮೇ 24ರಂದು ಷಾರ್ಜಾದಿಂದ ಆಗಮಿಸಿದ್ದ 59 ವರ್ಷದ ಚೆಂಗಳ ಗ್ರಾಮಪಂಚಾಯತ್ ನಿವಾಸಿ, ಮೇ 19ರಂದು ಖತಾರ್ ನಿಂದ ಆಗಮಿಸಿದ್ದ 24 ವರ್ಷದ ಕುಂಬಳೆ ಪಂಚಾಯತ್ ನಿವಾಸಿ ಮಹಿಳೆಗೆ ಕೋವಿಡ್ ಸೋಂಕು ಖಚಿತಗೊಂಡಿದೆ.
ನಿಗಾದಲ್ಲಿ 3616 ಮಂದಿ:
ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 3616 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ3065 ಮಂದಿ, ಆಸ್ಪತ್ರೆಗಳಲ್ಲಿ 551 ಮಂದಿ ನಿಗಾದಲ್ಲಿದ್ದಾರೆ. ಗುರುವಾರ ನೂತನವಾಗಿ 39 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. 407 ಮಂದಿಯ ಸ್ಯಾಂಪಲ್ ತಪಾಸಣೆ ಲಭಿಸಿಲ್ಲ.


