HEALTH TIPS

ಕೊರೊನಾ ನಿಯಂತ್ರಣ-ಜಿಲ್ಲೆಯ ಹೊಸ ಕಂಟೈ ನ್ಮೆಂಟ್ ಝೋನ್ ಗಳು ಯಾವುದು-ಇಲ್ಲಿದೆ ಮಾಹಿತಿ


            ಕಾಸರಗೋಡು: ಕೋವಿಡ್ ಕೊರೊನಾ ಹಿನ್ನೆಲೆಯಲ್ಲಿ ಮೂರನೇ ಘಟ್ಟದ ಹೊಸ್ತಿಲಲ್ಲಿ ಕೋವಿಡ್ ಪಾಸಿಟಿವ್ ರೋಗಿಗಳ ಸಂಖ್ಯೆ ವರ್ಧಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತವು ಗುರುವಾರ ನೂತನ ನಿಬಂಧನೆಗಳೊಂದಿಗೆ ಕಂಟೈ ನ್ಮೆಂಟ್ ಪ್ರದೇಶಗಳನ್ನು ಗುರುತಿಸಿದೆ.
            ಪೈವಳಿಕೆ ಗ್ರಾ.ಪಂ. ನ 3 ಹಾಗೂ 4ನೇ ವಾರ್ಡ್‍ಗಳು, ಕಳ್ಳಾರ್ ಗ್ರಾ.ಪಂ.ನ 4ನೇ ವಾರ್ಡ್, ಕಾಸರಗೋಡು ನಗರ ಸಭೆಯ 4 ಹಾಗೂ 23ನೇ ವಾರ್ಡ್ ಗಳು, ಕೋಡೋ ಬೆಳ್ಳೂರು ಗ್ರಾ.ಪಂ.ನ 14ನೇ ವಾರ್ಡ್, ವರ್ಕಾಡಿ ಗ್ರಾ.ಪಂ.ನ 1 ಮತ್ತು 2ನೇ ವಾರ್ಡ್ ಗಳು, ಮೀಂಜ ಗ್ರಾ.ಪಂ.ನ 2ನೇ ವಾರ್ಡ್, ಮಂಗಲ್ಪಾಡಿ ಗ್ರಾ.ಪಂ.ನ 11ನೇ ವಾರ್ಡ್, ಮಧೂರು ಗ್ರಾ.ಪಂ.ನ 7ನೇ ವಾರ್ಡ್, ಉದುಮ ಗ್ರಾ.ಪಂ.ನ 9ನೇ ವಾರ್ಡ್, ಮಂಜೇಶ್ವರ ಗ್ರಾ.ಪಂ.ನ 11ನೇ ವಾರ್ಡ್ ಎಂಬವುಗಳನ್ನು ಜಿಲ್ಲೆಯ ಅತಿ ಜಾಗ್ರತೆಯ ವಾರ್ಡ್‍ಗಳಾಗಿ ಪರಿಗಣಿಸಿ ನಿಯಂತ್ರಣದ ಆಜ್ಞೆ ನೀಡಲಾಗಿದೆ.
         ರಾಷ್ಟ್ರದಲ್ಲಿ ಕೋವಿಡ್ ನಿಯಂತ್ರಣದ ಭಾಗವಾಗಿ 4ನೇ ಹಂತದ ಲಾಕ್ ಡೌನ್ ನಲ್ಲಿ ನೀಡಲಾಗಿರುವ ವಿನಾಯಿತಿಯ ಆಧಾರದಲ್ಲಿ ಜಿಲ್ಲೆಯನ್ನು ಪೂರ್ತಿ ನಿಯಂತ್ರಣಗೊಳಿಸುವ ಬದಲು ಆಯಾ ಪ್ರದೇಶಗಳನ್ನು ಸ್ಥಳೀಯವಾಗಿ ಗುರುತಿಸಿ ಕಂಟೈ ನ್ಮೆಂಟ್ ಪ್ರದೇಶ ಗುರುತಿಸಬಹುದೆಂಬ ನಿಯಮಾನುಸಾರ ಜಿಲ್ಲಾಡಳಿತ ಇಂತಹ ಉಪಕ್ರಮಗಳನ್ನು ಆರಂಭಿಸಿದೆ. ಇದರಿಂದಾಗಿ ಆರೋಗ್ಯ ಇಲಾಖೆ ಸಹಿತ ವಿವಿಧ ತುರ್ತು ವಿಭಾಗಗಳಿಗೆ ಅಗತ್ಯದ ಕ್ರಮ ನಿರ್ವಹಣೆಗೆ ಸ್ಥಳೀಯ ಮಟ್ಟದ ಇಂತಹ ವ್ಯವಸ್ಥೆಗಳು ನೆರವಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries