ಕಾಸರಗೋಡು: ಜಿಲ್ಲಾ ಪಂಚಾಯತ್ ನ ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ ಪರಿಶಿಷ್ಟ ಜಾತಿ ಜನಾಂಗದ ಅಂಗೀಕಾರ ದೈವಕೋಲ ಕಲಾವಿದರ ತಂಡಗಳಿಗೆ ಪ್ರಸಾದನ ಆಭರಣಗಳ ವಿತರಣೆ ನಡೆಸಲಾಯಿತು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ವಿತರಣೆ ಉದ್ಘಾಟಿಸಿದರು.
ಜಿಲ್ಲೆಯ 5 ತಂಡಗಳನ್ನು ಯೋಜನೆಯ ಫಲಾನುಭವಿಗಳಾಗಿ ಆಯ್ಕೆ ಮಾಡಲಾಗಿತ್ತು. ಜಿಲ್ಲಾ ಪಂಚಾಯತ್ ಸದಸ್ಯ, ಪರಿಶಿಷ್ಟ ಜಾತಿ ಅಭಿವೃದ್ಧಿ ವಕಿರ್ಂಗ್ ಗ್ರೂಪ್ ಅಧ್ಯಕ್ಷ ಕೆ.ಕೇಳು ಪಣಿಕ್ಕರ್ ಅಧ್ಯಕ್ಷರಾಗಿದ್ದರು. ನೀಲೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ವಿ.ಪಿ.ಜಾನಕಿ, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಪಿ.ನಂದಕುಮಾರ್, ರೀಸರ್ಚ್ ಅಸಿಸ್ಟೆಂಟ್ ಪ್ರಶಾಂತ್ ಮಣಲಿಲ್ ತಾಳ ಉಪಸ್ಥಿತರಿದ್ದರು. ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಮೀನಾರಾಣಿ ಎಸ್. ವರದಿ ವಾಚಿಸಿದರು.
ಫೆÇಟೋ ಶೀರ್ಷಿಕೆ: ತೈ ಯ್ಯಂ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅವರು ದೈವಕೋಲ ಕಲಾವಿದರಿಗೆ ಪ್ರಸಾದನ ಆಭರಣಗಳ ವಿತರಣೆ ನಡೆಸಿದರು.


