ಕಾಸರಗೋಡು: ಕೋವಿಡ್ 19 ರ ಹಿನ್ನೆಲೆಯಲ್ಲಿ ಕಂಟೈ ನ್ಮೆಂಟ್ ಝೋನ್ ಸೇರಿರುವ ಪ್ರದೇಶಗಳಲ್ಲಿ ಅಂಗಡಿಗಳು ದಿನ ಬಿಟ್ಟು ದಿನ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ಮಾತ್ರ ತೆರೆದು ಕಾರ್ಯಾಚರಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಪ್ರದೇಶಗಳಲ್ಲಿ ಅನಿವಾರ್ಯ ಕಾರಣಗಳಲ್ಲಿ ಅಲ್ಲದೆ, ಮನೆಗಳಿಂದ ಹೊರಗಿಳಿಯುವುದಕ್ಕೆ ಅನುಮತಿಯಿಲ್ಲ. ಈ ಪ್ರದೇಶಗಳಲ್ಲಿ ಪೆÇಲೀಸ್ ನಿಗಾ ಪ್ರಬಲಗೊಳಿಸಲು ಸಭೆ ನಿರ್ಧರಿಸಿದೆ. ಕಂಟೈ ನ್ಮೆಂಟ್ ಜೋನ್ ಗಳ ಎಲ್ಲ ವಾರ್ಡ್ ಗಳಲ್ಲೂ ವಾರ್ಡ್ ಮಟ್ಟದ ಜಾಗ್ರತಾ ಸಮಿತಿಗಳ ಚಟುವಟಿಕೆ ಚುರುಕುಗೊಳಿಸಲಾಗುವುದು. ನಿಗಾ ಪ್ರಬಲಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪೆÇಲೀಸ್ ಸ್ವಯಂಸೇವಕ ಸೌಲಭ್ಯ ರಚಿಸಿದೆ. ಇದಕ್ಕಾಗಿ 1276 ಮಂದಿ ಸೇರಿರುವ ಪಟ್ಟಿ ಯುವಜನ ಕಲ್ಯಾಣ ಮಂಡಳಿ ಸಲ್ಲಿಸಿದೆ. ಈ ಪಟ್ಟಿಯಿಂದ ಪೆÇಲೀಸ್ ಸ್ವಯಂಸೇವಕರನ್ನು ನೇಮಿಸಿ, ಅವರಿಗೆ ಬ್ಯಾಡ್ಜ್ ನೀಡಲು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗೆ ಜಿಲ್ಲಾಧಿಕಾರಿ ಹೊಣೆಗಾರಿಕೆ ನೀಡಿದ್ದಾರೆ. ವಿವಿಧ ವಿಚಾರಗಳಲ್ಲಿ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಜಿಲ್ಲಾ ವೈದ್ಯಾಧಿಕಾರಿ ಡಾ ಎ.ವಿ. ರಾಮದಾಸ್, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಟಿ.ಮನೋಜ್, ರಾಷ್ಟ್ರೀಯ ಆರೋಗ್ಯ ದೌತ್ಯ ಪ್ರಬಂಧಕ ಡಾ.ರಾಮನ್ ಸ್ವಾತಿ ವಾಮನ್, ಜಿಲ್ಲಾ ವೈದ್ಯಾಧಿಕಾರಿ (ಹೋಮಿಯೋ) ಡಾ.ಕೆ.ರಾಮಸುಬ್ರಹ್ಮಣ್ಯಂ, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಮೊದಲಾದವರು ಉಪಸ್ಥಿತರಿದ್ದರು.


