HEALTH TIPS

ನಾಳೆಯಿಂದ ಎಸ್.ಎಸ್.ಎಲ್.ಸಿ., ಹೈಯರ್ ಸೆಕೆಂಡರಿ ಪರೀಕ್ಷೆಗಳು ಆರಂಭ: ಸಿದ್ಧತೆಗಳು ಪೂರ್ಣ: ಕೋವಿಡ್ 19 ಹಿನ್ನೆಲೆಯಲ್ಲಿ ಹೆಚ್ಚುವರಿ ಜಾಗೃತಿಯೊಂದಿಗೆ ಪರೀಕ್ಷೆ ನಡೆಲು ಕ್ರಮ

 
     ಕಾಸರಗೋಡು: ನಾಳೆಯಿಂದ(ಮಂಗಳವಾರ) ಎಸ್.ಎಸ್.ಎಲ್.ಸಿ., ಹೈಯರ್ ಸೆಕೆಂಡರಿ ಪರೀಕ್ಷೆಗಳು ಆರಂಭಗೊಳ್ಳಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ. ಕೋವಿಡ್ 19 ರೋಗಬಾಧೆಯ ಹಿನ್ನೆಯೆಲ್ಲಿ ಮುಂದೂಡಲಾಗಿದ್ದ ಈ ಪರೀಕ್ಷೆಗಳು ಈಗ ನಡೆಯಲಿದ್ದು, ಹೆಚ್ಚುವರಿ ಜಾಗೃತಿಯೊಂದಿಗೆ ನಡೆಯಲಿವೆ ಎಂದು ಅಧಿಕಾರಿಗಳ ಅವಲೋಕನ ಸಭೆ ತಿಳಿಸಿದೆ.
      ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
    ಈ ಸಂದರ್ಭ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಗಳಿದ್ದಲ್ಲಿ ತಮ್ಮ ಶಾಲಾ ಮುಖ್ಯೋಪಾಧ್ಯಾಯರಿಗೆ ತಿಳಿಸುವಂತೆ ಭಾನುವಾರ ಸಂಜೆ 5ಗಂಟೆ ವರೆಗೆ ಸಮಯಾವಕಾಶ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕಿ ತಿಳಿಸಿದ್ದರು. ಚೆರುವತ್ತೂರು ತಾಂತ್ರಿಕ ಹೈಯರ್ ಸೆಕೆಂಡರಿ ಶಾಲೆಯಿಂದ ಮಾತ್ರ ಸಮಸ್ಯೆಯಿರುವುದಾಗಿ ಡಿ.ಡಿ.ಇ. ಅವರಿಗೆ ಮಾಹಿತಿ ದೊರೆತಿದೆ. ಅದರ ಪರಿಹಾರಕ್ಕೆ ತುರ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
    ವಿದ್ಯಾರ್ಥಿಗಳು ಯಾವುದೇ ಸಮಸ್ಯೆಗಳಿಲ್ಲದೆ, ಸುಗಮವಾಗಿ ಪರೀಕ್ಷೆಗೆ ಹಾಜರಾಗುವ ನಿಟ್ಟಿನಲ್ಲಿ ಕೆ.ಎಸ್.ಆರ್.ಟಿ. ಬಸ್ಗಳು, ಖಾಸಗಿ ಬಸ್ ಗಳು ಸಂಚಾರ ನಡೆಸುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದರು. ವಿದ್ಯಾರ್ಥಿಗಳ ಯಾತ್ರಾ ಸೌಲಭ್ಯ ಖಚಿತಪಡಿಸುವ ಹೊಣೆಯನ್ನು ಪೆÇಲೀಸರಿಗೆ ನೀಡಲಾಗಿದೆ. ಕೋವಿಡ್ 19 ಕ್ವಾರೈಂಟೈನ್ ಆಗಿ ಬಳಸಲಾಗಿದ್ದ ಎಲ್ಲ ಶಾಲೆಗಳನ್ನೂ ಅಗ್ನಿಶಾಮಕದಳ ನೇತೃತ್ವದಲ್ಲಿ ರೋಗಾಣುಮುಕ್ತಗೊಳಿಸಲಾಗಿದೆ. ಎಲ್ಲ ವಿದ್ಯಾರ್ಥಗಳೂ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಿದ್ದಾರೆ ಎಂದು ಖಚಿತಪಡಿಸುವ ಹೊಣೆ ಆಯಾ ಮುಖ್ಯೋಪಾಧ್ಯಾಯರದಾಗಿದೆ.
      ವಿದ್ಯಾರ್ಥಿಗಳು ಬೇರಾವ ಆತಂಕಗಳು ಇಲ್ಲದೆ ನಿರುಮ್ಮಳರಾಗಿ ಪರೀಕ್ಷೆಗೆ ಹಾಜರಾಗಬೇಕು. ವಿದ್ಯಾರ್ಥಿಗಳ ಸಂಚಾರ ಸೌಕರ್ಯ ಬಗ್ಗೆ ಪೆÇಲೀಸ್ ಕ್ಷಿಪ್ರ ದಳ, ಮೋಟಾರು ವಾಹನ ಇಲಾಖೆ ತಪಾಸಣೆ ನಡೆಸಲಿದೆ. ಕಂದಾಯ ಇಲಾಖೆಯ ಇನ್ ಸಿಡೆಂಟ್ ಕಮಾಂಡರರ ಸೇವೆ ತುರ್ತು ಹಂತಗಳಲ್ಲಿ ಸದುಪಯೋಗ ಪಡಿಸಲಾಗುವುದು. ಆರೋಗ್ಯ ಇಲಾಖೆ ತಿಳಿಸಿರುವ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ ಎಂಬ ಖಚಿತತೆ ನಡೆಸಲು ಜ್ಯೂನಿಯರ್ ಹೆಲ್ತ್ ಇನ್ಸ್ ಪೆಕ್ಟರರು, ಆಶಾ ಕಾರ್ಕರ್ತರು ಮೊದಲಾದವರಿಗೆ ಹೊಣೆ ನೀಡಲಾಗಿದೆ ಎಂದು ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ತಿಳಿಸಿದರು.
     ಪೆÇಲೀಸರು ತುರ್ತು ಸಹಾಯ ಅಗತ್ಯವಿದ್ದರೆ ಕರೆಮಾಡಲು ದೂರವಾಣಿ ಸಂಖ್ಯೆಗಳು: 9497990142(ಡಿ.ವೈ.ಎಸ್.ಪಿ.), 9497935841. 
     ಸಭೆಯಲ್ಲಿ ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಎ.ಟಿ.ಮನೋಜ್, ಡಿ.ವೈ.ಎಸ್.ಪಿ.(ಡಿ.ಸಿ.ಆರ್.ಬಿ.) ಜೈಸನ್ ಕೆ.ಅಬ್ರಾಹಂ, ಜಿಲ್ಲಾ ಫಯರ್ ಅಧಿಕಾರಿ ರಾಜ್ ಬಿ., ಜಿಲ್ಲಾ ಟ್ರಾನ್ಸ್ ಪೆÇೀರ್ಟ್ ಅಧಿಕಾರಿ ಮನೋಜ್ ಕುಮಾರ್ ವಿ. ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries