HEALTH TIPS

ಪರೀಕ್ಷೆಗೆ ಸಿದ್ಧರಾಗಿರುವ ವಿದ್ಯಾರ್ಥಿಗಳು ಗಮನಿಸಬೇಕಾದ ಅಂಶಗಳು

   
       ಕಾಸರಗೋಡು: ನಾಳೆಯಿದ ಎಸ್.ಎಸ್.ಎಲ್.ಸಿ. , ಹೈಯರ್ ಸೆಕೆಂಡರಿ ಪರೀಕ್ಷೆಗಳು ಆರಂಭಗೊಳ್ಳಲಿವೆ. ಕೋವಿಡ್19 ರೋಗ ಹಾವಳಿಯ ಈ ಕಾಲಾವಧಿಯಲ್ಲಿ ಪರೀಕ್ಷೆಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳು ಗಮನಿಸಬೇಕಾದ ಅಂಶಗಳು.
      ರೋಗ ಬಾಧೆ ಬಗ್ಗೆ ಆತಂಕ, ಹೆದರಿಕೆ ಹೊಂದದೇ ಪರೀಕ್ಷೆಗೆ ಹಾಜರಾಗಿರಿ. ಎಲ್ಲ ರೀತಿಯ ಮುಂಜಾಗರೂಕ ಕ್ರಮಗಳನ್ನು ರಾಜ್ಯ ಸರಕಾರ ಕೈಗೊಂಡಿದ್ದು, ಪರೀಕ್ಷೆ ನಡೆಸಲು ಸಿದ್ಧತೆ ಮಾಡಲಾಗಿದೆ.
    ರೋಗ ಲಕ್ಷಣ ಹೊಂದಿರುವವರು (ಜ್ವರ, ಕೆಮ್ಮು, ಉಸಿರಾಟ ತೊಂದರೆ, ಶೀತ, ಗಂಟಲುನೋವು ಇತ್ಯಾದಿ) ಅದನ್ನು ನಿರ್ಲಕ್ಷಿಸಬೇಡಿರಿ, ತಿಳಿಸದೇ ಇರಬೇಡಿರಿ.
    ಕ್ವಾರೆಂಟೈನ್ ನಲ್ಲಿ ಇರುವವರು, ಅವರೊಂದಿಗೆ ಸಂಪರ್ಕದಲ್ಲಿರುವವರು ಆಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು.
                                ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
                                ಪರೀಕ್ಷೆಗೆ ಮುನ್ನ ಯಾ ನಂತರ  ಗುಂಪು ಸೇರಬೇಡಿರಿ.
                               ಗೆಳೆಯರು ಪರಸ್ಪರ ಹಸ್ತಲಾಘವ, ಆಲಿಂಗನ ನಡೆಸಬೇಡಿರಿ.
                                 ಪುಸ್ತಕ, ಕ್ಯಾಲ್ಕು ಲೆಟರ್, ಪೆನ್, ಪೆನ್ಸಿಲ್, ಇತರ ಜ್ಯೋಮೆಟ್ರಿಕ್ ಉಪಕರಗಳು ಇತ್ಯಾದಿ ಬದಲಿಸಿಕೊಳ್ಳಬೇಡಿರಿ. ಪ್ರತಿಯೊಬ್ಬರೂ ಅವರವರ ಉಪಕರಣಗಳನ್ನು ಅವರೇ ತಂದುಕೊಳ್ಳಿರಿ.
                                 ಪರೀಕ್ಷಾ ಕೇಂದ್ರಗಳಿಗೆ ತೆರಳುವ ವೇಳೆ, ಪರೀಕ್ಷಾ ಕೊಠಡಿಗಳಲ್ಲಿ ಎಲ್ಲರೂ ಮಾಸ್ಕ್ ಧರಿಸಿಯೇ ಇರಬೇಕು.
                                 ಕೈಗಳಿಂದ ಆಗಾಗ ಕಣ್ಣು, ಮೂಗು, ಬಾಯಿ ಇತ್ಯಾದಿ ಸ್ಪರ್ಶಿಸಬೇಡಿರಿ.
                                  ಸಾಧ್ಯವಾದಷ್ಟೂ ವಾಚು, ಉಂಗುರ ಇತ್ಯಾದಿ ಧರಿಸದೇ ಇರಬಾರದು.
                                  ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮುನ್ನ ಸಾಬೂನು ಬಳಸಿ ಕೈತೊಳೆಯಬೇಕು ಯಾ ಸಾನಿಟೈಸರ್ ಬಳಸಿ ರೋಗಾಣುಮುಕ್ತರಾಗಬೇಕು.
                              ಪರೀಕ್ಷೆ ಮುಗಿಸಿ ಮನೆಗಳಿಗೆ ತೆರಳಿದ ತಕ್ಷಣ ಸ್ನಾನ ಮಾಡಿ ನಂತರವೇ ಮನೆಯ ಒಳಹೊಕ್ಕಬೇಕು.
                               ಕುಡಿಯುವ ನೀರನ್ನೂ ನೀವೇ ಹೊಂದಿರಬೇಕು.
   ಬಳಸಿದ ಮಾಸ್ಕ್ ಪರೀಕ್ಷಾ ಕೊಠಡಿ ಯಾ ಆವರಣದಲ್ಲಿ ಎಸೆಯಬೇಡಿರಿ. ಅವನ್ನು ವೈಜ್ಞಾನಿಕ ರೀತಿ ಸಂಸ್ಕರಣೆ ನಡೆಸಬೇಕು. ಮರುಬಳಕೆ ನಡೆಸಬಹುದಾದವನ್ನು ಸಾಬೂನು ಬಳಸಿ ಒಗೆದು, ಒಣಗಿಸಿ ನಂತರ ಬಳಸಬಹುದು.
      ಅಧಿಕಾರಿಗಳು ತಿಳಿಸಿರುವ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಿರಿ.
- ಜಿಲ್ಲಾ ವೈದ್ಯಾಧಿಕಾರಿ, (ಆರೋಗ್ಯ), ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries