HEALTH TIPS

ರಾಜ್ಯದಲ್ಲಿ 2019 ಕ್ಕಿಂತ ಅಧಿಕ ಜಲಮಟ್ಟ -ಪ್ರವಾಹ ಬಂದರೆ ಗತಿ ಏನು? ತಜ್ಞರ ಎಚ್ಚರಿಕೆ


          ತಿರುವನಂತಪುರ: ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಬಿದ್ದ ಮಳೆ ಮತ್ತು ಪ್ರವಾಹವು 2020 ರ ಮಾನ್ಸೂನ್‍ನಲ್ಲಿ ಪುನರಾವರ್ತನೆಯಾಗಬಹುದೇ ಎಂದು ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ವರ್ಷಗಳಿಗಿಂತ ಭಿನ್ನವಾಗಿ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಪ್ರವಾಹವನ್ನು ಹೇಗೆ ನಿಭಾಯಿಸುವುದು ಎಂಬ ಪ್ರಶ್ನೆ ಇದೀಗ ಸರ್ಕಾರವನ್ನೂ ದೃತಿಗೆಡಿಸುತ್ತಿದೆ.
      ಕೋವಿಡ್ ಹಿನ್ನೆಲೆಯಲ್ಲಿ ನೀರಿನ ಬಳಕೆ ತೀವ್ರ ಪ್ರಮಾಣದಲ್ಲಿ ಕುಂಠಿತಗೊಂಡಿದೆ ಎಂದು ತಜ್ಞರು ಕಂಡುಕೊಂಡಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಬಳಕೆ ಕುಸಿದಿದೆ. ಈ ವರ್ಷ ಹೆಚ್ಚು ಮುಂಗಾರು ಮಳೆಯಾಗುವ ಬಗ್ಗೆಯೂ ಈಗಾಗಲೇ ಹವಾಮಾನ ಮನ್ಸೂಚನೆ ನೀಡಿದ್ದು ಮಳೆಗಾಲ ಪ್ರಾರಂಭವಾಗುವ ಮೊದಲು ಅಣೆಕಟ್ಟುಗಳನ್ನು ತೆರೆಯಬೇಕು ಮತ್ತು ನೀರಿನ ಮಟ್ಟವನ್ನು ಕಡಿಮೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮಳೆ ಬಂದರೆ ಇಡುಕ್ಕಿ ಸೇರಿದಂತೆ ರಾಜ್ಯದ ಹೆಚ್ಚಿನ ಅಣೆಕಟ್ಟುಗಳನ್ನು ತೆರೆಯಬೇಕಾಗುತ್ತದೆ.
     ನೈಋತ್ಯ ಮಾನ್ಸೂನ್ ಈ ವರ್ಷದ ಜೂನ್‍ನಲ್ಲಿ ಪ್ರಾರಂಭವಾಗಲಿದ್ದು, ಒಟ್ಟಾರೆ ಮಳೆ ಈ ವರ್ಷ ಭಾರತದಲ್ಲಿ ಸಾಮಾನ್ಯವಾಗಲಿದೆ. ಈ ವರ್ಷ ವಿಶೇಷ ಸಂದರ್ಭದಲ್ಲಿ ಪ್ರವಾಹದ ಪೂರ್ವ ತಯಾರಿ  ಸಿದ್ಧಪಡಿಸುವ ಅಗತ್ಯವಿದೆ ಎಂದು ವಿಜ್ಞಾನಿಗಳು ಮತ್ತು ಪರಿಸರವಾದಿಗಳ ಗುಂಪೆÇಂದು ಪತ್ರದಲ್ಲಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಇಲ್ಲದಿದ್ದರೆ 2018 ರಂತೆ ಪ್ರವಾಹವೂ ಪುನರಾವರ್ತನೆಯಾಗುತ್ತದೆ. ಆಲ್ ಕೇರಳ ನದಿ ಸಂರಕ್ಷಣಾ ಮಂಡಳಿಯ ಅಧ್ಯಕ್ಷ ಪೆÇ್ರಫೆಸರ್ ಎಸ್ ಸೀತಾರಾಮನ್ ನೇತೃತ್ವದ ತಂಡವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಕಳೆದ ಎರಡು ಮಳೆಗಾಲದಲ್ಲಿ ಸಂಕಷ್ಟಗಳನ್ನು ಗಮನಿಸಿ ಕೇರಳ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
       ಪ್ರಸ್ತುತ ರಾಜ್ಯದ ಶೇ 36 ರಷ್ಟು ಅಣೆಕಟ್ಟುಗಳು ಭರ್ತಿ ಸ್ಥಿತಿಯಲ್ಲೇ ಇದೆ. ಕಳೆದ ವರ್ಷ ಇದೇ ಸಮಯದಲ್ಲಿ ನೀರಿನ ಮಟ್ಟ ಕೇವಲ 25.9 ರಷ್ಟಿತ್ತು, ಅಂದರೆ ಕಳೆದ ವರ್ಷಕ್ಕಿಂತ ಶೇಕಡಾ 10 ರಷ್ಟು ಹೆಚ್ಚಿನ ನೀರು ಅಣೆಕಟ್ಟುಗಳಲ್ಲಿದೆ. ರಾಜ್ಯದ ಅಣೆಕಟ್ಟುಗಳಲ್ಲಿನ ನೀರಿನ ಮಟ್ಟವು ಸಾಮಾನ್ಯವಾಗಿ ಮೇ ಅಂತ್ಯದ ವೇಳೆಗೆ ಶೇ.20 ಕ್ಕಿಂತ ಕಡಿಮೆಯಿರುತ್ತದೆ. ಕಳೆದ ವರ್ಷದ ಇದೇ ಅವಧಿಯಲ್ಲಿ, ಒಂದು ವರ್ಷದ ಹಿಂದೆ 70 ದಶಲಕ್ಷ ಯೂನಿಟ್‍ಗಳಿಗೆ ಹೋಲಿಸಿದರೆ 82 ರಿಂದ 88 ಮಿಲಿಯನ್ ಯುನಿಟ್‍ಗಳ ಬಳಕೆ ಇತ್ತು. ಇದಕ್ಕೆ ಕಾರಣವೆಂದರೆ ಲಾಕ್-ಡೌನ್ ಕಾರಣ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿಲ್ಲ. ಕಡಿಮೆ ಬಳಕೆಯಿಂದಾಗಿ ಜೂನ್‍ನಲ್ಲಿ ಮಳೆ ಪ್ರಾರಂಭವಾಗುವವರೆಗೆ ನೀರಿನ ಮಟ್ಟ ಶೇ. 30 ಕ್ಕಿಂತ ಕಡಿಮೆಯಾಗುವುದಿಲ್ಲ ಎಂದು ಗ್ರಹಿಸಲಾಗಿದೆ.
     ಅಣೆಕಟ್ಟುಗಳು ಉಳಿದ ನೀರನ್ನು ಬಳಸಲು ಸಾಕಷ್ಟು ವಿದ್ಯುತ್ ಉತ್ಪಾದಿಸುವುದನ್ನು ಮುಂದುವರಿಸಿದರೂ, ಮೇ ಅಂತ್ಯದ ವೇಳೆಗೆ ಅಣೆಕಟ್ಟುಗಳಲ್ಲಿ ಹೆಚ್ಚಿನ ನೀರು ಸಂಗ್ರಹವಾಗುವ ಸಾಧ್ಯತೆ ಇದೆ. ರಾಜ್ಯದ ಅತಿದೊಡ್ಡ ಅಣೆಕಟ್ಟಾಗಿರುವ ಇಡುಕ್ಕಿ ಪ್ರಸ್ತುತ ನೀರಿನ ಮಟ್ಟವನ್ನು ಶೇಕಡಾ 43 ರಷ್ಟಿದೆ. 2018ರ ಮೇ ಕೊನೆಯಲ್ಲಿ ಅದು ಕೇವಲ 25 ಶೇಕಡಾದಷ್ಟಿತ್ತು. ಇಡುಕ್ಕಿ ಅಣೆಕಟ್ಟು ಮಾನ್ಸೂನ್ ಪ್ರಾರಂಭವಾಗುವ ಎರಡು ವಾರಗಳ ಮೊದಲು ಬಹುತೇಕ ಖಾಲಿಯಾಗುತ್ತಿತ್ತು. ಆದರೆ ಈ ಬಾರಿ ಜೂನ್ ಮೊದಲ ವಾರದಿಂದ ಸಾಮಾನ್ಯ ಮಳೆ ಬಂದರೆ, ಇಡುಕ್ಕಿ ಅಣೆಕಟ್ಟು ಭರ್ತಿಯಾಗಿ ಆತಂಕಕ್ಕೆ ಕಾರಣವಾಗಬಹುದಾಗಿದೆ.
  ಪ್ರಸ್ತುತ ವರ್ಷ ಪ್ರವಾಹ ಪೀಡಿತ ಪ್ರದೇಶಗಳು ಮತ್ತೆ ಅಪಾಯಕ್ಕೆ ಸಿಲುಕುತ್ತವೆ ಎಂದು ತಜ್ಷರು ಎಚ್ಚರಿಸಿರುವರು. ಈ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳು ಮತ್ತು ರಕ್ಷಣಾ ಕಾರ್ಯಗಳಿಗಾಗಿ ವಿಶೇಷ ಕೋವಿಡ್ -19 ಪ್ರವಾಹ ನಿರ್ವಹಣಾ ಪಡೆ ಸಿದ್ಧಪಡಿಸಬೇಕು ಎಂದು ತಜ್ಞರು ಸೂಚಿಸಿದ್ದಾರೆ. 2018 ಮತ್ತು 2019 ರಲ್ಲಿ ರಾಜ್ಯದ ಅನೇಕ ಪ್ರದೇಶಗಳಲ್ಲಿ ದಿನಕ್ಕೆ 30 ಸೆಂಟಿಮೀಟರ್ ಮಳೆಯಾಗಿದೆ. ಈ ಪ್ರದೇಶಗಳು ಭೂಕುಸಿತ ಮತ್ತು ಮಣ್ಣಿನ ಕುಸಿತಗಳಿಗೆ  ಪಳಗಾಗಿದ್ದವು. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಬೇಕಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
       ಕೆಎಸ್‍ಇಬಿ ಸಿದ್ಧವಾಗಿದೆ:
    ಮುಂಬರುವ ವರ್ಷಗಳಲ್ಲಿ ಪ್ರವಾಹದ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೆಎಸ್‍ಇಬಿ(ವಿದ್ಯುತ್ ಪ್ರಸರಣ ಮಂಡಳಿ) ಹೇಳಿದೆ ಎಂದು ವರದಿ ಉಲ್ಲೇಖಿಸಿದೆ. ಜೂನ್ ತಿಂಗಳಲ್ಲಿ ವಿದ್ಯುತ್ ಉತ್ಪಾದನೆಯು ಅತಿ ಹೆಚ್ಚು ಇರುತ್ತದೆ. ನೀರಿನ ಲಭ್ಯತೆ ಹೆಚ್ಚಾದಂತೆ ಉತ್ಪಾದನೆಯೂ ಹೆಚ್ಚಾಗುತ್ತದೆ. ಅದೇ ಸಮಯದಲ್ಲಿ, ಅತಿಯಾದ ನೀರಿನ ಮಟ್ಟವಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅಣೆಕಟ್ಟನ್ನು ವರ್ಷದ ವಿವಿಧ ಸಮಯಗಳಿಗಾಗುವಂತೆ ನಿರ್ವಹಿಸಲಾಗುತ್ತಿದೆ. ಕೆಎಸ್‍ಇಬಿಯ ನಿರ್ದೇಶಕ (ಜನರಲ್ - ಸಿವಿಲ್) ಬಿಬಿನ್ ಜೋಸೆಫ್ ಮಾತನಾಡಿ, ನೀರಿನ ಮಟ್ಟ ನಿಗದಿತ ಮಟ್ಟಕ್ಕೆ ಏರಿದರೆ ಅಣೆಕಟ್ಟು ತೆರೆಯಲಾಗುವುದು ಮತ್ತು ನೀರಿನ ಮಟ್ಟವನ್ನು ನಿಯಂತ್ರಿಸಲಾಗುವುದು ಎಂದಿರುವರು. ಪ್ರಸ್ತುತ ನೀರಿನ ಮಟ್ಟವು ನಿಗದಿತ ಮಿತಿಗಳನ್ನು ಮೀರಿಲ್ಲ ಎಂದು ಮುಖ್ಯ ಅಭಿಯಂತರ ಸುಪ್ರಿಯಾ ಎಸ್ ಹೇಳಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries