ಕಾಸರಗೋಡು: ಕರ್ನಾಟಕದ ಕೋವಿಡ್ ಸೋಂಕು ವ್ಯಾಪಕವಾಗಿರುವ ಹಾಟ್ ಸ್ಪಾಟ್ ಮತ್ತು ಇತರ ಪ್ರದೇಶಗಳಿಂದ ಬಳಸುದಾರಿಗಳ ಮೂಲಕ ಜನರನ್ನು ಅಕ್ರಮವಾಗಿ ಕೇರಳಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದು, ಇದು ಸರ್ಕಾರದ ಲಾಕ್‍ಡೌನ್ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುತ್ತಿದೆ.
ಸರ್ಕಾರದ ವತಿಯಿಂದ ವಿಶೇಷ ಪಾಸ್ ಬಳಸಿ, ತಲಪ್ಪಾಡಿ ರಾಷ್ಟ್ರೀಯ ಹೆದ್ದಾರಿ ಮೂಲಕ ಆಗಮಿಸುವವರಿಗೆ ಮಾತ್ರ ಕೇರಳ ಪ್ರವೇಶಿಸಲು ಅನುಮತಿ ನೀಡಲಾಗಿದ್ದರೂ, ಕೆಲವರು ಕೇರಳ-ಕರ್ನಾಟಕ ಗಡಿ ಪ್ರದೇಶದ ಬಳಸು ದಾರಿಯಾಗಿ ಕೇರಳ ಪ್ರವೇಶಿಸುತ್ತಿರುವುದಾಗಿಯೂ ಆರೋಪ ಕೇಳಿಬರುತ್ತಿದೆ. ಇಂತಹ ಧೋರಣೆ ಕೋವಿಡ್ ಪ್ರತಿರೋಧ ಚಟುವಟಿಕೆಗಳ ಮುಂದಿನ ಹಂತ ಆರಂಭಕ್ಕೆ ತೊಡಕಾಗುವ ಭೀತಿಯಿದೆ. ಈಗಾಗಲೇ ಕರ್ನಾಟಕದಲ್ಲಿ ಮದ್ಯಮಾರಾಟ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಗಡಿ ಪ್ರದೇಶದ ಮೂಲಕ ಭಾರಿ ಪ್ರಮಾಣದಲ್ಲಿ ಕೇರಳಕ್ಕೆ ಅನಧಿಕೃತವಾಗಿ ಮದ್ಯಸಾಗಾಟವೂ ನಡೆಯುತ್ತಿದೆ. ಬಂಟ್ವಾಳ ತಾಲೂಕಿನ ಪೆರುವಾಯಿಯಿಂದ ಪೂವನಡ್ಕ ಹೊಳೆದಾಟಿ ಹಾಗೂ ಅಡ್ಯನಡ್ಕದಿಂದ ಕುಞÂಪಾದೆ, ಬಾಕಿಲಪದವು ಮೂಲಕ ಹೊಳೆ ಅಡ್ಡದಾಟಿ ಮದ್ಯ ರವಾನೆಯಾಗುತ್ತಿದೆ. ಜತೆಗೆ ಕರ್ನಾಟಕದ ಕೆಲವೊಂದು ಹಾಟ್‍ಸ್ಪೋಟ್ ಪ್ರದೇಶಗಳಿಂದ ಈ ಹಾದಿಯಾಗಿ ಕೇರಳಕ್ಕೆ ಜನರೂ ಆಗಮಿಸುತ್ತಿರುವುದಾಗಿ ಮಾಹಿತಿಯಿದೆ. ಇಂತಹ ಗಡಿ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಅಭಿಮತ:
ಕೇರಳ-ಕರ್ನಾಟಕದ ಕೆಲವು ಗಡಿಪ್ರದೇಶದ ಬಳಸುದಾರಿ ಮೂಲಕ ಪಾಸ್ ಗಳಿಲ್ಲದೆ ಜನರನ್ನು ಅಕ್ರಮವಾಗಿ ಕೇರಳಕ್ಕೆ ಕರೆತರಲಾಗುತ್ತಿರುವುದನ್ನು ತಡೆಗಟ್ಟಲು ಇಂಥಾ ಪ್ರದೇಶಗಳಲ್ಲಿ ಸಶಸ್ತ್ರ ಪೆÇಲೀಸರನ್ನು ನೇಮಿಸುವ ಕ್ರಮಚುರುಕುಗೊಳಿಸಲಾಗಿದೆ. ತಲಪ್ಪಾಡಿ ಗಡಿ ಚೆಕ್ ಪೆÇೀಸ್ಟ್ ಅಲ್ಲದೆ, ಮಂಜೇಶ್ವರ ಪೆÇಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳ 22 ಗಡಿಪ್ರದೇಶಗಳಲ್ಲಿ, ಆದೂರಿನ 9 ಗಡಿ ಪ್ರದೇಶಗಳಲ್ಲಿ, ಬದಿಯಡ್ಕದ 3 ಗಡಿ ಪ್ರದೇಶಗಳಲ್ಲಿ, ಬಂದಡ್ಕ-ಮಾಣಿಮೂಲೆ, ಪಾಣತ್ತೂರುಪ್ರದೇಶಗಳಲ್ಲಿ ಸಶಸ್ತ್ರ ಪೆÇಲೀಸರನ್ನು ನೇಮಿಸಲಾಗಿದೆ.
ಡಾ. ಡಿ.ಸಜಿತ್‍ಬಾಬು, ಜಿಲ್ಲಾಧಿಕಾರಿ
ಕಾಸರಗೋಡು


