HEALTH TIPS

ಕೊರೊನಾ : ಕೇರಳದಲ್ಲಿ ಮತ್ತೆ ಕರಾಳತೆ-42 ಮಂದಿಗೆ ಸೋಂಕು ದೃಢ


          ಕಾಸರಗೋಡು: ಕೇರಳದಲ್ಲಿ ಶುಕ್ರವಾರ ಒಂದೇ ದಿನ 42 ಕೊರೊನಾ ಪ್ರಕರಣಗಳು ದೃಢಗೊಂಡಿದೆ. ಕೇರಳಕ್ಕೆ ಇದು ಕೊರೊನಾ ಇತಿಹಾಸದ ಕರಾಳ ಶುಕ್ರವಾರವಾಗಿದೆ. ರಾಜ್ಯದಲ್ಲಿ ಅತ್ಯಂತ ಹೆಚ್ಚು ಕೊರೊನಾ ಸೋಂಕು ದೃಢಗೊಂಡ ದಿನವಾಗಿದೆ. ಇದೇ ವೇಳೆ ರಾಜ್ಯದಲ್ಲಿ ಇಬ್ಬರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ 7 ಮಂದಿಗೆ ಸೋಂಕು ದೃಢಗೊಂಡಿದೆ. ಇದರೊಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 26 ಕ್ಕೇರಿತು.
         ಕಣ್ಣೂರು ಜಿಲ್ಲೆ-12, ಕಾಸರಗೋಡು-7, ಕಲ್ಲಿಕೋಟೆ-5, ಪಾಲ್ಘಾಟ್-5, ತೃಶ್ಶೂರು-4, ಮಲಪ್ಪುರಂ-4, ಕೋಟ್ಟಯಂ-2, ಕೊಲ್ಲಂ-1, ಪತ್ತನಂತಿಟ್ಟ-1, ವಯನಾಡು-1 ಎಂಬಂತೆ ರೋಗ ಬಾ„ಸಿದೆ. ಈ ಪೈಕಿ 21 ಮಂದಿ ಮಹಾರಾಷ್ಟ್ರದಿಂದ ಬಂದವರು.  ತಮಿಳುನಾಡು ಹಾಗು ಆಂಧ್ರದಿಂದ ಬಂದ ತಲಾ ಒಬ್ಬರಿಗೆ ರೋಗ ಬಾಧಿಸಿದೆ. ವಿದೇಶದಿಂದ ಬಂದ 17 ಮಂದಿಗೆ ಸೋಂಕು ದೃಢೀಕರಿಸಲಾಗಿದೆ. ಕಣ್ಣೂರಿನಲ್ಲಿ ಒಬ್ಬರಿಗೆ ಸಂಪರ್ಕದಿಂದ ರೋಗ ಬಂದಿದ್ದು, ಕಲ್ಲಿಕೋಟೆಯಲ್ಲಿ ಒಬ್ಬರು ಆರೋಗ್ಯ ಕಾರ್ಯಕರ್ತೆಗೆ ರೋಗ ಬಾ„ಸಿದೆ. 
         ರಾಜ್ಯದಲ್ಲಿ ಇದುವರೆಗೆ 732 ಮಂದಿಗೆ ರೋಗ ಬಾಧಿಸಿದೆ. ಪ್ರಸ್ತುತ 216 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 84258 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 83649 ಮಂದಿ ಮನೆಗಳಲ್ಲೂ, 609 ಮಂದಿ ಆಸ್ಪತ್ರೆಗಳಲ್ಲೂ ಮತ್ತು ಇನ್‍ಸ್ಟಿಟ್ಯೂಶನಲ್ ಕ್ಯಾರೆಂಟೈನ್‍ನಲ್ಲಿ ನಿಗಾವಣೆಯಲ್ಲಿದ್ದಾರೆ. ಶುಕ್ರವಾರ ಶಂಕಿತ 162 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ತನಕ 51310 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು ಲಭ್ಯ 49535 ನೆಗೆಟಿವ್ ಆಗಿದೆ.
      ಮಹಿಳೆಯ ಸಾವು : ಮುಂಬೈಯಿಂದ ಬಂದಿದ್ದ ಚಾವಕ್ಕಾಡ್ ನಿವಾಸಿಯಾಗಿರುವ ಖದೀಜಾ(73) ಗುರುವಾರ ರಾತ್ರಿ ಕೋವಿಡ್ 19 ನಿಂದ ಸಾವಿಗೀಡಾದರು.
      ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 7 ಮಂದಿಗೆ ಕೋವಿಡ್ ಪಾಸಿಟಿವ್ : ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 7 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಪುತ್ತಿಗೆ ನಿವಾಸಿಯಾಗಿರುವ 57 ವರ್ಷ ಪ್ರಾಯದ ವ್ಯಕ್ತಿ, ಮುಳಿಯಾರು ನಿವಾಸಿ 42 ವರ್ಷದ ವ್ಯಕ್ತಿ, ಕುಂಬಳೆ ನಿವಾಸಿಗಳಾದ 36, 38, 42, 56 ವರ್ಷ ಪ್ರಾಯದ ವ್ಯಕ್ತಿಗಳಿಗೆ ಸೋಂಕು ಖಚಿತಗೊಂಡಿದೆ. ಇವರೆಲ್ಲರೂ ಪುರುಷರಾಗಿದ್ದಾರೆ. ಪುತ್ತಿಗೆ ನಿವಾಸಿ ಮಹಾರಾಷ್ಟ್ರದಿಂದ ಆಗಮಿಸಿದ್ದಾರೆ. ಕುಂಬಳೆ ನಿವಾಸಿಗಳು ಒಂದೇ ವಾಹನದಲ್ಲಿ ಸಂಚರಿಸಿದ್ದು, ಆ ಮೂಲಕ ಸೋಂಕು ತಗುಲಿಸಿಕೊಂಡವರು. ಇವರಲ್ಲಿ ಇಬ್ಬರು ಸಹೋದರರಾಗಿದ್ದಾರೆ. ಇವರೆಲ್ಲರೂ ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2648 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2161 ಮಂದಿ, ಆಸ್ಪತ್ರೆಗಳಲ್ಲಿ 487 ಮಂದಿ ನಿಗಾದಲ್ಲಿದ್ದಾರೆ. ಶುಕ್ರವಾರ 60 ಮಂದಿ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 
      ಜಿಲ್ಲೆಯಲ್ಲಿ 6021 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಲಭ್ಯ 5434 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ.   
     ಮಾಸ್ಕ್ ಧರಿಸದ 364 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸಿದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 364 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.
       ಲಾಕ್ ಡೌನ್ ಉಲ್ಲಂಘನೆ : 5 ಮಂದಿ ವಿರುದ್ಧ ಕೇಸು : ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 5 ಪ್ರಕರಣಗಳನ್ನು ದಾಖಲಿಸಲಾಗಿದೆ. 6 ಮಂದಿಯನ್ನು ಬಂಧಿಸಲಾಗಿದ್ದು, 4 ವಾಹನಗಳನ್ನು ವಶಪಡಿಸಲಾಗಿದೆ. ಕುಂಬಳೆ ಪೆÇಲೀಸ್ ಠಾಣೆಯಲ್ಲಿ 1, ಬೇಡಗಂ 1, ಮೇಲ್ಪರಂಬ 1, ರಾಜಪುರಂ 2 ಕೇಸು ದಾಖಲಿಸಲಾಗಿದೆ. ಈ ಆರೋಪದಲ್ಲಿ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 2361 ಕೇಸು ದಾಖಲಿಸಲಾಗಿದೆ. 3009 ಮಂದಿಯನ್ನು ಬಂ„ಸಲಾಗಿದ್ದು, 955 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries