ಕಾಸರಗೋಡು: ರಾಜ್ಯದಲ್ಲಿಂದು ಭಾರೀ ಸಂಖ್ಯೆಯ ಕೊರೊನಾ ಸೋಂಕಿತರನ್ನು ಗುರುತಿಸುವುದರೊಂದಿಗೆ ವೈರಸ್ ನ ತಾಂಡವ ಥರಗುಟ್ಟುವಂತೆ ಮಾಡಿದೆ. ಕಾಸರಗೋಡು ಜಿಲ್ಲೆಯಲ್ಲಿ ಮೂವರ ಸಹಿತ ಕೇರಳ ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 67 ಕೊರೊನಾ ಪ್ರಕರಣಗಳು ದೃಢಗೊಂಡಿದೆ. ಕೇರಳದಲ್ಲಿ ಒಂದೇ ದಿನ ಇಷ್ಟು ಸಂಖ್ಯೆಯಲ್ಲಿ ಕೊರೊನಾ ವೈರಸ್ ಸೋಂಕು ದೃಢಗೊಂಡದ್ದು ಪ್ರಥಮವಾಗಿದೆ. ರಾಜ್ಯದಲ್ಲಿ 10 ಮಂದಿ ಗುಣಮುಖರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಪಾಲ್ಘಾಟ್-29, ಕಣ್ಣೂರು-8, ಕೋಟ್ಟಯಂ-6, ಮಲಪ್ಪುರಂ-5, ಎರ್ನಾಕುಳಂ-5, ತೃಶ್ಶೂರು-4, ಕೊಲ್ಲಂ-4, ಕಾಸರಗೋಡು-3, ಆಲಪ್ಪುಳ-3 ಎಂಬಂತೆ ಮಂಗಳವಾರ ರೋಗ ದೃಢೀಕರಿಸಲಾಗಿದೆ. ಕೇರಳದಲ್ಲಿ ಇದು ವರೆಗೆ 6 ಮಂದಿ ಸಾವಿಗೀಡಾಗಿದ್ದಾರೆ.
ರೋಗ ಬಾಧಿತರಲ್ಲಿ 27 ಮಂದಿ ವಿದೇಶದಿಂದ ಬಂದವರು. ತಮಿಳುನಾಡಿನಿಂದ 9, ಮಹಾರಾಷ್ಟ್ರದಿಂದ 15, ಗುಜರಾತ್‍ನಿಂದ 5, ಕರ್ನಾಟಕದಿಂದ ಇಬ್ಬರು, ಪಾಂಡಿಚೇರಿ ಮತ್ತು ದೆಹಲಿಯಿಂದ ತಲಾ ಒಬ್ಬರಿಗೆ ರೋಗ ದೃಢೀಕರಿಸಲಾಗಿದೆ. ಸಂಪರ್ಕದಿಂದ 7 ಮಂದಿಗೆ ಸೋಂಕು ಬಾಧಿಸಿದೆ.
ರಾಜ್ಯದಲ್ಲಿ ಮಂಗಳವಾರ 10 ಮಂದಿ ಗುಣಮುಖರಾಗಿದ್ದಾರೆ. ಕಾಸರಗೋಡು-2, ಕೋಟ್ಟಯಂ-1, ಮಲಪ್ಪುರಂ-3, ಆಲಪ್ಪುಳ-1, ಪಾಲ್ಘಾಟ್-2, ಎರ್ನಾಕುಳಂ-1 ಎಂಬಂತೆ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇದು ವರೆಗೆ 963 ಮಂದಿಗೆ ರೋಗ ಬಾಧಿಸಿದ್ದು, ಪ್ರಸ್ತುತ 415 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 542 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು 100433 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 103528 ಮನೆಗಳಲ್ಲೂ, 808 ಮಂದಿ ಆಸ್ಪತ್ರೆಗಳಲ್ಲೂ ನಿಗಾವಣೆಯಲ್ಲಿದ್ದಾರೆ.
ಮಂಗಳವಾರ ಶಂಕಿತ 186 ಮಂದಿಯನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ತನಕ 56704 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಲಭ್ಯ 54836 ನೆಗೆಟಿವ್ ಆಗಿದೆ. ವಿದೇಶದಲ್ಲಿ
ಲಾಕ್‍ಡೌನ್ ಉಲ್ಲಂಘನೆ: ಬಂಧನ : ಲಾಕ್‍ಡೌನ್ ಉಲ್ಲಂಘಿಸಿ ಕಾರಿನಲ್ಲಿ ಸುತ್ತಾಡುತ್ತಿದ್ದ ಪತ್ವಾಡಿ ನಿವಾಸಿ ಮೊಹಮ್ಮದ್ ಶಮೀರ್(40)ನನ್ನು ಮಂಜೇಶ್ವರ ಪೆÇಲೀಸರು ಬಂಧಿಸಿ ಕ್ವಾರಂಟೈನ್‍ಗೆ ಕಳುಹಿಸಿದ್ದಾರೆ. ಆಂಧ್ರದಿಂದ ಮರಳಿದ ಈತ ಕ್ವಾರಂಟೈನ್‍ನಲ್ಲಿರದೆ ಸುತ್ತಾಡುತ್ತಿದ್ದ ಕಾರಣದಿಂದ ಬಂಧಿಸಲಾಗಿದೆ.
ಜಿಲ್ಲೆಯಲ್ಲಿ ಮೂವರಿಗೆ ಕೋವಿಡ್ ಸೋಂಕು :
ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ಮೂವರಿಗೆ ಕೋವಿಡ್ ಸೋಂಕು ಖಚಿತಗೊಂಡಿದೆ. ಇಬ್ಬರು ಮಂಗಳವಾರ ರೋಗದಿಂದ ಗುಣಮುಖರಾಗದ್ದಾರೆ. ಮಹಾರಾಷ್ಟ್ರದಿಂದ ಆಗಮಿಸಿದ ಮಧೂರು ನಿವಾಸಿಗಳಾದ ಇಬ್ಬರು, ಕೊಲ್ಲಿ ರಾಷ್ಟ್ರದಿಂದ ಆಗಮಿಸಿದ ಮಡಿಕೈ ನಿವಾಸಿಗೂ ರೋಗ ಖಚಿತವಾಗಿದೆ. ಮಧೂರು ನಿವಾಸಿಗಳಾದ 28 ವರ್ಷದ ಪುರುಷ ಮತ್ತು 25 ವರ್ಷದ ಮಹಿಳೆ(ಇವರು ದಂಪತಿ), ಮಡಿಕೈ ನಿವಾಸಿ 28 ವರ್ಷದ ವ್ಯಕ್ತಿ ರೋಗ ಬಾಧಿತರು. ಮಧೂರು ನಿವಾಸಿಗಳು ಮೇ 22 ರಂದು ಮುಂಬಯಿಂದ ಬಸ್‍ನಲ್ಲಿ ಹೊರಟು, 23ರಂದು ತಲಪ್ಪಾಡಿಗೆ ಆಗಮಿಸಿದ್ದರು. ರೋಗ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಇವರನ್ನು ಅದೇ ದಿನ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಂಕು ಖಚಿತಗೊಂಡ ಹಿನ್ನೆಲೆಯಲ್ಲಿ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ.
ಮಡಿಕೈ ನಿವಾಸಿ ಮೇ 19ರಂದು ಖತ್ತರ್‍ನಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆಗಮಿಸಿದ ದಿನದಿಂದಲೇ ಕಾಂಞಂಗಾಡಿನ ಸರ್ಕಾರಿ ಕ್ವಾರೆಂಟೈನ್‍ನಲ್ಲಿ ದಾಖಲಿಸಲಾಗಿತ್ತು. ಸೋಂಕು ಖಚಿತಗೊಂಡ ಹಿನ್ನೆಲೆಯಲ್ಲಿ ಇವರನ್ನು ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಡಾ.ಎಂ.ವಿ.ರಾಮದಾಸ್ ತಿಳಿಸಿದ್ದಾರೆ. ಇದೇ ವೇಳೆ ಸೋಂಕು ಖಚಿತಗೊಂಡು ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಪೈವಳಿಕೆ ಕೆ ನಿವಾಸಿಯಾದ 51 ವರ್ಷದ ವ್ಯಕ್ತಿ, ಕುಂಬಳೆ ನಿವಾಸಿ 49 ವರ್ಷದ ವ್ಯಕ್ತಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 3205 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2624 ಮಂದಿ, ಆಸ್ಪತ್ರೆಗಳಲ್ಲಿ 581 ಮಂದಿ ನಿಗಾದಲ್ಲಿದ್ದಾರೆ. 340 ಮಂದಿ ಮಂಗಳವಾರ ತಮ್ಮ ನಿಗಾ ಅವ„ ಪೂರ್ಣಗೊಳಿಸಿದ್ದಾರೆ. ಮಂಗವಾರ ನೂತನವಾಗಿ 32 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ 6332 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಲಭ್ಯ 5722 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ.
ಮಾಸ್ಕ್ ಧರಿಸದೇ ಇದ್ದ ಆರೋಪ: 262 ಮಂದಿಗೆ ಕೇಸು :
ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 262 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 2843 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.
ಲಾಕ್ ಡೌನ್ ಉಲ್ಲಂಘನೆ: 7 ಕೇಸು ದಾಖಲು :
ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 7 ಕೇಸು ದಾಖಲಿಸಲಾಗಿದೆ. 18 ಮಂದಿಯನ್ನು ಬಂಧಿಸಲಾಗಿದೆ. 2 ವಾಹನಗಳನ್ನು ವಶಪಡಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 2371 ಕೇಸುಗಳನ್ನು ದಾಖಲಿಸಲಾಗಿದೆ. 3027 ಮಂದಿಯನ್ನು ಬಂಧಿಸಲಾಗಿದೆ. 957 ವಾಹನಗಳನ್ನು ವಶಪಡಿಸಲಾಗಿದೆ.


