HEALTH TIPS

ಹೊಸ ತುರ್ತು ಸರ್ಕಾರಿ ಮಾನದಂಡ ಪ್ರಕಟ: ವಿದೇಶಗಳಿಂದ ಬಂದವರಿಗೆ 7 ದಿನಗಳ ಇನ್ಸ್ ಸ್ಟಿಟ್ಯೂಷನಲ್ ನಿಗಾ, 7 ದಿನ ಮನೆಗಳಲ್ಲಿ ನಿಗಾ.


          ಕಾಸರಗೋಡು:  ಇಂದು ಹೊರಡಿಸಲಾದ ಹೊಸ ತುರ್ತು ಸರ್ಕಾರಿ ಮಾನದಂಡಗಳ ಪ್ರಕಾರ ವಿದೇಶಗಳಿಂದ ಆಗಮಿಸಿದವರಿಗೆ 7 ದಿನಗಳ ಇನ್ಸ್ ಸ್ಟಿಟ್ಯೂ ಷನಲ್ ಕ್ವಾರೆಂಟೈನ್ ಮತ್ತು 7 ದಿನಗಳ ಮನೆ ನಿಗಾ( ಮನೆಗಳಲ್ಲಿ ರೂಂ ಕ್ವರೆಂಟೈನ್) ನಿಗದಿಪಡಿಸಲಾಗಿದೆ.
          ಹೊಸ ಮಾನದಂಡದ ಪ್ರಕಾರ 7 ದಿನಗಳ ಕಾಲ ಸರ್ಕಾರಿ ನಿಗಾದಲ್ಲಿದ್ದು, ಯಾವುದೇ ರೋಗಲಕ್ಷಣ ಹೊಂದದೇ ಇರುವ ಜಿಲ್ಲೆಯ ಎಲ್ಲ ಮಂದಿ ಮಂಗಳವಾರ ಸರ್ಕಾರಿ ನಿಗಾ ಕೇಂದ್ರಗಳಿಂದ ಬಿಡುಗಡೆಗೊಂಡು ಮನೆಗಳಲ್ಲಿ ರೋಂ ಕ್ವಾರೆಂಟೈನ್ ನಲಿರುವ ಕ್ರಮ ಕೈಗೊಳ್ಳಕಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿರುವರು. ಇವರ ಮುಂದಿನ 7 ದಿನಗಳ ರೂಂ ಕ್ವಾರೆಂಟೈನ್ ಸೂಕ್ತ ರೀತಿ ನಡೆಸುವ ಬಗ್ಗೆ ಖಚಿತಪಡಿಸಿಕೊಳ್ಳಲು ಆರೋಗ್ಯ ಕಾರ್ಯಕರ್ತರು ಮತ್ತು ವಾರ್ಡ್ ಮಟ್ಟದ ಜಾಗ್ರತಾ ಸಮಿತಿ ಕ್ರಮ ಕೈಗೊಳ್ಳಬೇಕು ಎಂದವರು ನುಡಿದರು. ರೋಗ ಲಕ್ಷಣ ಹೊಂದಿರುವವರ ಸ್ಯಾಂಪಲ್ ತಪಾಸಣೆಯ ಫಲಿತಾಂಶ ಬಂದ ನಂತರವಷ್ಟೇ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಮನೆಗಳಲ್ಲಿ ರೂಂ ಕ್ವಾರೆಂಟೈನ್ ನಲ್ಲಿರುವವರು ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries