HEALTH TIPS

ಕೋವಿಡ್-ಜಿಲ್ಲೆಯ ಎಲ್ಲೆಲ್ಲ ಎಷ್ಟೆಷ್ಟು ಬಾಧಿತರು-ಇಲ್ಲಿದೆ ವಿವರ


               ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುತ್ತಿರುವ ಮೂರನೇ ಹಂತದಲ್ಲಿ 21 ಸ್ಥಳೀಯಾಡಳಿತ ಸಂಸ್ಥೆಗಳ ವಾಪ್ತಿಯಲ್ಲಿ ಸೋಂಕು ಖಚಿತಗೊಂಡವರಿದ್ದಾರೆ. ಬುಧವಾರದ ವರೆಗೆ ಜಿಲ್ಲೆಯಲ್ಲಿ ಮೂರನೇ ಹಂತದಲ್ಲಿ ಮಾತ್ರ 63 ಮಂದಿ ರೋಗಿಗಳಿದ್ದಾರೆ. ಇವರಲ್ಲಿ 14 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಸೋಂಕು ಖಚಿತಗೊಂಡವರಲ್ಲಿ ಬಹುಪಾಲು ಮಂದಿ ಮಹಾರಾಷ್ಟ್ರದಿಂದ ಆಗಮಿಸಿದವರು (44 ಮಂದಿ). ಮೂರನೇ ಹಂತದಲ್ಲಿ ಅತ್ಯಧಿಕ ಪ್ರಮಾಣದ ರೋಗಿಗಳು ಕುಂಬಳೆ ಗ್ರಾಮಪಂಚಾಯತ್ ಗೆ ಸೇರಿದವರು(18 ಮಂದಿ). ಪೈವಳಿಕೆ ಗ್ರಾಮಪಂಚಾಯತ್ ನಲ್ಲಿ 10 ಮಂದಿ, ಮಂಗಲ್ಪಾಡಿಯಲ್ಲಿ 6 ಮಂದಿ, ಕಾಸರಗೋಡು ನಗರಸಭೆ 5 ಮಂದಿ, ವರ್ಕಾಡಿಯಲ್ಲಿ 3, ಕೋಡೋ-ಬೇಳೂರು, ಮಧೂರು, ಮೀಂಜ, ಚೆಮ್ನಾಡ್, ಉದುಮಾದಲ್ಲಿ ತಲಾ ಇಬ್ಬರು, ಮಡಿಕೈ, ಕಳ್ಳಾರ್, ನೀಲೇಶ್ವರ ನಗರಸಭೆ, ಅಜಾನೂರು, ಪುಲ್ಲೂರು-ಪೆರಿಯ, ತ್ರಿಕರಿಪುರ, ಚೆಂಗಳ, ಮುಳಿಯಾರು, ಪುತ್ತಿಗೆ, ಕುಂಬ್ಡಾಜೆ, ಮಂಜೇಶ್ವರ ಗ್ರಾಮಪಂಚಾಯತ್ ಗಳಲ್ಲಿ ತಲಾ ಒಬ್ಬರು ರೋಗಿಗಳಿದ್ದಾರೆ.
         ಕೋವಿಡ್ ಸೋಂಕಿನ ಮೊದಲ ಮತ್ತು ಎರಡನೇ ಹಂತಗಳಲ್ಲಿ ಜಿಲ್ಲೆಯಲ್ಲಿ 178 ಮಂದಿಗೆ ರೋಗ ಖಚಿತವಾಗಿತ್ತು. ಅಂದು ಚೆಮ್ನಾಡ್ ಗ್ರಾಮಪಂಚಾಯತ್ ನಲ್ಲಿ ಅತ್ಯಧಿಕ ಪ್ರಮಾಣದ ರೋಗಿಗಳಿದ್ದರು(39 ಮಂದಿ). ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ 34 ಮಂದಿ, ಚೆಂಗಳದಲ್ಲಿ 25, ಮೊಗ್ರಾಲ್ ಪುತ್ತೂರು 15, ಉದುಮಾ 14, ಮಧೂರು 13, ಮುಳಿಯಾರು 8, ಕಾಞಂಗಾಡ್ ನಗರಸಭೆ ವ್ಯಾಪ್ತಿಯಲ್ಲಿ 7, ಪಳ್ಳಿಕ್ಕರೆಯಲ್ಲಿ 6, ಕುಂಬಳೆ, ಅಜಾನೂರು ಗ್ರಾಮಪಂಚಾಯತ್ ಗಳಲ್ಲಿ ತಲಾ 4, ಬದಿಯಡ್ಕ 3, ಪುಲ್ಲೂರು-ಪೆರಿಯದಲ್ಲಿ 2, ಪೈವಳಿಕೆ,ಪಡನ್ನ, ಮಂಗಲ್ಪಾಡಿ, ಮೀಂಜಗಳಲ್ಲಿ ತಲಾ ಒಬ್ಬರು ರೋಗಿಗಳಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries