ಕಾಸರಗೋಡು: ಜಿಲ್ಲೆಯಲ್ಲಿ 10 ಮಂದಿಗೆ ಸಹಿತ ಕೇರಳದಲ್ಲಿ ಬುಧವಾರ ಹೊಸದಾಗಿ 40 ಮಂದಿಗೆ ಕೊರೊನಾ ಸೋಂಕು ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ 10 ಮಂದಿ ರೋಗ ಮುಕ್ತರಾಗಿದ್ದಾರೆ.
ಕಾಸರಗೋಡು-10, ಪಾಲ್ಘಾಟ್-8, ಆಲಪ್ಪುಳ-7, ಕೊಲ್ಲಂ-4, ಪತ್ತನಂತಿಟ್ಟ-3, ವಯನಾಡು-3, ಕಲ್ಲಿಕೋಟೆ-2, ಎರ್ನಾಕುಳಂ-2, ಕಣ್ಣೂರು-1 ಎಂಬಂತೆ ರೋಗ ಬಾ„ಸಿದೆ. ರೋಗ ಬಾ„ತರಲ್ಲಿ 16 ಮಂದಿ ಮಹಾರಾಷ್ಟ್ರದಿಂದ ಬಂದವರು, ತಮಿಳುನಾಡಿನಿಂದ 5, ತೆಲಂಗಾನ-1, ದೆಹಲಿ-3, ಆಂಧ್ರ-1, ಕರ್ನಾಟಕ-1, ಉತ್ತರ ಪ್ರದೇಶದಿಂದ ಬಂದ ಒಬ್ಬರಿಗೆ ರೋಗ ಖಾತರಿಯಾಗಿದೆ. ವಿದೇಶದಿಂದ ಬಂದ 9 ಮಂದಿಗೆ ರೋಗ ದೃಢೀಕರಿಸಲಾಗಿದೆ. ಸಂಪರ್ಕದಿಂದ ಮೂವರಿಗೆ ರೋಗ ಬಾ„ಸಿದೆ. ಮಲಪ್ಪುರ-6, ಆಲಪ್ಪುಳ-1, ವಯನಾಡು-1, ಕಾಸರಗೋಡು-2 ಎಂಬಂತೆ ಗುಣಮುಖರಾಗಿದ್ದಾರೆ. ವಿದೇಶದಲ್ಲಿ ಕೇರಳದ 173 ಮಂದಿ ಕೋವಿಡ್‍ನಿಂದ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 81 ಹಾಟ್ ಸ್ಪಾಟ್‍ಗಳಿವೆ.
ಕೇರಳದಲ್ಲಿ ಈ ತನಕ 1004 ಮಂದಿಗೆ ರೋಗ ಬಾ„ಸಿದೆ. ಪ್ರಸ್ತುತ 445 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 553 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 1,07,832 ಮಂದಿ ನಿಗಾವಣೆಯಲ್ಲಿದ್ದಾರೆ. ಈ ಪೈಕಿ 1,06,940 ಮಂದಿ ಮನೆಗಳಲ್ಲೂ ಹಾಗು ಇನ್‍ಸ್ಟಿಟ್ಯೂಶನಲ್ ಕ್ವಾರೆಂಟೈನ್‍ನಲ್ಲಿದ್ದಾರೆ. 892 ಮಂದಿ ಆಸ್ಪತ್ರೆಗಳಲ್ಲಿ ನಿಗಾವಣೆಯಲ್ಲಿದ್ದಾರೆ. ಬುಧವಾರ ವಿವಿಧ ಆಸ್ಪತ್ರೆಗಳಿಗೆ ಶಂಕಿತ 229 ಮಂದಿಯನ್ನು ದಾಖಲಿಸಲಾಗಿದೆ. 58866 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಲಭ್ಯ 56558 ನೆಗೆಟಿವ್ ಆಗಿದೆ.
ಕಾಸರಗೋಡು ಜಿಲ್ಲೆಯಲ್ಲಿ 10 ಮಂದಿಗೆ ಸೋವಿಡ್ ಸೋಂಕು :
ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 10 ಮಂದಿಗೆ ಕೋವಿಡ್ ಸೋಂಕು ಖಚಿತವಾಗಿದೆ. ಮುಂಬಯಿಯಿಂದ ಆಗಮಿಸಿದ 8 ಮಂದಿಗೆ, ವಿದೇಶದಿಂದ ಆಗಮಿಸಿದ ಒಬ್ಬ ಮಹಿಳೆ ಸಹಿತ ಇಬ್ಬರಿಗೆ ಸೋಂಕು ಖಚಿತವಾಗಿದೆ ಎಂದು ಜಿಲ್ಲಾ ವೈದ್ಯಾ„ಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್ ತಿಳಿಸಿದರು. 34 ವರ್ಷದ ವರ್ಕಾಡಿ ನಿವಾಸಿ, 40 ವರ್ಷದ ಮೀಂಜ ನಿವಾಸಿ, 22 ವರ್ಷದ ಮಂಜೇಶ್ವರ ನಿವಾಸಿ, 47 ವರ್ಷದ ಮಂಗಲ್ಪಾಡಿ ನಿವಾಸಿ, 28, 33, 38 ವರ್ಷದ ಚೆಮ್ನಾಡ್ ನಿವಾಸಿಗಳು, 56, 40, 56 ವರ್ಷದ ಕಾಸರಗೋಡು ನಗರಸಭೆ ನಿವಾಸಿಗಳು ರೋಗ ಬಾ„ತರು. ಇವರಲ್ಲಿ ಚೆಮ್ನಾಡ್ ನಿವಾಸಿ 38 ವರ್ಷದವರು ಮಹಿಳೆಯಾಗಿದ್ದು, 33 ವರ್ಷದ ವ್ಯಕ್ತಿ ಇಬ್ಬರೂ ಯು.ಎ.ಇ.ಯಿಂದ ಆಗಮಿಸಿದ್ದರು.
ಇದೇ ವೇಳೆ ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದ 43 ವರ್ಷದ ಕೋಡೋಂ-ಬೇಳೂರು ನಿವಾಸಿ, ಕುಂಬಳೆ ನಿವಾಸಿ 56 ವರ್ಷದ ವ್ಯಕ್ತಿ ಫಲಿತಾಂಶ ನೆಗೆಟಿವ್ ಆಗಿದೆ.
ಜಿಲ್ಲೆಯಲ್ಲಿ 3369 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2797, ಆಸ್ಪತ್ರೆಗಳಲ್ಲಿ 572 ಮಂದಿ ನಿಗಾದಲ್ಲಿದ್ದಾರೆ. 32 ಮಂದಿ ಬುಧವಾರ ತಮ್ಮ ನಿಗಾ ಅವ„ ಪೂರ್ಣಗೊಳಿಸಿದ್ದಾರೆ. 49 ಮಂದಿಯನ್ನು ಬುಧವಾರ ನೂತನವಾಗಿ ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ 6464 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಲಭ್ಯ 5749 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ.
ಮಾಸ್ಕ್ ಧರಿಸದ 240 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 240 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 3083 ಮಂದಿ ವಿರುದ್ಧ ಕೇಸು ದಾಖಲಿಸಿ ದಂಡ ಈಡು ಮಾಡಲಾಗಿದೆ.
ನಿಷೇದಾಜ್ಞೆ ಉಲ್ಲಂಘನೆ : 41 ಮಂದಿ ವಿರುದ್ಧ ಕೇಸು :
ನಿಷೇಧಾಜ್ಞೆ ಉಲ್ಲಂಘನೆ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 41 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. 59 ಮಂದಿಯನ್ನು ಬಂಧಿಸಲಾಗಿದ್ದು, 36 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1, ಕುಂಬಳೆ 5, ಕಾಸರಗೋಡು 7, ವಿದ್ಯಾನಗರ 1, ಬದಿಯಡ್ಕ 3, ಆದೂರು 2, ಬೇಡಗಂ 1, ಮೇಲ್ಪರಂಬ 9, ಬೇಕಲ 1, ಅಂಬಲತ್ತರ 3, ಹೊಸದುರ್ಗ 1, ನೀಲೇಶ್ವರ 3, ವೆಳ್ಳರಿಕುಂಡ್ 2, ಚಿತ್ತಾರಿಕಲ್ 2 ಕೇಸು ದಾಖಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 2412 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. 3086 ಮಂದಿಯನ್ನು ಬಂಧಿಸಲಾಗಿದೆ. 993 ವಾಹನಗಳನ್ನು ವಶಪಡಿಸಲಾಗಿದೆ.


