ಕಾಸರಗೋಡು: ಕಾಸರಗೋಡು ಜಿಲ್ಲೆಯಿಂದ ಅತ್ಯಂತ ಜಾಗರೂಕತೆಯೊಂದಿಗೆ ಇತರ ರಾಜ್ಯಗಳ ಕಾರ್ಮಿಕರನ್ನು ಊರಿಗೆ ಕಳುಹಿಸಲಾಗಿದೆ.
ಕಾಞಂಗಾಡ್ ರೈಲು ನಿಲ್ದಾಣದಿಂದ 1053 ಮಂದಿ ಇತರ ರಾಜ್ಯಗಳ ಕಾರ್ಮಿಕರನ್ನು ವಿಶೇಷ ರೈಲಿನ ಮೂಲಕ ಜಾಖರ್ಂಡ್ ಗೆ ಕಳುಹಿಸಲಾಗಿದೆ. ಪಂಚಾಯತ್ ನಿರ್ದೇಶನಾಲಯದಿಂದ ಲಭಿಸಿರುವ ಆದೇಶ ಹಿನ್ನೆಲೆಯಲ್ಲಿ ಪಂಚಾಯತ್ ಕಾರ್ದರ್ಶಿಗಳುಪ್ರತಿ ಇತರ ರಾಜ್ಯ ಕಾರ್ಮಿಕರನ್ನು ಸಂಪರ್ಕಿಸಿ ಊರಿಗೆ ಮರಳುವ ಆಸಕ್ತಿ ಇರುವುದನ್ನು ತಿಳಿದುಕೊಂಡು ಈ ಬಗೆಗನಪಟ್ಟಿಯನ್ನು ಜಿಲ್ಲಾ ಮಟ್ಟಕ್ಕೆ ಹಸ್ತಾಂತರಿಸಲಾಗಿತ್ತು. ಇವರಲ್ಲಿ 1249 ಮಂದಿ ಊರಿಗೆ ತೆರಳುವ ಆಸಕ್ತಿಹೊಮದಿರುವುದಾಗಿ ತಿಳಿಸಲಾಗಿತ್ತು. ಆದರೆ ಕಾಞಂಗಾಡು ರೈಲು ನಿಲ್ದಾಣದಿಂದ 1053 ಮಂದಿ ಆಗಮಿಸಿದ್ದು, ಅವರೆಲ್ಲ ಊರಿಗೆ ಮರಳಿದ್ದಾರೆ.
ಗುರುವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಇವರನ್ನೆಲ್ಲ ಪಂಚಾಯತ್ ಕಚೇರಿಗೆ ಬರಹೇಳಲಾಗಿತ್ತು. ಕೋವಿಡ್ ತಪಾಸಣೆ ನಡೆಸಿ ನಾನ್ ಕೋವಿಡ್ ಸರ್ಟಿಫಿಕೆಟ್ ನೀಡಲಾಗಿತ್ತು. ಕೆ.ಎಸ್.ಆರ್.ಟಿ.ಸಿ. ಬಸ್ ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾಞಂಗಾಡ್ ರೈಲು ನಿಲ್ದಾಣಕ್ಕೆ ಜಿಲ್ಲೆಯ ವಿವಿಧೆಡೆಗಳಿಂದ ಬರಮಾಡಿಕೊಳ್ಳಲಾಗಿತ್ತು. ಇವರಿಗೆ ಚಪಾತಿ, ಕರ್ರಿ ಪೆÇಟ್ಟಣ ಮತ್ತು ನೀರು ವಿತರಣೆ ನಡೆಸಲಾಯಿತು. ರಾತ್ರಿ 8.30ಕ್ಕೆ ರೈಲು ಸಂಚಾರ ಆರಂಭಿಸಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ರೈಲು ಸಂಚಾರಕ್ಕೆ ಹಸುರು ನಿಶಾನೆ ತೋರಿದರು.