ಕಾಸರಗೋಡು: ಆನಿವಾಸಿ ಭಾರತೀಯರು ಒಂದೇ ವೇಳೆ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಕ್ವಾರಂಟೈನ್ ಸಿದ್ಧಪಡಿಸಲಾಗುವುದು ಎಂದು ಜನಪ್ರತಿನಿಧಿಗಳ ಮತ್ತು ನೋಡೆಲ್ ಅಧಿಕಾರಿಗಳ ಸಭೆ ತಿಳಿಸಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಂದಾಯ ಸಚಿನ ಇ.ಚಂದ್ರಶೇಖರನ್ ಅಧ್ಯಕ್ಷೆ ವಹಿಸಿದ್ದರು.
ಈಗ ಶೌಚಾಲಯ ಸಹಿತದ 1851 ಕೊಠಡಿಗಳು, 20303 ಹಾಸುಗೆಗಗಳು ಸಿದ್ಧಪಡಿಸಲಾಗಿದೆ. ಕೋವಿಡ್ 19 ಪಾಸಿಟಿವ್ ರೋಗಿಗಳಿಗಾಗಿ 903 ಹಾಸುಗೆಗಳನ್ನು ಜಿಲ್ಲೆಯಲ್ಲಿ ಸಿದ್ಧಪಡಿಸಲಾಗಿದೆ ಎಂದು ಸಚಿವ ನುಡಿದರು.
ವಿದೇಶಗಳಿಂದ ಹೊರಡುವ ವೇಳೆ ಆಂಟಿ ಬಾಡಿ ತಪಾಸಣೆ ನಡೆಸಿದವರನ್ನು 7 ದಿನಗಳ ಕಾಲ ಕ್ವಾರೆಂಟೈನ್ ನಲ್ಲಿ ಇರಿಸಲಾಗುವುದು. ನಂತರ ಸ್ಯಾಂಪಲ್ ತಪಾಸಣೆಯ ಫಲಿತಾಂಶ ನೆಗೆಟಿವ್ ಇದ್ದರೆ ಮನೆಗಳಲ್ಲಿ ನಿಗಾದಲ್ಲಿದ್ದರೆ ಸಾಕು. ತಪಾಸಣೆ ಇಲ್ಲದೇ ಇರುವ ದೇಶಗಳಿಂದ ಆಗಮಿಸಿದವರನ್ನು 14 ದಿನಗಳ ಕಾಲ ಕ್ವಾರೆಂಟೈನ್ ನಲ್ಲಿ ಇರಿಸಲಾಗುವುದು. ವಯೋವೃಧ್ಧರನ್ನು, ಗರ್ಭಿಣಿಯರನ್ನು, ಮಕ್ಕಳನ್ನು ಇದರಿಂದ ಹೊರತುಪಡಿಸಲಾಗುವುದು. ಪ್ರತಿರೋಧ ಚಟುವಟಿಕೆಗಳ ವಿವಿಧ ವಲಯಗಳ ಬಗ್ಗೆ ಚರ್ಚಿಲಾಯಿತು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎಂ.ರಾಜಗೋಪಾಲನ್, ಕೆ. ಕುಂಞÂರಾಮನ್, ಎನ್.ಎ.ನೆಲ್ಲಿಕುನ್ನು, ಎಂ.ಸಿ.ಕಮರುದ್ದೀನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಉಪಜಿಲ್ಲಧಿಕಾರಿ ಅರುಣ್ ಕೆ.ವಿಜಯನ್, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಜಿಲ್ಲಾ ಮಟ್ಟದ ಸಿಬ್ಬಂದಿ ಉಪಸ್ಥಿತರಿದ್ದರು.






