ಕೋಝಿಕ್ಕೋಡ್ : ಕೇರಳದಲ್ಲಿ ಸೋಮವಾರ ರಾತ್ರಿ ಕೋವಿಡ್ ಬಾಧಿಸಿ ಕೋಝಿಕ್ಕೋಡಿನಲ್ಲಿ ಚಿಕಿತ್ಸೆಯಲ್ಲಿದ್ದವರು ಮರಣಹೊಂದಿದ ಘಟನೆ ನಡೆದಿದೆ.
ಕಣ್ಣೂರು ಧರ್ಮಡಂ ನಿವಾಸಿ ಆಸಿಯಾ(61)ಮೃತಪಟ್ಟ ದುರ್ದೈವಿ. ಕಳೆದ ಎರಡು ದಿನಗಳ ಹಿಂದೆ ಅಸೌಖ್ಯ ಕಾರಣ ಕೋಝಿಕ್ಕೋಡ್ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಿಗೆರ ಕೋವಿಡ್ ಹೇಗೆ ಹರಡಿತು ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಪರಿಶೀಲನೆಗಳು ನಡೆಯುತ್ತಿದೆ.
ಆಯಿಷಾ ಇತರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೈಪರ್ ಟೆನ್ಞನ್ ಹಾಗೂ ಮೂತ್ರಜನಕಾಂಗ ಸೋಂಕಿನಿಂದ ಬಳಲುತ್ತಿದ್ದರು. ಈ ಮಧ್ಯೆ ಶನಿವಾರ ಅಸೌಖ್ಯ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭ ನ್ಯುಮೋನಿಯಾ ಸೋಂಕು ಇರುವುದು ಕಂಡುಬಂದಿದ್ದು, ಬಳಿಕ ನಡೆಸಿದ ವಿಸ್ಕøತ ಪರೀಕ್ಷೆಯಲ್ಲಿ ಕೋವಿಡ್ ಇರುವುದು ದೃಢಪಟ್ಟಿತು. ಈ ಮಧ್ಯೆ ಸೋಮವಾರ ರಾತ್ರಿ ನಿಧನರಾದರು. ಇವರ ಕುಟುಂಬದ ಎಂಟು ಮಂದಿ ಸದಸ್ಯರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.


