ಪೆರ್ಲ: ಸ್ನಾನಗೈಯ್ಯಲೆಂದು ಕಾಟುಕುಕ್ಕೆ ಅಡ್ಕಸ್ಥಳ ಹೊಳೆಗಿಳಿದ ಯುವಕನೋರ್ವ ಮುಳುಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಕಾಟುಕುಕ್ಕೆ ಮೊಗೇರಿನ ನಾರಾಯಣ ನಾಯ್ಕ್ ಎಂಬವರ ಪುತ್ರ ಸುರೇಶ್(35) ಮೃತಪಟ್ಟ ದುರ್ದೈವಿ. ಭಾನುವಾರ ಸಂಜೆ ಮೂರು ಗಂಟಡೆಯ ವೇಳೆ ಸ್ನಾನಕ್ಕೆಂದು ಅಡ್ಕಸ್ಥಳ ಹೊಳೆಗಿಳಿದು ನೀರಿನ ಆಳದಲ್ಲಿ ಸಿಲುಕಿ ಮೃತಪಟ್ಟಿರಬೇಕೆಂದು ಸಂಶಯಿಸಲಾಗಿದೆ. ಬಳಿಕ ಅಗ್ನಿ ಶಾಮಕದಳ ಆಗಮಿಸಿ ಮೃತದೇಹವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಯಿತು. ಬದಿಯಡ್ಕ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡರು. ಮೃತರು ಕೂಲಿ ಕಾರ್ಮಿಕರಾಗಿದ್ದು, ತಂದೆ, ತಾಯಿ, ಸಹೋದರ, ಸಹೋದರಿಯಯ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.


