ಎರ್ನಾಕುಲಂ: ಕೊಚ್ಚಿ ನಗರದಲ್ಲಿ ಮಳೆ ನೀರು ಕಟ್ಟಿನಿಲ್ಲುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಲ್ಲಿಯ ಜಿಲ್ಲಾಡಳಿತ ಜಾರಿಗೊಳಿಸುತ್ತಿರುವ ಓಪರೇಶನ್ ಬ್ರೇಕ್ ಥ್ರೂ ಸಮರ್ಪಕವಾಗಿ ಕಾರ್ಯಾಚರಿಸುತ್ತಿದೆ. ಕೆಲಸ ಕಾರ್ಯಗಳು ತೃಪ್ತಿಕರ ಎಂದು ಕೊಚ್ಚಿ ಜಿಲ್ಲಾಡಳಿತದ ಪರವಾಗಿ ಸರ್ಕಾರಿ ಅಭಿಯೋಜಕ(ಅಮಿಕಸ್ ಕ್ಯೂರಿ) ಹೈಕೋರ್ಟ್‍ನಲ್ಲಿ ವರದಿ ನೀಡಿದ್ದಾರೆ.
ಹೈಕೋರ್ಟ್ ಅಮಿಕಸ್ ಕ್ಯೂರಿ ಸುನಿಲ್ ಜಾಕೋಬ್ ಜೋಸ್ ಸಲ್ಲಿಸಿದ ವರದಿಯು ಆಪರೇಷನ್ ಬ್ರೇಕ್ ಥ್ರೂ ಯೋಜನೆಯ ಒಂದು ಹಾಗೂ ಎರಡನೇ ಹಂತಗಳು ಸಮರ್ಥವಾಗಿ ಪ್ರಗತಿಯಲ್ಲಿದೆ ಎಂದು ಅಂದಾಜಿಸಿದೆ.
ಬ್ರೇಕ್ ಥ್ರೂನ ಮೊದಲ ಹಂತದಲ್ಲಿ ಒಳಗೊಂಡಿರುವ ಎಲ್ಲಾ ಕೆಲಸಗಳು ಈ ತಿಂಗಳೊಳಗೆ ಪೂರ್ಣಗೊಳ್ಳುತ್ತವೆ. ಎರಡನೇ ಹಂತದಲ್ಲಿ, ನಗರದ ಪ್ರಮುಖ ತೊರೆಗಳ ಮೂಲಕ ನೀರಿನ ಹರಿವನ್ನು ಸುಲಭಗೊಳಿಸಲು 17 ಕಾಮಗಾರಿಗಳು ಪ್ರಗತಿಯಲ್ಲಿವೆ. ಭಾರಿ ಮಳೆಯಾದರೆ ಜಿಲ್ಲಾಡಳಿತದ ಕೆಲಸಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್ ಹೇಳಿದೆ. ವಿಪತ್ತು ನಿರ್ವಹಣಾ ಕಾಯ್ದೆ ಸೇರಿದಂತೆ ವಿವಿಧ ನಿಬಂಧನೆಗಳ ಅಡಿಯಲ್ಲಿ ಜಿಲ್ಲಾಧಿಕಾರಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಹೇಳಿದರು.
ಎರಡನೇ ಹಂತದ ಕಾರ್ಯಾಚರಣೆಯನ್ನು ಮೇ ವೇಳೆಗೆ ಪೂರ್ಣಗೊಳಿಸಲು ಜಿಲ್ಲಾಡಳಿತ ಯೋಜಿಸಿದೆ. ಜಿಲ್ಲೆಯು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಆಪರೇಷನ್ ಬ್ರೇಕ್ ಥ್ರೂ ಎರಡನೇ ಹಂತವು ಪ್ರಮುಖ ನಗರಗಳಲ್ಲಿ ನಡೆಯುತ್ತಿದೆ. ನಗರದ ನೀರು ನದಿಗಳಿಗೆ ಪ್ರಮುಖ ತೊರೆಗಳ ಮೂಲಕ ನಿರಂತರವಾಗಿ ಹರಿಯುವಂತೆ ಮಾಡಲಾಗುತ್ತಿದೆ. ಇದರ ಭಾಗವಾಗಿ, ತೇವರ ಹಿನ್ನೀರು, ಕೊಯಿಥರಾ ಕಾಲುವೆ, ಚಿಲವಣ್ಣೂರ್ ಹಿನ್ನೀರು, ಚಿಲವನೂರ್ ಬಂಡ್ ರಸ್ತೆ, ಕರಣಕೋಡಂ ತೊಡು, ಚಂಗದಂಪೆÇೀಕ್ ತೋಡು ಮತ್ತು ಎಡಪ್ಪಳ್ಳಿ ತೋಡುಗಳಲ್ಲಿನ ಅಡೆತಡೆಗಳನ್ನು ತೆಗೆದುಹಾಕುವ ಕೆಲಸಗಳು ಪ್ರಗತಿಯಲ್ಲಿದೆ ಎಂದು ತಿಳಿಸಲಾಗಿದೆ.


