ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ ಎಸ್.ಎಸ್.ಎಲ್.ಸಿ. ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆಗಳು ಅತ್ಯಂತ ಸುರಕ್ಷತೆಯೊಂದಿಗೆ ನಡೆದಿವೆ.
6547 ಮಂದಿ ವಿದ್ಯಾರ್ಥಿಗಳು ಪ್ಲಸ್-ಟು ಪರೀಕ್ಷೆ ಬರೆದಿದ್ದಾರೆ. 160 ಮಂದಿ ಹಾಜರಾಗಿರಲಿಲ್ಲ. ಮನೆಗಳಲ್ಲಿ ನಿಗಾದಲ್ಲಿರುವ 10 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 6818 ಮಂದಿ ಪ್ಲಸ್ ವನ್ ಪರೀಕ್ಷೆ ಬರೆದಿದ್ದಾರೆ. 182 ಮಂದಿ ಹಾಜರಾಗಿರಲಿಲ್ಲ. ಇವರಲ್ಲಿ 6 ಮಂದಿ ಮನೆಗಳಲ್ಲಿ ನಿಗಾದಲ್ಲಿದ್ದಾರೆ.
ವಿ.ಎಸ್.ಎಸ್.ಇ. ವಿಭಾಗದಲ್ಲಿ 894 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 18 ಮಂದಿ ಹಾಜರಾಗಿರಲಿಲ್ಲ.
ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 10841 ಮಂದಿ ನೋಂದಣಿ ನಡೆಸಿದ್ದು, ಇವರಲ್ಲಿ 10801 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇವರಲ್ಲಿ 10 ಮಂದಿ ವಿದ್ಯಾರ್ಥಿಗಳು ಹಾಟ್ ಸ್ಪಾಟ್ ವಲಯಗಳಲ್ಲಿ ಇರುವವರು, 28 ಮಂದಿ ಮನೆಗಳಲ್ಲಿ ನಿಗಾದಲ್ಲಿರುವವರು.
ಕಾಞಂಗಾಡ್ ಶೈಕ್ಷಣಿಕ ಜಿಲ್ಲೆಯಲ್ಲಿ 8870 ಮಂದಿ ನೋಂದಣಿ ನಡೆಸಿದ್ದು, 9 ಮಂದಿ ಉಳಿದು ಇತರ ಎಲ್ಲರೂ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾದರು.


