ಕಾಸರಗೋಡು: ಜಿಲ್ಲಾಡಳಿತೆಯ ಆದೇಶ ಉಲ್ಲಂಘಿಸಿ ಮಾಂಸದ ಕೋಳಿಗೆ ಅತಿಬೆಲೆ ಈಡು ಮಾಡಿದ ಆರೋಪದಲ್ಲಿ 44 ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಜಿಲ್ಲಾ ಸಪ್ಲೈ ಅಧಿಕಾರಿ, ಲೀಗಲ್ ಮೆಟ್ರಾಲಜಿ ಡೆಪ್ಯೂಟಿ ಕಂಟ್ರೋಲರ್, ಕಂದಾಯ ಸಿಬ್ಬಂದಿ ನೇತೃತ್ವದಲ್ಲಿರುವ ಸ್ಪೆಷ್ಯಲ್ ಸ್ಕ್ವಾಡ್ ಜಿಲ್ಲೆಯ ವಿವಿಧೆಡೆ ನಡೆಸಿದ ತಪಾಸಣೆಯಲ್ಲಿ ಮಾರಾಟ ವೇಳೆ ಅತಿ ಬೆಲೆ ಈಡು ಮಾಡಿರುವುದು ಪತ್ತೆಯಾಗಿದೆ. ಈ ಅಂಗಡಿಗಳಿಗೆ ನೋಟೀಸು ನೀಡಲು ಮತ್ತು ಕನಿಷ್ಠ 5 ಸಾವಿರ ರೂ. ದಂಡ ವಸೂಲಿ ಮಾಡುವುದಾಗಿ ಅವರು ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಈ ವಿಚಾರ ತಿಳಿಸಿದರು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ಸಪ್ಲೈ ಅಧಿಕಾರಿ ಕೆ.ಶಶಿಧರನ್, ಲೀಗಲ್ ಮೆಟ್ರಾಲಜಿ ಡೆಪ್ಯೂಟಿ ಕಂಟ್ರೋಲರ್ ಪಿ.ಶ್ರೀನಿವಾಸ ಮೊದಲಾದವರು ಉಪಸ್ಥಿತರಿದ್ದರು.


