HEALTH TIPS

ಆರೋಗ್ಯ ಸುರಕ್ಷೆಯ ಆತ್ಮವಿಶ್ವಾಸ ಹಂಚುನ ಮೂಲಕ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಜಿಲ್ಲಾ ವೈದ್ಯಾಧಿಕಾರಿ

   
       ಕಾಸರಗೋಡು:  ಆರೋಗ್ಯ ಸುರಕ್ಷೆಯ ಆತ್ಮವಿಶ್ವಾಸ ಹಂಚುವ ಮೂಲಕ ಜಿಲ್ಲಾ ವೈದ್ಯಾಧಿಕಾರಿ ಪರೀಕ್ಷೆಗಳು ನಡೆಯುತ್ತಿರುವ ಕೇಂದ್ರಗಳಿಗೆ ಭೇಟಿ ನೀಡಿದರು. ಎಸ್.ಎಸ್.ಎಲ್.ಸಿ., ಹೈಯರ್ ಸೆಕೆಂಡರಿ ಇತ್ಯಾದಿ ಪರೀಕ್ಷೆಗಳು ಈ ಬಾರಿ ಕೊರೋನಾ ಹಾವಳಿಯ ಅವಧಿಯಲ್ಲೇ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಚ್ಚುವರಿ ಜಾಗೃತಿಯೊಂದಿಗೆ ಜರುಗುತ್ತಿದ್ದು, ವಿದ್ಯಾರ್ಥಿಗಳ ಆರೋಗ್ಯ ಜಾಗೃತಿಗೆ ಆದ್ಯತೆ ನೀಡಿ ವೈದ್ಯಾಧಿಕಾರಿ ನೇರವಾಗಿ ಭೇಟಿ ನೀಡಿ ಆಯಾ ಕೇಂದ್ರಗಳ ಸ್ಥಿತಿಗತಿ ಅವಲೋಕನ ನಡೆಸಿದರು.
       ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ತಲಾ ಇಬ್ಬರು ಆರೋಗ್ಯ ಕಾರ್ಯಕರ್ತರು ಕರ್ತವ್ಯದಲ್ಲಿದ್ದಾರೆ. ಮಕ್ಕಳ ಆರೋಗ್ಯ ಸಂರಕ್ಷಣೆ,ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಶುಚೀಕರಣ ಪ್ರಕ್ರಿಯೆಯ ಮೇಲ್ನೋಟ ಸಹಿತ ಜವಾಬ್ದಾರಿಗಳನ್ನು ವಹಿಸುತ್ತಿದ್ದಾರೆ. ಈ ಎಲ್ಲ ಚಟುವಟಿಕೆಗಳಿಗೆ ನೇತೃತ್ವ ವಹಿಸುತ್ತಿರುವ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಅವರು ಕೇಂದ್ರಗಳನ್ನು ಸಂದರ್ಶಿಸಿದರು. ಇದರ ಅಂಗವಾಗಿ ಬುಧವಾರ ಚೆರುವತ್ತೂರು ತಾಂತ್ರಿಕ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಗೆ ಅವರು ಸಂದರ್ಶನ ನಡೆಸಿದರು. ವಿದ್ಯಾರ್ಥಿಗಳೊಂದಿಗೆ ಸಂದರ್ಶನನಡೆಸಿದ ಅವರು ರಾಜ್ಯ ಸರಕಾರ, ಆರೋಗ್ಯ ಇಲಾಖೆ ತಿಳಿಸಿರುವ ಕಟ್ಟುನಿಟ್ಟು, ರೋಗ ಪ್ರತಿರೋಧ ಸಂದೇಶ ಇತ್ಯಾದಿಗಳನ್ನು ನೀಡಿದರು. ಮಕ್ಕಳು ತಮ್ಮೆಲ್ಲ ಆತಂಕಗಳನ್ನು ಪರಿಹರಿಸಿಕೊಂಡು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ ಎಂದು ಡಾ.ಎ.ವಿ.ರಾಮದಾಸ್ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries