ಕಾಸರಗೋಡು: ಜಿಲ್ಲೆಯಲ್ಲಿ ಸತತ ಎಂಟನೇ ದಿನವಾದ ಶುಕ್ರವಾರ ಕೂಡ ಹೊಸದಾಗಿ ಕೊರೊನಾ ಸೋಂಕು ಪ್ರಕರಣ ದಾಖಲಾಗಿಲ್ಲ. ಜಿಲ್ಲೆಯಲ್ಲಿ ಕೇವಲ ಒಬ್ಬರು ಮಾತ್ರವೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 178 ಮಂದಿ ಸೋಂಕು ಖಚಿತಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಉಳಿದವರು ಗುಣಮುಖರಾಗಿ ಮನೆಗಳಿಗೆ ವಾಪಸಾಗಿದ್ದಾರೆ.
ರಾಜ್ಯದಲ್ಲಿ ಶುಕ್ರವಾರ ಹೊಸದಾಗಿ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಚೆನ್ನೈಯಿಂದ ಬಂದ ಎರ್ನಾಕುಳಂ ನಿವಾಸಿಗೆ ಕೊರೊನಾ ವೈರಸ್ ಸೋಂಕು ಬಾ„ಸಿದೆ. ಇದೇ ವೇಳೆ ಕೇರಳ ರಾಜ್ಯದಲ್ಲಿ 10 ಮಂದಿ ಗುಣಮುಖ ರಾಗಿದ್ದಾರೆ. ಈ ಹತ್ತು ಮಂದಿಯೂ ಕಣ್ಣೂರು ಜಿಲ್ಲೆಯವರು.
ರಾಜ್ಯದಲ್ಲಿ ಒಟ್ಟು 16 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಣ್ಣೂರು-5, ವಯನಾಡು-4, ಕೊಲ್ಲಂ-3, ಕಾಸರಗೋಡು, ಇಡುಕ್ಕಿ, ಎರ್ನಾಕುಳಂ, ಪಾಲ್ಘಾಟ್ ತಲಾ ಒಬ್ಬರು ಎಂಬಂತೆ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 503 ಮಂದಿಗೆ ರೋಗ ಬಾ„ಸಿತ್ತು. 20157 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 19810 ಮಂದಿ ಮನೆಗಳಲ್ಲೂ, 347 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಶುಕ್ರವಾರ ಶಂಕಿತ 127 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ತನಕ 35856 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಲಭ್ಯ 35355 ನೆಗೆಟಿವ್ ಆಗಿದೆ. ರಾಜ್ಯದ ಹಾಟ್‍ಸ್ಪಾಟ್‍ಗಳ ಸಂಖ್ಯೆ 33ಕ್ಕೆ ಕುಸಿಯಿತು.
ಕಾಸರಗೋಡು ಜಿಲ್ಲೆಯ ಮನೆಗಳಲ್ಲಿ 885 ಮಂದಿ, 67 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಶುಕ್ರವಾರ 40 ಮಂದಿಯನ್ನು ನೂತನವಾಗಿ ಐಸೊಲೇಷನ್ ವಾರ್ಡ್‍ಗಳಿಗೆ ದಾಖಲಿಸಲಾಗಿದೆ. 94 ಮಂದಿ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ಜಿಲ್ಲೆಯಲ್ಲಿ 5036 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 4393 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. ಸೆಂಟಿನಲ್ ಸರ್ವೆಲೆನ್ಸ್ ಅಂಗವಾಗಿ ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರು, ಇತರ ರಾಜ್ಯಗಳ ಕಾರ್ಮಿಕರು, ಸಾಮಾಜಿಕ ಸಂಪರ್ಕದಲ್ಲಿ ಅತ್ಯ„ಕ ಪ್ರಮಾಣದಲ್ಲಿ ತೊಡಗಿಕೊಳ್ಳುವವರಲ್ಲಿ 516 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಇದರಲ್ಲಿ 461 ಮಂದಿ ಫಲಿತಾಂಶ ನೆಗೆಟಿವ್ ಆಗಿದೆ.
12 ಕೇಸು ದಾಖಲು : ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 12 ಕೇಸುಗಳನ್ನು ದಾಖಲಿಸಲಾಗಿದೆ. 23 ಮಂದಿಯನ್ನು ಬಂ„ಸಲಾಗಿದ್ದು, 6 ವಾಹನಗಳನ್ನು ವಶಪಡಿಸಲಾಗಿದೆ. ಕುಂಬಳೆ ಪೆÇಲೀಸ್ ಠಾಣೆಯಲ್ಲಿ ಒಂದು, ವಿದ್ಯಾನಗರ 3, ಕಾಸರಗೋಡು 1, ಬದಿಯಡ್ಕ 1, ಮೇಲ್ಪರಂಬ 2, ಅಂಬಲತ್ತರ 1, ವೆಳ್ಳರಿಕುಂಡ್ 1, ಚಿತ್ತಾರಿಕಲ್ 2 ಕೇಸು ದಾಖಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 2084 ಕೇಸುಗಳು ದಾಖಲಾಗಿವೆ. 2694 ಮಂದಿಯನ್ನು ಬಂ„ಸಲಾಗಿದ್ದು, 869 ವಾಹನಗಳನ್ನು ವಶಪಡಿಸಲಾಗಿದೆ.
ಊರಿಗೆ ಮರಳುವ ಆನಿವಾಸಿಗಳು ಕ್ವಾರೆಂಟೈನ್‍ಗೆ :
ವಿದೇಶಗಳಿಂದ ಊರಿಗೆ ಮರಳುವವರನ್ನು ಜಿಲ್ಲೆಯ ತೆಂಕಣ ಭಾಗದಲ್ಲಿ ಸಜ್ಜುಗೊಳಿಸಲಾದ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ. ಈ ಚಟುವಟಿಕೆಗಳ ಏಕೀಕರಣಕ್ಕೆ ನೋಡೆಲ್ ಅಧಿಕಾರಿಯಾಗಿ ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಅವರನ್ನು ನೇಮಿಸಲಾಗಿದೆ. ವಿದೇಶಗಳಿಂದ ಊರಿಗೆ ಮರಳುವವರನ್ನು ಸರಕಾರ ವಿಶೇಷವಾಗಿ ಸಜ್ಜುಗೊಳಿಸಿದ ಕ್ವಾರಂಟೈನ್ ಕೇಂದ್ರಗಳಲ್ಲಿ 7 ದಿನ ದಾಖಲಿಸಿ ಸ್ಯಾಂಪಲ್ ತಪಾಸಣೆ ನಡೆಸಲಾಗುವುದು. ಕೋವಿಡ್ 19 ಸೋಂಕು ಖಚಿತಗೊಂಡವರನ್ನು ಮುಂದಿನ ಚಿಕಿತ್ಸೆಗಳಿಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗುವುದು. ವಯೋವೃದ್ಧರು, ಗರ್ಭಿಣಿಯರು, ಮಕ್ಕಳು ಮೊದಲಾವರನ್ನು 7 ದಿನಗಳ ಕ್ವಾರೆಂಟೈನ್‍ನಿಂದ ಹೊರತುಪಡಿಸಲಾಗುವುದು ಎಂದು ಅವರು ಹೇಳಿದರು.





