HEALTH TIPS

ಹಲಸಿನ ಹಣ್ಣು ಬಿದ್ದು ಗಾಯಗೊಂಡ ಯುವಕನ ಶಸ್ತ್ರಚಿಕಿತ್ಸೆ ವಿಳಂಬ

 
          ಕಾಸರಗೋಡು: ಹಲಸಿನ ಹಣ್ಣು ತಲೆಗೆ ಬಿದ್ದು ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ತುರ್ತು ಶಸ್ತ್ರಕ್ರಿಯೆಗೆ ದಾಖಲಾಗಿದ್ದ ವ್ಯಕ್ತಿಯ ಶಸ್ತ್ರಕ್ರಿಯಾ ಪ್ರಕ್ರಿಯೆಗೆ ಕೋವಿಡ್ ಪರೀಕ್ಷಾ ವರದಿ  ತೊಡಕಾಗಿ ಪರಿಣಮಿಸಿದೆ. ಯುವಕನ ಆರಂಭಿಕ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ಕೋವಿಡ್ ಮುಕ್ತರಾದ ಬಳಿಕವಷ್ಟೇ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
      ಕೋಡೋ ಬೆಳ್ಳೂರಿನ ಆಟೊ ಚಾಲಕ ಐದು ದಿನಗಳ ಹಿಂದೆ ತಲೆಗೆ ಹಲಸಿನ ಹಣ್ಣು ಬಿದ್ದ ತರುವಾಯ ಶಸ್ತ್ರ ಚಿಕಿತ್ಸೆಗೆ ಪರಿಯಾರಂ ಗೆ ದಾಖಲಾಗಿದ್ದರು. ಈ ವೇಳೆ ಆ ವ್ಯಕ್ತಿಗೆ ಕೋವಿಡ್ ಇರುವುದಾಗಿ ಕಂಡುಬಂದಿತ್ತು. ಆ ಬಳಿಕ ಮತ್ತೊಮ್ಮೆ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್ ನೆಗೆಟಿವ್ ಆಗಿ ಕಂಡುಬಂದಿದ್ದು ತತ್ಕಾಲ ಶಸ್ತ್ರ ಚಿಕಿತ್ಸೆ ನಡೆಸದಿರಲು ವೈದ್ಯರು ನಿರ್ಧರಿಸಿದ್ದಾರೆ. ಜೊತೆಗೆ ಅಟೋ ಚಾಲಕನ  ಕೈ ಕಾಲುಗಳು ಪಾಶ್ರ್ವವಾಯುವಿಗೆ ತುತ್ತಾಗಿರುವುದು ಗಮನಕ್ಕೆ ಬಂದಿದೆ.
       ಕೋವಿಡ್ ಬಾಧಿತರಿಗೆ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ಹಿಂಜರಿಯುತ್ತಾರೆ. ಆದಾರೂ ಅವರು  ಹೇಗೆ ಸೋಂಕಿಗೆ ಒಳಗಾಗಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರೋಗ ಖಚಿತವಾದ ಹಿನ್ನೆಲೆಯಲ್ಲಿ ಅಟೋ ಚಾಲಕನ ಸಂಪರ್ಕದಲ್ಲಿ ಬಂದಿದ್ದ ಪ್ರದೇಶದ ಸುಮಾರು 40 ಜನರ ಜೊಲ್ಲನ್ನು ಈಗಾಗಲೇ ಪರೀಕ್ಷಿಸಲಾಗಿದೆ. ಈ ಪೈಕಿ 18 ಜನರಲ್ಲಿ ಕೋವಿಡ್ ಕಂಡುಬಂದಿಲ್ಲ ಎಂದು ಅಧಿಕೃತ ವರದಿ ತಿಳಿಸಿದೆ. ಉಳಿದವರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries