HEALTH TIPS

ವಾಣಿಜ್ಯ ವಿದ್ಯಾರ್ಥಿಗಳಿಗೆ ಮಾದರಿ ಪರೀಕ್ಷೆಯೊಂದಿಗೆ ಬ್ಲಾಗ್ ನಿರ್ಮಿಸಿದ ಕಾಟುಕುಕ್ಕೆ ಹೈರ್ ಸೆಕೆಂಡರಿಯ ಪ್ರಾಧ್ಯಾಪಕ


        ಕಾಸರಗೋಡು: ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟ ಪ್ಲಸ್ ಒನ್ ಅಕೌಂಟನ್ಸಿ ಮತ್ತು ಪ್ಲಸ್ ಟು ಬಿಸಿನೆಸ್ ಸ್ಟಡೀಸ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವಂತೆ ಇಲ್ಲೊಬ್ಬರು ಪ್ರಾಧ್ಯಾಪಕರು 10 ಮಾದರಿ ಪರೀಕ್ಷೆಗಳನ್ನು ಹೊಂದಿರುವ ಬ್ಲಾಗ್ ನಿರ್ಮಿಸಿ ಗಮನ ಸೆಳೆದಿದ್ದಾರೆ. ಕಾಸರಗೋಡಿನ ಪಿಲಿಕೋಡ್‍ನ ಪ್ರಾಧ್ಯಾಪಕ  ಸಂದೀಪ್ ಕುಮಾರ್ ಅವರು ಬ್ಲಾಗ್ ರಚಿಸಿದ್ದಾರೆ. ಬ್ಲಾಗ್ https://hsstimes.blogspot.com  ಈಗಾಗಲೇ ಕಾಲು ಮಿಲಿಯನ್ ಜನರು ಸಂದರ್ಶನ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಶ್ರಮಕ್ಕೆ ಲಭ್ಯವಾದ ತುರಾಯಿಯಾಗಿ ಗಮನಾರ್ಹವಾಯಿತು.
      ಬ್ಲಾಗ್ ಸಂದರ್ಶಿಸಿದ 4000 ವಿದ್ಯಾರ್ಥಿಗಳು ಪರೀಕ್ಷೆಗೆ ಉತ್ತರಗಳನ್ನೂ ಬರೆದಿರುವುದು ಇನ್ನೊಂದು ವಿಶೇಷತೆಯಾಗಿದೆ. ಗಮನಾರ್ಹ ಅಂಶವೆಂದರೆ ರಾಜ್ಯದ ಯಾವುದೇ ವಿದ್ಯಾರ್ಥಿಯು ಆನ್‍ಲೈನ್ ಪರೀಕ್ಷೆಯ ಮೂಲಕ ಪಡೆದ ಅಂಕಗಳನ್ನು ತಕ್ಷಣ ತಿಳಿದುಕೊಳ್ಳಬಹುದಾಗಿದೆ. ಇದು ಇ-ಕಾಮರ್ಸ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಿವಿಧ ಕಲಿಕಾ ಸಂಪನ್ಮೂಲಗಳ ಕೊಂಡಿಯಾಗಿದೆ. ವರ್ಷಗಳಿಂದ ಇತರ ಬ್ಲಾಗ್‍ಗಳಿಗೆ ಡಿಜಿಟಲ್ ಕಲಿಕಾ ಸಂಪನ್ಮೂಲಗಳನ್ನು ಸಿದ್ಧಪಡಿಸುತ್ತಿರುವ ಈ ಶಿಕ್ಷಕ, ಲಾಕ್‍ಡೌನ್ ಸಮಯದಲ್ಲಿ ತನ್ನದೇ ಆದ ಬ್ಲಾಗ್ ಅನ್ನು ನಿರ್ಮಿಸಿದ್ದಾರೆ.
     ಸಂದೀಪ್ ಪ್ರಸ್ತುತ ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಾಣಿಜ್ಯ ಶಿಕ್ಷಕ. ಹೈಯರ್ ಸೆಕೆಂಡರಿ ಕಾಮರ್ಸ್ ವಿಷಯಗಳ ಕುರಿತು ವಿವಿಧ ಕೋರ್ಸ್‍ಗಳು ಪ್ರಸ್ತುತ ಬ್ಲಾಗ್‍ನಲ್ಲಿ ಲಭ್ಯವಿದೆ. ಶಿಕ್ಷಕರು ಈಗ ಬ್ಲಾಗ್‍ನಲ್ಲಿರುವ ಎಲ್ಲಾ ಪಾಠಗಳನ್ನು ಡಿಜಿಟಲ್ ರೂಪದಲ್ಲಿ ಲಭ್ಯವಾಗುವಂತೆ ಮಾಡಲು ಯೋಜಿಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries