HEALTH TIPS

ಕ್ವಾರಂಟೈನ್ ಉಲ್ಲಂಘನೆ ತಡೆಗೆ ಪೋಲೀಸರಿಂದ ಮಿಂಚಿನ ಕಾರ್ಯಾಚರಣೆ-ಜೋಪಾನ!

     
          ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಕ್ವಾರಂಟೈನ್ ಗೆ ಒಳಗಾಗಿರುವವರು ಕಾನೂನು ಕಟ್ಟಳೆ ಮೀರಿ ತಿರುಗಾಡುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಪೆÇಲೀಸರು ರಾಜ್ಯದಲ್ಲಿ ಮಿಂಚಿನ ತಪಾಸಣೆಗೆ ಚಾಲನೆ ನೀಡಿದ್ದಾರೆ. ಕ್ವಾರಂಟೈನ್ ಗೆ ಒಳಗಾದವರು  ನಿರ್ದೇಶನಗಳನ್ನು ಉಲ್ಲಂಘಿಸುತ್ತಿದ್ದಾರೆಯೇ ಮತ್ತು ವಾಹನಗಳ ಮೂಲಕ ತಿರುಗಾಟದಲ್ಲಿ  ಎಂದು ಕಂಡುಹಿಡಿಯಲು ತಪಾಸಣೆ ನಡೆಸಲಾಗಿದೆ ಎಂದು ರಾಜ್ಯ ಪೆÇಲೀಸ್ ಮುಖ್ಯಸ್ಥ ಲೋಕನಾಥ್ ಬೆಹ್ರಾ ತಿಳಿಸಿದ್ದಾರೆ.
          ಬೈಕು ಗಸ್ತು ಮತ್ತು ಶೇಡೋ ತಂಡವನ್ನು ಈ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೇ ಎಂದು ಪರಿಶೀಲಿಸುವಂತೆ ಅವರು ಜಿಲ್ಲಾ ಪೆÇಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದರು. ಸೂಚನೆಗಳನ್ನು ಅನುಸರಿಸಲು ನಿರಾಕರಿಸಿದರೆ ಅವರನ್ನು ಸರ್ಕಾರಿ ಕ್ವಾರಂಟೈನ್ ಕೇಂದ್ರಗಳಿಗೆ ವರ್ಗಾಯಿಸಲಾಗುತ್ತದೆ. ಕಾನೂನು ಕ್ರಮ ಸಹ ಕೈಗೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾ ಪೆÇಲೀಸ್ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.
       ತಮ್ಮ ಮನೆಗಳಲ್ಲಿ ಕಣ್ಗಾವಲಿನಲ್ಲಿರುವವರು ನಿರ್ದೇಶನಗಳನ್ನು ಕಡೆಗಣಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿಗಳಿವೆ. ಅವರೊಂದಿಗೆ ಸಂಪರ್ಕಕ್ಕೆ ಬಂದ ಮನೆಯವರು ಇತರ ಮನೆಗಳಿಗೆ ಭೇಟಿ ನೀಡಿದ್ದರೇ ಎಂದು ಗಮನಿಸಲಾಗಿದೆ. ವಾರ್ಡ್ ಮಟ್ಟದ ಸಮಿತಿಗಳು, ಬೈಕು ಗಸ್ತು ಮತ್ತು ಜನಮೈತ್ರಿ ಪೆÇಲೀಸರ ತನಿಖೆಗಳಿಂದ ಇದು ಸ್ಪಷ್ಟವಾಗಿದೆ ಎಂದು ರಾಜ್ಯ ಪೆÇಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
       ಪ್ರಯಾಣದ ವೇಳೆ ಮುಖ ಕವಚಗಳು ಮತ್ತು ಇತರ ಮುನ್ನೆಚ್ಚರಿಕೆಗಳನ್ನು ಬಳಸಲಾಗುವುದಿಲ್ಲ ಎನ್ನುವುದು ಕಂಡುಬಂದಿದೆ. ಪ್ರಯಾಣಾನುಮತಿಗಿಂತ ಹೆಚ್ಚಿನ ಜನರು ಸೈಕಲ್‍ಗಳು, ಆಟೋರಿಕ್ಷಾಗಳು ಮತ್ತು ಕಾರುಗಳಲ್ಲಿ ಅಲ್ಲಲ್ಲಿ ತಿರುಗಾಟದಲ್ಲಿರುವುದು ಖಚಿತಗೊಂಡಿದೆ. ಇದರಿಂದ ಭಾರೀ ಸೋಂಕು ಹರಡುವಿಕೆ ಮತ್ತು ಭೀತಿಯ ಸೃಷ್ಟಿಗೆ ಕಾರಣವಾಗುವುದು. ಸಂಚಾರಕ್ಕೆ ತೊಂದರೆಯಾಗದಂತೆ ಅಗತ್ಯವಿರುವ ಕಡೆ ಬ್ಯಾರಿಕೇಡ್‍ಗಳನ್ನು ಸ್ಥಾಪಿಸಬೇಕು ಎಂದು ಬೆಹ್ರಾ ಹೇಳಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries