ತಿರುವನಂತಪುರ: ಪಾಸ್ ಇಲ್ಲದೆ ಜನರನ್ನು ರಾಜ್ಯಕ್ಕೆ ಕರೆತಂದರೆ ಭಾರಿ ದಂಡ ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಪಾಸ್ ಇತರ ರಾಜ್ಯಗಳಿಂದ ಕೇರಳಕ್ಕೆ ಬರಲು ಕಡ್ಡಾಯವಾಗಿದೆ ಮತ್ತು ಕೇರಳ ಪೆÇೀರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಳಿರುವರು.
ಲಾಕ್ ಡೌನ್ ವಿನಾಯಿತಿಯನ್ನು ಜನರು ದುರುಪಯೋಗಪಡಿಸುತ್ತಿರುವುದು ಗಮನಕ್ಕೆ ಬಂದಿದೆ. ಆಟೋ ಮತ್ತು ಬಸ್ಸುಗಳಲ್ಲಿ ಹೆಚ್ಚಿನ ಜನರು ಗಡಿಗಳನ್ನು ದಾಟಿ ಆಗಮಿಸುತ್ತಿದ್ದಾರೆ. ಆದರೆ ಕಾನೂನು ನಿಬಂಧನೆಗಳನ್ನು ಗಾಳಿಗೆ ತೂರಿ ಜನರನ್ನು ಅಕ್ರಮವಾಗಿ ಕರೆತರುವ ವಾಹನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ಚಾಲಕರ ಪರವಾನಗಿಯನ್ನು ಅಮಾನತುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ನಿನ್ನೆ ಸಂಜೆಯ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಹಾರಾಷ್ಟ್ರದಿಂದ ಆಗಮಿಸುವ ರೈಲುಗಳ ಬಗ್ಗೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಕೇರಳಕ್ಕೆ ಯಾವುದೇ ಮಾಹಿತಿ ನೀಡದೆ ರೈಲು ಗಾಡಿಗಳನ್ನು ಕಳಿಸುತ್ತಿರುವುದು ಮುನ್ನೆಚ್ಚರಿಕಾ ಕ್ರಮಗಳಿಗೆ ತೊಡಕಾಗುತ್ತಿದೆ. ಈ ಬಗ್ಗೆ ಸಚಿವರಿಗೆ ಮಾಹಿತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಕೇರಳಕ್ಕೆ ಬಾರದಂತೆ ಯಾರನ್ನೂ ತಡೆಯುವುದಿಲ್ಲ ಎಂಬ ರಾಜ್ಯದ ನಿರ್ಧಾರ ಅಚಲವಾದುದು. ರೈಲ್ವೆ ಇಲಾಖೆಯ ಬೇಜವಾಬ್ದಾರಿ ಕ್ರಮವು ರಾಜ್ಯದ ಕೋವಿಡ್ ನಿಯಂತ್ರಣಗಳನ್ನು ಹಾಳು ಮಾಡುತ್ತಿವೆ ಎಂದು ಮುಖ್ಯಮಂತ್ರಿ ಹೇಳಿದರು. ಈ ಬಗ್ಗೆ ಪ್ರಧಾನಿಗೆ ಪತ್ರ ಬರೆಯಲಾಗಿದೆ ಎಂದಿರುವರು. ಇದಕ್ಕೂ ಮೊದಲು ಕೇಂದ್ರ ರೈಲ್ವೇ ಸಚಿವರು ನೀಡಿರುವ ಹೇಳಿಕೆಯಲ್ಲಿ ವಿವಿಧ ರಾಜ್ಯಗಳಲ್ಲಿ ಸಿಲುಕಿರುವವರನ್ನು ಅವರವರ ರಾಜ್ಯಗಳಿಗೆ ಕರೆದೊಯ್ಯಲಷ್ಟೇ ಇಲಾಖೆಗೆ ಸಾಧ್ಯ ಎಂಬ ಹೇಳೀಕೆಗೆ ಪಿಣರಾಯಿ ವಿಜಯನ್ ಅವರು ಕಠಿಣ ಉತ್ತರಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ.


