ಕುಂಬಳೆ: ಧರ್ಮತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಅಧ್ಯಾಪಕ, ಚೆಕ್ಕೆ ಗೋವಿಂದ ಭಟ್(83) ಅಲ್ಪ ಕಾಲದ ಅನಾರೋಗ್ಯದಿಂದ ಭಾನುವಾರ ಪಾವೂರು ಬಳಿಯ ಸ್ವಗೃಹದಲ್ಲಿ ನಿಧನ ಹೊಂದಿದರು. ವಿದ್ಯಾಭ್ಯಾಸದಲ್ಲಿ ಎಲ್ಲರೂ ಮುಂದೆ ಬರಬೇಕೆಂಬ ಧ್ಯೇಯದೊಂದಿಗೆ ಅವರು 1976 ರಲ್ಲಿ ಸಹೋದ್ಯೋಗಿಗಳ,ಊರವರ ಸಹಕಾರದೊಂದಿಗೆ ಧರ್ಮತ್ತಢ್ಕದಲ್ಲಿ ಯುವಕ ಸಂಘ ಗ್ರಂಥಾಲಯ ಮತ್ತು ವಾಚನಾಲಯ ಸ್ಥಾಪನೆಗೆ ಕಾರಣರಾದರು. ಸಂಸ್ಥೆಯ ಕಾರ್ಯದರ್ಶಿಯಾಗಿ,ಆಧ್ಯಕ್ಷರಾಗಿ ಗ್ರಂಥಾಲಯದ ಸರ್ವತೋಮುಖ ಅಭಿವೃದ್ದಿಗಾಗಿ ದುಡಿದಿದ್ದರು. ಗೋವಿಂದ ಭಟ್ ಅವರು ರಾಜಕೀಯವಾಗಿ ಪುತ್ತಿಗೆ ಮಂಡಲ ಕಾಂಗ್ರೆಸ್ ಉಪಾಧ್ಯಕ್ಷರಾಗಿ,ಕುಂಬಳೆ ಮಂಡಲ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಯಿಸಿದ್ದರು. ಅಂಗಡಿಮೊಗರು ಸೇವಾಸಹಕಾರಿ ಬ್ಯಾಂಕ್ ನ ನಿರ್ದೇಶಕರಾಗಿ, ಎಣ್ಮಕಜೆ-ಪುತ್ತಿಗೆ ಅರ್ಬನ್ ಕೋ-ಓಪರೇಟಿವ್ ಬ್ಯಾಂಕ್ ಸೀತಾಂಗೋಳಿಯ ನಿರ್ದೇಶಕರಾಗಿಯೂ ಸೇವೆಯನ್ನು ಸಲ್ಲಿಸಿದ್ದರು. ಮೃತರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಚೆಕ್ಕೆ ಗೋವಿಂದ ಭಟ್ ನಿಧನ
0
ಮೇ 26, 2020