ಬದಿಯಡ್ಕ: ಕೃಷಿಕ ಪಳ್ಳತ್ತಡ್ಕ ನಿವಾಸಿ ಚಿರಿಯಂಡ ಬೆಳ್ಚಪ್ಪಾಡ (98) ನಿಧನರಾದರು. ಕೆಲವು ವರ್ಷಗಳ ಮೊದಲು ಅವರು ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಸಮಿತಿಯ ಸದಸ್ಯರಾಗಿದ್ದರು. ಮೃತರು ಪತ್ರಕರ್ತ ಗಂಗಾಧರ ಪಳ್ಳತ್ತಡ್ಕ ಸಹಿತ ಐವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.