HEALTH TIPS

ಸಂಯೋಜಿತ ಕೃಷಿಗೆ ಪ್ರೋತ್ಸಾಹ - ಅರ್ಜಿ ಆಹ್ವಾನ


            ಬದಿಯಡ್ಕ: ಬದಿಯಡ್ಕ ಕೃಷಿಭವನದಲ್ಲ ಸಂಯೋಜಿತ ಕೃಷಿ ಯೋಜನೆಯ ಪ್ರೋತ್ಸಾಹಕ್ಕೆ ಧನಸಹಾಯವನ್ನು ನೀಡಲಾಗುವುದು. ಪ್ರಸ್ತುತ ಇದೇ ರೀತಿಯ ಕೃಷಿಯಲ್ಲಿ ತೊಡಗಿಕೊಂಡವರು ಹಾಗೂ ಅದನ್ನು ವಿಸ್ತರಿಸಲು ಆಗ್ರಹಿಸುತ್ತಿರುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೃಷಿ ಬೆಳೆಯೊಂದಿಗೆ ಮೃಗ ಪರಿಪಾಲನೆ, ಕೋಳಿ, ಬಾತುಕೋಳಿ, ಆಡು, ಹಸು, ಮೀನು, ಜೇನು, ಅಣಬೆ ಕೃಷಿಗಳನ್ನು ಮಾಡಿ ಕಡಿಮೆ ಸಣ್ಣ ಸ್ಥಳದಲ್ಲಿ ಹೆಚ್ಚಿನ  ಆದಾಯವನ್ನು ಗಳಿಸುವುದು ಸಂಯೋಜಿತ ಕೃಷಿ ರೀತಿಯಾಗಿದೆ. ಒಬ್ಬರು ಕಡಿಮೆಯೆಂದರೆ 5 ತರದ ಕೃಷಿಯನ್ನು ಮಾಡಿರಬೇಕು. ಪ್ರಸ್ತುತ ಕೃಷಿ ಮಾಡುತ್ತಿರುವವರೂ ಅರ್ಜಿ ಸಲ್ಲಿಸಬಹುದು. 30000 ರೂಪಾಯಿಯಿಂದ 50,000 ರೂಪಾಯಿ ತನಕ ಧನಸಹಾಯವಿದೆ. ಕಡಿಮೆಯೆಂದರೆ 10 ಸೆಂಟ್ಸ್ ವಿಸ್ತೀರ್ಣದಲ್ಲಿ ಸಂಯೋಜಿತ ಕೃಷಿ ಇರಬೇಕು. ಬದಿಯಡ್ಕ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 19 ಅರ್ಜಿಗಳನ್ನು ಸ್ವೀಕರಿಸಲಾಗುವುದು. ಹೆಚ್ಚು ಅರ್ಜಿಗಳು ಬಂದಲ್ಲಿ ಆಯ್ಕೆಮಾಡಲಾಗುವುದು. ಈ ಮೊದಲು ಅರ್ಜಿ ಸಲ್ಲಿಸಿದವರು ಪುನಃ ಅರ್ಜಿ ಸಲ್ಲಿಸಬೇಕಾಗಿಲ್ಲ. ಅರ್ಜಿಗಳು ಜೂನ್ 2ರ ಮೊದಲು ಬದಿಯಡ್ಕ ಕೃಷಿಭವನಕ್ಕೆ ತಲುಪಿಸಬೇಕಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries