HEALTH TIPS

ಆಹಾರ ಸ್ವಾವಲಂಬನೆ- ಬೀಜ ಮತ್ತು ಗುದ್ದಲಿ ಯೋಜನೆ: ಸಮಾಲೋಚನೆ ಸಭೆ

 
          ಕಾಸರಗೋಡು: "ಬೀಜ ಮತ್ತು ಗುದ್ದಲಿ" ಯೋಜನೆಯ ಮೂಲಕ ನೀಲೇಶ್ವರ ಬೀಜೋತ್ಪಾದನೆ ನಗರವಾಗಿ ಮಾರ್ಪಾಟಿಗೆ ಸಿದ್ಧಗೊಳ್ಳುತ್ತಿದೆ.
           ಪಡನ್ನಕ್ಕಾಡ್ ಕೃಷಿ ಕಾಲೇಜಿನ ಸಹಭಾಗಿತ್ವದೊಂದಿಗೆ ಕೋವಿಡ್ ನಂತರದ ಅವಧಿಯಲ್ಲಿ ಆಹಾರ ಸ್ವಾವಲಂಬನೆ ಉದ್ದೇಶದಿಂದ "ಸುಭಿಕ್ಷ ಕೇರಳಂ" ಯೋಜನೆಯ ಅಗವಾಗಿ ವೈವಿಧ್ಯಮಯ ಕೃಷಿಕ ಕ್ರಿಯಾ ಯೋಜನೆಗಳಿಗೆ ನೀಲೇಶ್ವರ ನಗರಸಭೆ ರೂಪುನೀಡಲಿದೆ.
          ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಸಮಕ್ಷದಲ್ಲಿ ನಗರಸಭೆ, ಕೃಷಿ ಕಾಲೇಜು, ಕೃಷಿ ಸಹಕಾರಿ ಸಂಸ್ಥೆಗಳು, ಕೃಷಿ ಇಲಾಖೆ, ಕೃಷಿ ಸಂಘಟನೆಗಳು ಮೊದಲಾದವುಗಳ ಪ್ರತಿನಿಧಿಗಳ ಸಮಾಲೋಚನೆ ಸಭೆಯಲ್ಲಿ "ಬೀಜ ಮತ್ತು ಗುದ್ದಲಿ" ಯೋಜನೆ ರಚಿಸಲಾಗಿದೆ. ಪಡನ್ನಕ್ಕಾಡ್ ಕೃಷಿ ಕಾಲೇಜಿನ ಸಹಕಾರದೊಂದಿಗೆ ವಿವಿಧ ರೀತಿಯ ಬೀಜಗಳನ್ನು ಉತ್ಪಾದಿಸಿ ಕೃಷಿಕರಿಗೆ ವಿತರಿಸುವುದು ಇಲ್ಲಿ ಪ್ರಧಾನ ಉದ್ದೇಶಗಳಲ್ಲಿ ಒಂದು. ಇದಕ್ಕಾಗಿ ಕರುವಾಚ್ಚೇರಿಯಲ್ಲಿರುವ ಕೃಷಿ ಕಾಲೇಜಿನ 5 ಎಕ್ರೆ ಜಾಗದಲ್ಲಿ ಕಾಲೇಜಿನ ಕೃಷಿ ವಿಜ್ಞಾನಿಗ ತಾಂತ್ರಿಕ ಸಹಾಯಗಳೊಂದಿಗೆ ಬೀಜ ಮತ್ತು ನೇಜಿ ವಸ್ತುಗಳನ್ನು ಉತ್ಪಾದಿಸಲಾಗುವುದು. ವಿವಿಧ ವಾರ್ಡ್ ಗಳ ಕೃಷಿಕ ಕ್ರಿಯಾ ಸೇನೆಗಳಿಗೆ, ಸ್ಥಳೀಯ ಕರಷಿಕರಿಗೆ ವೈಜ್ಞಾನಿಕ ಪರಿಣತರ ಸಹಾಯ ಒದಗಿಸಲಾಗುವುದು. ಈ ಮೂಲಕ ಉತ್ಪಾದಿಸುವ ಬೀಜ ಗಳನ್ನು ನೀಲೇಶ್ವರದ ಕೃಷಿಕರಿಗೆ ಮತ್ತು ಉಳಿದವನ್ನು ಇತರ ಪ್ರದೇಶಗಳ ಕೃಷಿಕರಿಗೆ ವಿತರಿಸುವ ನಿಟ್ಟಿನಲ್ಲಿ ಕೃಷಿ ಕಾಲೇಜು ಬೆಲೆ ನೀಡಿ ಖರೀದಿಸಲಿದೆ.
      ನೂತನ ಸಮಾಜ ನಿರ್ಮಾಣಕ್ಕೆ ಯುವ ಕೃಷಿಕ ಸೇನೆ ರಚಿಸಲಾಗುವುದು. 15ರಿಂದ 40 ವರ್ಷದ ನಡುವಿನ ವಯೋಮಾನದ ಮಂದಿಯನ್ನು ಕೃಷಿಯತ್ತ ಆಕರ್ಷಿಸುವ ಉದ್ದೇಶದಿಂದ ಈ ಸೇನೆ ರಚನೆಗೊಳ್ಳಲಿದೆ. ನೀಲೇಶ್ವರದ ವಿವಿಧ ಕೃಷಿಕ ಸಹಕಾರಿ ಸಂಸ್ಥೆಗಳು ಈ ನಿಟ್ಟಿನಲ್ಲಿ ಮುಂದೆ ಬಂದಿವೆ. "ಗ್ರೀನ್ ರಾಯಲ್ಟಿ" ಎಂಬ ಯೋಜನೆಯನ್ನೂ ನೀಲೇಶ್ವರ ನಗರಸಭೆ ಈ ನಿಟ್ಟಿನಲ್ಲಿ ಬಜೆಟ್ ನಲ್ಲಿ ಅಳವಡಿಸಿದೆ. ನಗರಸಭೆ ವ್ಯಾಪ್ತಿಯ ಎಲ್ಲ ಮನೆಗಳಿಗೂ ತರಕಾರಿ ಬೀಜಗಳ ಪೆÇಟ್ಟಣಗಳನ್ನು ವಿತರಿಸಲಾಗಿದೆ. ಟಿಷ್ಯೂ ಕಲ್ಚರ್ ಬಾಳೆಗೆಡ್ಡೆ ವಿತರಣೆಯನ್ನೂ ಆರಂಭಿಸಲಾಗಿದೆ. ಅಯ್ಯಂಗಾಳಿ ನೌಕರಿ ಕಾತರಿ ಯೋಜನೆಯ ವ್ಯಾಪ್ತಿಯಲ್ಲಿ ಕೃಷಿಕರಿಗೆ ನೆಲಹದಗೊಳಿಸಲು, ಬಂಜರು ಜಾಗ ಕೃಷಿಗೆ ಅನುಯೋಜ್ಯಗೊಳಿಸಲು 52.5 ಲಕ್ಷ ರೂ. ಕ್ರಿಯಾ ಯೋಜನೆಗೆ  ಕಾರ್ಮಿಕ ಬಜೆಟ್ ನಲ್ಲಿ  ಮಂಜೂರಾತಿ ಪಡೆದಿದೆ. ಕಳೆದ 4ವರ್ಷಗಳಿಂದ ಯೋಜನೆಯ ಕಂತುಗಳನ್ನು ಶೇ 100 ರೂಪದಲ್ಲಿ ವ್ಯಯಮಾಡಲು ಸಾಧ್ಯವಾಗಿದೆ ಎಂದು ನೀಲೇಶ್ವರ ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್ ತಿಳಿಸಿದರು.
     ಸಮಾಲೋಚನೆ ಸಭೆಯನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್ ಅಧ್ಯಕ್ಷತೆ ವಹಿಸಿದ್ದರು. ಪಡನ್ನಕ್ಕಾಡ್ ಕೃಷಿ ಕಾಲೇಜಿನ ಅಸೋಸಿಯೇಟ್ ಡೀನ್ ಡಾ.ಪಿ.ಆರ್.ಸುರೇಶ್, ನಗರಸಭೆ ಉಪಾಧ್ಯಕ್ಷೆ ವಿ.ಗೌರಿ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಎ.ಕೆ.ಕುಂuಟಿಜeಜಿiಟಿeಜಕೃಷ್ಣನ್, ಪಿ.ಪಿ.ಮುಹಮ್ಮದ್ ರಾಫಿ, ಸದಸ್ಯರಾದ ಪಿ.ಭಾರ್ಗವಿ, ಕೆ.ವಿ.ಸುಧಾಕರನ್, ಪಿ.ವಿ.ಗೀತಾ, ಸಿ.ಮಾಧವಿ, ಕೃಷಿ ಅಧಿಕಾರಿ ಕೆ.ಎ.ಷಿಜೋ, ಕೃಷಿ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಾದ ಎಂ.ರಾಧಾಕೃಷ್ಣನ್ ನಾಯರ್, ಪಿ.ವಿ.ಸತೀಶನ್, ರಮೇಶನ್ ಕರುವಾಚ್ಚೇರಿ, ಕೃಷಿ ಸಂಘಟನೆಗಳ ಪ್ರತಿನಿಧಿಗಳಾದ ಎಂ.ಅಸೀನಾರ್, ಪಿ.ಜಿ.ಗಂಗಾಧರನ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries