HEALTH TIPS

ಕೋವಿಡ್ ಬಾಧಿಸಿದ ಸಿಪಿಎಂ ನಾಯಕನ ಸಂಪರ್ಕ ಪಟ್ಟಿಯ ಬಗ್ಗೆ ಆತಂಕ


          ಉಪ್ಪಳ: ಜಿಲ್ಲೆಯಲ್ಲಿ ಕೋವಿಡ್ ದೃಢಗೊಂಡ ಪೈವಳಿಕೆ ಚಿಪ್ಪಾರು ನಿವಾಸಿ ಸಿಪಿಎಂ ಕಾರ್ಯಕರ್ತರ ಸಂಪರ್ಕ ಪಟ್ಟಿ ಆತಂಕ ಮೂಡಿಸಿದೆ. ಅವರ ಸಂಪರ್ಕ ಪಟ್ಟಿಯಲ್ಲಿ ಸುಮಾರು 200 ಜನರು ಪರೀಕ್ಷೆಗೆ ಒಳಗಾದರು. ಪ್ರಸ್ತುತ ಸಿಪಿಎಂ ಮುಖಂಡ ಅಬ್ದುಲ್ ರಝಾಕ್ ಚಿಪ್ಪಾರು, ಅವರ ಪತ್ನಿ ಮತ್ತು ಎಂಟು ಮತ್ತು ಹನ್ನೊಂದು ವರ್ಷದ ಮಕ್ಕಳಿಗೆ ಕೋವಿಡ್ ದೃಢಪಟ್ಟಿದೆ. ಪೈವಳಿಕೆ ಗ್ರಾಮ ಪಂಚಾಯತಿ ಸದಸ್ಯರೂ ಆಗಿರುವ ಪತ್ನಿ ಪಂಚಾಯತಿ ಆಡಳಿತ ಮಂಡಳಿಯ ಸಭೆಯಲ್ಲಿ ಭಾಗವಹಿಸಿದ್ದರು.
         ಸಂಪರ್ಕ ಪಟ್ಟಿಯಲ್ಲಿ ಕಾಳಜಿ:
   ಪೈವಳಿಕೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಅಬ್ದುಲ್ ರಝಾಕ್ ಭಾಗಿಯಾಗಿದ್ದಾನೆ ಎಂದು ವರದಿಯಾಗಿದೆ. ಕಾರ್ಯಕ್ರಮಕ್ಕೆ ಹಾಜರಾದ ಸುಮಾರು 30 ಜನರು ಇದೀಗ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಅಲ್ಲದೆ ಇವರು ಕ್ಯಾನ್ಸರ್ ರೋಗಿಯೊಬ್ಬರೊಂದಿಗೆ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಕ್ಯಾನ್ಸರ್ ವಾರ್ಡ್‍ಗೆ ಭೇಟಿ ನೀಡಿದ್ದರು. ಜೊತೆಗೆ ಮೂರು ದಿನ ಸ್ಥಳೀಯ ಸಮುದಾಯ ಅಡುಗೆಮನೆಗೆ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ. ಮೇ 4 ರಿಂದ, ಪಕ್ಷದ ಅನೇಕ ಕಾರ್ಯಕರ್ತರು, ಮುಖಂಡರು ಮತ್ತು ಜನರ ಸಂಪರ್ಕ ನಡೆಸಿದ್ದರು. ಆದ್ದರಿಂದ ಸಂಪರ್ಕ ಪಟ್ಟಿಯಲ್ಲಿರುವವರನ್ನು ಕಂಡುಹಿಡಿಯುವುದು ಸಂಕೀರ್ಣವಾಗಿದೆ.
             ಮಹಾರಾಷ್ಟ್ರದ ಸಂಬಂದಿಯಿಂದ ರೋಗ:ü
    ಮೇ 4 ರಂದು ಮಹಾರಾಷ್ಟ್ರದಿಂದ ಬಂದ ಸಂಬಂಧಿ ಮತ್ತು ಅವರ ಪತ್ನಿಯನ್ನು ತಲಪಾಡಿಯಿಂದ ಮನೆಗೆ ರಝಾಕ್ ಅವರು ಪತ್ನಿ ಹಾಗೂ ಮಕ್ಕಳೊಂದಿಗೆ ತೆರಳಿ ಕರೆತಂದಿದ್ದರು.  ಅವರ 11 ಮತ್ತು 8 ವರ್ಷದ ಮಕ್ಕಳಿಗೂ ರೋಗ ಪತ್ತೆಯಾಗಿದೆ. ನಾಲ್ವರನ್ನು ಉಕ್ಕಿನಡ್ಕದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದೆ. ದಂಪತಿಗಳಿಗೆ ಎರಡು ವರ್ಷ ಹರೆಯದ ಪುತ್ರನೂ ಇದ್ದು ಮಗುವಿನ ಪರೀಕ್ಷಾ ಫಲಿತಾಂಶವು ಋಣಾತ್ಮಕವಾಗಿತ್ತು.
          ನರ್ಸ್‍ಗೆ ಕೋವಿಡ್:
     ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಯನ್ನು ಮೂರು ಬಾರಿ ಭೇಟಿ ಮಾಡಿರುವ ಸಿಪಿಎಂ ನಾಯಕ ಅಬ್ದುಲ್ ರಝಾಕ್ ಅವರಿಗೆ ಕೋವಿಡ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರು ಸಂದರ್ಶನ ನೀಡಿದ ಕ್ಯಾನ್ಸರ್ ವಾರ್ಡ್, ಲ್ಯಾಬ್ ಮತ್ತು ಎಕ್ಸರೇ ವಿಭಾಗದ ನೌಕರರನ್ನು ಜಿಲ್ಲಾ ವೈದ್ಯಾಧಿಕಾರಿಗಳ ಆದೇಶದ ಮೇರೆಗೆ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಕೋವಿದ್ ರೋಗನಿರ್ಣಯ ಮಾಡಿದ ಏಳು ದಾದಿಯರನ್ನು ಸೂಕ್ಷ್ಮವಾಗಿ ಗಮನಿಸಲು ಕಾಸರಗೋಡು ಜನರಲ್ ಆಸ್ಪತ್ರೆ ಸೂಚಿಸಿದೆ.
             ಕೋವಿಡ್ ಪ್ಯಾನಿಕ್ ನಲ್ಲಿ ಕಾಸಗೋಡು:
      ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ರೋಗಿಗಳು ಕಾಸರಗೋಡು ಜಿಲ್ಲೆಯವರು. ಕೊನೆಯ ರೋಗಿಯು ಚೇತರಿಸಿಕೊಂಡಾಗ ಜಿಲ್ಲೆಯು ನಿಟ್ಟುಸಿರು ಬಿಟ್ಟಿತ್ತು. ಗುರುವಾರ 10 ಜನರಿಗೆ ಈ ರೋಗ ಪತ್ತೆಯಾಗಿರುವುದು ಮತ್ತೆ ಆತಂಕ ಮೂಡಿಸಿದೆ.
                                                          (ಸಾಂಧರ್ಬಿಕ ಚಿತ್ರ)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries