ಉಪ್ಪಳ: ಸಿಗ್ನಲ್ ಲಭ್ಯವಾಗದೆ ಒಂದಷ್ಟು ಹೊತ್ತು ನಿಲ್ಲಬೇಕಾಗಿಬಂದ ರೈಲು ಗಾಡಿಯಿಂದ ನಾಲ್ವರು ಪ್ರಯಾಣಿಕರು ಹೊರಗೋಡಲು ಯತ್ನಿಸಿದ್ದು ಅವರನ್ನು ಬಳಿಕ ಪೋಲೀಸರು ಬಂಧಿಸಿ ಸರ್ಕಾರಿ ಕ್ವಾರಂಟೈನ್ ಗೆ ದಾಖಲಿಸಿದ ಘಟನೆ ಶನಿವಾರ ಮಧ್ಯಾಹ್ನ ಉಪ್ಪಳ ರೈಲು ನಿಲ್ದಾಣದಲ್ಲಿ ನಡೆದು ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಶುಕ್ರವಾರ ಮೈಂಬೈಯಿಂದ ಹೊರಟಿದ್ದ ವಿಶೇಷ ರೈಲುಬಂಡಿಯಲ್ಲಿ 1600 ಪ್ರಯಾಣಿಕರಿದ್ದರು. ರೈಲುಗಾಡಿಗೆ ಕಣ್ಣೂರು ನಿಲ್ದಾಣದಲ್ಲಿ ನಿಲುಗಡೆ ಆದೇಶ ನೀಡಲಾಗಿತ್ತು. ಆದರೆ ಕಾಸರಗೋಡಲ್ಲೂ ನಿಲುಗಡೆ ನೀಡಬೇಕೆಂಬ ಬಗ್ಗೆ ಮುಂಬೈಯಲ್ಲೇ ಬೇಡಿಕೆಗಳು ಕೇಳಿಬಂದಿದ್ದು, ಅದು ಶನಿವಾರ ಬೆಳಿಗ್ಗಿನವರೆಗೂ ಪರಿಹಾರವಾಗದ್ದರಿಂದ ಉಪ್ಪಳ ತಲಪುತ್ತಿದ್ದಂತೆ ಮುಂದಿನ ನಿಲುಗಡೆ ಕೇಂದ್ರದ ನಿಖರತೆಗಾಗಿ ಒಂದಷ್ಟು ಹೊತ್ತು ಉಪ್ಪಳ ರೈಲು ನಿಲ್ದಾಣದಲ್ಲಿ ನಿಲ್ಲಿಸಬೇಕಾಯಿತು.
ಕಣ್ಣೂರು ನಿಲ್ದಾಣದ ಬಳಿಕ ತ್ರಿಶೂರ್ ಮತ್ತು ಶೋರ್ನೂರ್ ಎರ್ನಾಕುಲಂ ತಿರುವನಂತಪುರಂ ನಿಲ್ದಾಣಗಳಲ್ಲಿ ನಿಲುಗಡೆಗೆ ಸೂಚಿಸಲಾಗಿತ್ತು. ಉಪ್ಪಳ ರೈಲು ನಿಲ್ದಾಣದಲ್ಲಿ ರೈಲು ನಿಂತ ವೇಳೆ ನಾಲ್ವರು ಪ್ರಯಾಣಿಕರು ಏಕಾಏಕಿ ರೈಲು ಗಾಡಿಯಿಂದ ಧುಮುಕಿ ಓಟಕ್ಕಿತ್ತರು. ಈ ಸನ್ನಿವೇಶವನ್ನು ಗಮನಿಸಿದ ಪ್ರತ್ಯಕ್ಷದರ್ಶಿಯೊಬ್ಬರು ತಕ್ಷಣ ಪೆÇಲೀಸರಿಗೆ ಮಾಹಿತಿ ನೀಡಿದರು. ಬಳಿಕ ಕಾಸರಗೋಡು ಡಿವೈಎಸ್‍ಪಿ ಬಾಲಕೃಷ್ಣನ್ ನಾಯರ್ ಅವರ ನೇತೃತ್ವದಲ್ಲಿ ತನಿಖೆ ತೀವ್ರಗೊಳಿಸಲಾಯಿತು.
ಕುಂಬಳೆ ಕೊೈಯಿಪ್ಪಾಡಿಯ ಶಾಜಿ ಮತ್ತು ಅವರ ಕುಟುಂಬ ರೈಲಿನಿಂದ ಓಟಕ್ಕಿತ್ತ ತಂಡವಾಗಿದ್ದು ಕುಂಬಳೆಯಲ್ಲಿ ಮನೆಗೆ ತೆರಳಲು ಧಾವಂತದಲ್ಲಿದ್ದ ಅವರನ್ನು ಪತ್ತೆಹಚ್ಚಲಾಯಿತು. ಬಳಿಕ ಅವರನ್ನು ಸರ್ಕಾರಿ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಸರ್ಕಾರದ ನಿರ್ದೇಶನವನ್ನು ಗಾಳಿಗೆ ತೂರಿ ರೈಲಿಳಿದಿದ್ದ ಶಾಜಿ ಮತ್ತು ಅವರ ಕುಟುಂಬದ ಇತರ ಮೂವರ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ಇವರ ಪಲಾಯನಕ್ಕೆ ವಾಹನವೊದಗಿಸಿ ಸಹಾಯಮಾಡಿದ ವಾಮನವೊಂದರ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉಪ್ಪಳದಲ್ಲಿ ರೈಲು ನಿಂತಾಗಲಷ್ಟೇ ತನಗೆ ಕಾಸರಗೋಡಿನಲ್ಲಿ ರೈಲು ನಿಲ್ಲುವುದಿಲ್ಲ ಎಂದು ತಿಳಿದುಬಂತು. ಈ ಕಾರಣದಿಂದ ಅಲ್ಲಿಂದ ಊರಿಗೆ ತೆರಳಲು ಹೊರಟಿದ್ದೆವೆಂದು ಶಾಜಿ ಪೆÇಲೀಸರಿಗೆ ತಿಳಿಸಿದ್ದಾನೆ. ಏತನ್ಮಧ್ಯೆ, ಕಣ್ಣೂರು ನಿಲ್ದಾಣದಲ್ಲಿ ಸುಮಾರು 400 ಜನರು ರೈಲಿನಿಂದ ಇಳಿದಿರುವರು. ನಾಲ್ಕು ಜಿಲ್ಲೆಗಳ ಪ್ರಯಾಣಿಕರು ಕಣ್ಣೂರಿನಲ್ಲಿ ಇಳಿದಿದ್ದಾರೆ ತಿಳಿಯಲಾಗಿದೆ. ಅವರನ್ನು 15 ಪ್ರತ್ಯೇಕ ಬಸ್‍ಗಳಲ್ಲಿ ಕ್ವಾರಂಟೈನ್ ಕೇಂದ್ರಗಳಿಗೆ ಕರೆದೊಯ್ಯಲಾಯಿತು.


