HEALTH TIPS

ಕೋವಿಡ್ ಲಾಕ್ ಡೌನ್-ವಿಶಿಷ್ಟ ಉಪಕ್ರಮಗಳೊಂದಿಗೆ ಸ್ಥಗಿತಗೊಂಡಿದ್ದ ಕೇರಳ ಎಸ್ಸೆಸೆಲ್ಸಿ ಹೈಯರ್ ಸೆಕೆಂಡರಿ ಪರೀಕ್ಷೆ ಆರಂಭ


          ಕಾಸರಗೋಡು: ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಎಸ್.ಎಸ್.ಎಲ್.ಸಿ., ವೊಕೇಶನಲ್ ಹೈಯರ್ ಸೆಕೆಂಡರಿ ಪರೀಕ್ಷೆಗಳು ಮಂಗಳವಾರ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ನಿರ್ದೇಶನಗಳೊಂದಿಗೆ ಆರಂಭಗೊಂಡಿತು.
          ಶಾಲಾ ಮಕ್ಕಳನ್ನು ಪರೀಕ್ಷಾ ಕೇಂದ್ರಗಳ ಹೊರಾಂಗಣದಲ್ಲಿ ಸ್ಯಾನಿಟೈಸರ್ ಬಳಸಿ ಕೈ ಶುಚೀಕರಿಸಿದ ನಂತರ,  ಪ್ರತಿ ವಿದ್ಯಾರ್ಥಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ದೇಹದ ಉಷ್ಣತೆ ಪರಿಶೋಧಿಸಿ ಕೊಠಡಿಯೊಳಗೆ ಬಿಡಲಾಯಿತು. ಸಾಮಾಜಿಕ ಅಂತರ ಪಾಲನೆಯೊಂದಿಗೆ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಕುಳಿತುಕೊಳ್ಳಿಸಲಾಗಿತ್ತು. ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿತ್ತು.
      ಬೆಳಗ್ಗೆ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲಾ ಪರೀಕ್ಷೆ ಜಿಲ್ಲೆಯ 22ಕೇಂದ್ರಗಳಲ್ಲಿ ನಡೆದಿದ್ದು, ಇದರಲ್ಲಿ 2434ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಮಧ್ಯಾಹ್ನ ನಡೆದ ಎಸ್ಸೆಸೆಲ್ಸಿ  ಪರೀಕ್ಷೆಯಲ್ಲಿ 19ಕೇಂದ್ರಗಳಲ್ಲಿ 10760ಮಂದಿ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, 1738ಮಂದಿ ಪರೀಕ್ಷೆ ಬರೆದಿದ್ದಾರೆ. ಕರ್ನಾಟಕದಿಂದ ಆಗಮಿಸಬೇಕಾಗಿದ್ದ 32ಮಂದಿ ಪರೀಕ್ಷೆಗೆ ಹಾಜರಾಗಿರಲಿಲ್ಲ. ಮಂಗಳವಾರ ಮಧ್ಯಾಹ್ನ ವರೆಗೆ ಎಸ್ಸೆಸೆಲ್ಸಿ ಹಾಗೂ ಹೈಯರ್ ಸೆಕೆಂಡರಿಯ 246ಮಂದಿ ವಿದ್ಯಾರ್ಥಿಗಳು ಕರ್ನಾಟಕದಿಂದ ತಲಪ್ಪಾಡಿ ಗಡಿ ಮೂಲಕ ಜಿಲ್ಲೆಗೆ ಆಗಮಿಸಿದ್ದರು.
               ಪ್ರತ್ಯೇಕ ಕ್ವಾರಂಟೈನ್:
      ಕರ್ನಾಟಕದಲ್ಲಿ ಕ್ವಾರಂಟೈನ್ ಹೊಂದಿದ ಮನೆಗಳಿಂದ ಆಗಮಿಸಿದವರನ್ನು ಕೊಠಡಿಯೊಳಗೆ ಪ್ರತ್ಯೇಕವಾಗಿರಿಸಿ ಪರೀಕ್ಷೆ ನಡೆಸಲಾಗಿದೆ. ಉಳಿದವರನ್ನು ಸಾಮಾಜಿಕ ಅಂತರ ಪಾಲನೆಯೊಂದಿಗೆ ಪರೀಕ್ಷಾ ಕೊಠಡಿಗಳಲ್ಲಿರಿಸಲಾಗಿತ್ತು. ನಂತರ ಇವರನ್ನು ಅವರ ಮನೆ, ಹಾಸ್ಟೆಲ್ ಅಥವಾ ಶಾಲೆಗಳಲ್ಲಿ ಪ್ರತ್ಯೇಕ ಕ್ವಾರಂಟೈನ್ನಲ್ಲಿರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಎಸ್ಸೆಸೆಲ್ಸಿ, ಹೈಯರ್ ಸೆಕೆಂಡರಿ, ವೊಕೇಶನಲ್ ಹೈಯರ್ ಸೆಕೆಂಡರಿ ಒಳಗೊಂಡಂತೆ 53344ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ. ಎಸ್ಸೆಸೆಲ್ಸಿಗೆ 153ಕೇಂದ್ರಗಳಲ್ಲಿ 19630, ಒಟ್ಟು 106 ಕೇಂದ್ರಗಳಲ್ಲಿ ಪ್ಲಸ್ ವನ್ ತರಗತಿಗೆ 16677, ಪ್ಲಸ್ ಟು ತರಗತಿಗೆ 17037, ವೊಕೇಶನಲ್ ಹೈರ್ ಸೆಕೆಂಡರಿ ಶಾಲೆಗೆ 2491ಮಂದಿ ಹೆಸರು ನೋಂದಾಯಿಸಿದವರಲ್ಲಿ ಒಳಗೊಂಡಿದ್ದಾರೆ. ಮೇ 30ರ ವರೆಗೆ ಪರೀಕ್ಷೆಗಳು ನಡೆಯಲಿದೆ.

       ಚಿತ್ರ ಮಾಹಿತಿ: 1-2: ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದ ಹೊರಾಂಗಣದಲ್ಲಿ ಸ್ಯಾನಿಟೈಸ್ ನಡೆಸಿದ ನಂತರ ತಾಪಮಾನ ತಪಾಸಣೆ ನಡೆಸಿ ತರಗತಿಯೊಳಗೆ ಬಿಡುತ್ತಿರುವುದು, 3: ಸಾಮಾಜಿಕ ಅಂತರ ಪಾಲನೆಯೊಂದಿಗೆ ಕೊಠಡಿಗಳಲ್ಲಿ ಪರೀಕ್ಷೆ ನಡೆಸುತ್ತಿರುವುದು, 4-5. ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಪರೀಕ್ಷೆ ಬರೆದು ಹೊರಬರುತ್ತಿರುವ ವಿದ್ಯಾರ್ಥಿಗಳು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries