ಕಾಸರಗೋಡು: ಹೈಯರ್ ಸೆಕೆಂಡರಿ ಪರೀಕ್ಷೆಗಳು ಮೇ 27ರಿಂದ ಆರಂಭಗೊಳ್ಳಲಿವೆ. ಈ ಪರೀಕ್ಷೆಗೆ ಹಾಜರಾಗಬೇಕಿರುವವರಲ್ಲಿ 204 ಮಂದಿ ಕರ್ನಾಟಕದಲ್ಲಿ ಉಳಿದುಕೊಂಡಿದ್ದಾರೆ. 30 ಮಂದಿ ಸ್ವಂತ ಹೊಣೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಆಗಿಸುವುದಾಗಿ ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ. ಈ ವರೆಗೆ 93 ಮಂದಿ ಮಕ್ಕಳು ತಲಪ್ಪಾಡಿ ಗಡಿ ಮೂಲಕ ಜಿಲ್ಲೆಗೆ ಆಗಮಿಸಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತಲಪುವುದರಿಂದ ತೊಡಗಿ ಉತ್ತರಪತ್ರಿಕೆಗಳ ಮೌಲ್ಯ ನಿರ್ಣಯ ವರೆಗೆ ಎಲ್ಲವಿಚಾರಗಳನ್ನೂ ಪ್ರಬಲ ಸುರಕ್ಷತೆಯೊಂದಿಗೆ ನಡೆಸಲು ಜಿಲ್ಲಾಡಳಿತೆ ಕ್ರಮ ಕೈಗೊಂಡಿದೆ. ತಲಪ್ಪಾಡಿ ಗಡಿ ವರೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಜಿಲ್ಲಾಡಳಿತ ಆಯಾ ಪರೀಕ್ಷಾ ಕೇಂದ್ರಗಳಿಗೆ ತಲಪಿಸಿದೆ.
ಜಿಲ್ಲಾಧಿಕಾರಿ ಅವಲೋಕನ:
ಪರೀಕ್ಷೆಯ ಚಟುವಟಿಕೆಗಳನ್ನು ಅವಲೋಕನ ನಡೆಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬುಅವರು ಕುಟ್ಟಮತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಭೇಟಿ ನೀಡಿದರು. ಕೋವಿಡ್ 19 ಹಿನ್ನೆಲೆಯಲ್ಲಿ ಹೆಚ್ಚುವರಿಜಾಗೃತಿಯೊಂದಿಗೆ ನಡೆಯುತ್ತಿರುವ ಪರೀಕ್ಷಾ ಚಟುವಟಿಕೆಗಳನ್ನು ಅವರು ಅವಲೋಕಿಸಿದರು. ಪರೀಕ್ಷಾರ್ಥಿಗಳೊಂದಿಗೆ ಅವರುಸಂವಾದ ನಡೆಸಿದರು. ಶಾಲಾ ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಎಂ.ರಾಜನ್, ಎಸ್.ಎಂ.ಸಿ. ಅಧ್ಯಕ್ಷ ವಯಲಿಲ್ ರಾಘವನ್, ಮಾತೃಸಂಘ ಅಧ್ಯಕ್ಷೆ ಪದ್ಮಾವತಿ ಟಿ.ಆರ್., ಪ್ರಾಂಶುಪಾಲೆ ಟಿ.ಸುಮತಿ, ಉಪಾಧ್ಯಕ್ಷ ಟಿ.ಜನಾರ್ದನನ್, ಸಿಬ್ಬಂದಿ ಕಾರ್ಯದರ್ಶಿಸಿ.ವಿ.ರವೀಂದ್ರನ್ ಮೊದಲಾವರು ಜತೆಗಿದ್ದರು. ಬಿ.ಆರ್.ಸಿ. ವತಿಯಿಂದ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಲಾಗಿದೆ.


