ತಿರುವನಂತಪುರ: ಕೋವಿಡ್ ಹಿನ್ನೆಲೆಯಲ್ಲಿ ನಿಂತುಹೋಗಿದ್ದ ರಾಜ್ಯದ ಮದ್ಯ ಮಾರಾಟ ವ್ಯವಸ್ಥೆಯನ್ನು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮರಳಿ ಬಳಕೆದಾರರಿಗೆ ತಲಪಿಸುವ ನಿಟ್ಟಿನಲ್ಲಿ ವರ್ಚುವಲ್ ಕ್ಯೂ ಆಪ್ ನ್ನು ಬೆವ್ಕೋ(ಕೇರಳ ಸ್ಟೇಟ್ ಬಿವರೇಜ್ ಕಾರ್ಪೋರೇಶನ್)ವನ್ನು ಗೂಗಲ್ ಅನುಮೋದಿಸಿದೆ. ಒಂದು ದಿನದೊಳಗೆ ವಾಟ್ಸಾಪ್ ಪ್ಲೇ ಸ್ಟೋರ್‍ನಲ್ಲಿ ಸಕ್ರಿಯವಾಗಲಿದೆ ಎಂದು ವರದಿಗಳು ತಿಳಿಸಿವೆ. ಇದರೊಂದಿಗೆ ಅಬಕಾರಿ ಇಲಾಖೆಯು ಮದ್ಯ ಮಾರಾಟಕ್ಕೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ಪ್ರಾರಂಭಿಸಿದೆ.
ವಾಟ್ಸಾಪ್ ಮೂಲಕ ಈ ವಾರ ಅಪ್ಲಿಕೇಶನ್ ಪ್ರಾರಂಭವಾಗಲಿದೆ ಎಂದು ವರದಿಗಳು ಸೂಚಿಸುತ್ತವೆ. ಕಳೆದ ಕೆಲವು ದಿನಗಳಿಂದ ಮದ್ಯ ಮಾಟಾಟಕ್ಕೆ ಸಂಬಂಧಿಸಿ ಕೋವಿಡ್ ನಿಬಂಧನೆಗಳಿಗೆ ಅನುಗುಣವಾಗಿ ಪ್ರಕ್ರಿಯೆಗಳನ್ನು ಆರಂಭಿಸುವಲ್ಲಿ ತಾಂತ್ರಿಕ ಸಮಸ್ಯೆಗಳ ಕಾರಣ ಸಾಧ್ಯವಾಗಿರಲಿಲ್ಲ. ಮಂಗಳವಾರ ಬೆಳಿಗ್ಗೆ ಗೂಗಲ್ ನಿಂದ ಅಧಿಕೃತ ಅನುಮತಿ ದೊರಕಿದ್ದರಿಂದ ಇನ್ನು ಮದ್ಯಪ್ರಿಯರು ಗಾಬರಿಯಾಗುವ ಅಗತ್ಯ ಇಲ್ಲವಾಗಿದೆ.
ಆಪ್ ಪ್ಲೇ ಸ್ಟೋರ್‍ಗೆ ಅಪ್‍ಲೋಡ್ ಆದ ತಕ್ಷಣ ಅಬಕಾರಿ ಸಚಿವರು ಇದನ್ನು ಪ್ರಕಟಿಸಿದರು. ಗೂಗಲ್ ನಿಂದ ಅನುಮೋದನೆ ಪಡೆದಿರುವುದರಿಂದ ಅಪ್ಲಿಕೇಶನ್ ಶೀಘ್ರದಲ್ಲೇ ಪ್ಲೇ ಸ್ಟೋರ್‍ನಲ್ಲಿ ಲಭ್ಯವಿರುತ್ತದೆ. ಹಾಗಿದ್ದಲ್ಲಿ, ಎರಡು ದಿನಗಳಲ್ಲಿ ಮದ್ಯ ವಿತರಣೆ ಕುರಿತು ಅಂತಿಮ ತೀರ್ಮಾನಕ್ಕೆ ಬರಬಹುದು ಎಂದು ಬೆವ್ಕೊ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ವಾರಗಳ ಹಿಂದೆ ಕೊಚ್ಚಿ ಮೂಲದ ಫೇರ್ ಕೋಡ್ ಕಂಪನಿ ನಿರ್ಮಿಸಿದ ಈ ಆಪ್ ನ್ನು ಸರ್ಕಾರ ಅಂಗೀಕರಿಸಿದ್ದರೂ ತಾಂತ್ರಿಕ ಸಮಸ್ಯೆಗಳಿಂದ ಸಕ್ರಿಯಗೊಂಡಿರಲಿಲ್ಲ. ಭದ್ರತಾ ಸಂಸ್ಥೆಗಳು ಸೂಚಿಸಿದ ಏಳು ನ್ಯೂನತೆಗಳನ್ನು ಪರಿಹರಿಸಿದ ಬಳಿಕ ಅಪ್ಲಿಕೇಶನ್ ನ್ನು ಅನುಮೋದನೆಗಾಗಿ ಗೂಗಲ್ ಪ್ಲೇ ಸ್ಟೋರ್‍ಗೆ ಕಳುಹಿಸಲಾಗಿತ್ತು.
ಒಬ್ಬ ವ್ಯಕ್ತಿಯು ಗರಿಷ್ಠ ಮೂರು ಲೀಟರ್ ಮದ್ಯವನ್ನು ಪಡೆಯಬಹುದು. ನಾಲ್ಕು ದಿನಗಳಿಗೊಮ್ಮೆ ಮಾತ್ರ ಮದ್ಯ ಸೇವನೆಯ ಮೇಲೆ ನಿಬರ್ಂಧಗಳಿವೆ. ಅಪ್ಲಿಕೇಶನ್‍ನ ಕಾರ್ಯಗಳು ಬಳಕೆದಾರರ ಪಿನ್ ಕೋಡ್ ಅನ್ನು ಅವಲಂಬಿಸಿರುತ್ತದೆ. ಸ್ವೀಕರಿಸಿದ ಇ-ಟಿಕೆಟ್ ನ್ನು ಮದ್ಯದಂಗಡಿಯಲ್ಲಿ ತಿಳಿಸುವ ವ್ಯವಸ್ಥೆ ಇರಲಿದೆ.


